ಶ್ರೀ ತುಳಜಾ ಮಹಾತ್ಮೆ
ಅಧ್ಯಾಯ ಒಂದು
ರಾಗ:ಸೌರಾಷ್ಟ್ರ ತಾಳ:ತಿವಿಡೆ
ಸಿರಿಯ ಸಹಿತಾಗಿರುವ ವೆಂಕಟಗಿರಿಯ ರಮಣನ
ಮರೆತು ಎಲ್ಲವನು||
ಚರಕೆರಗುವೆನು|| 1
ಧರೆಯೊಳಗವನ ಮೆಟ್ಟಿ ಹಾರುವ ಹಿರಿಯ ಕವಿಗಳಿಗೆಲ್ಲಾ ನಾನೇ
ಕಿರಿಯನೆಂದೆನಿಸಿ ಅವರನು ಮರೆಯದಲೆ ನೆನೆವೆ||
ಕಿರಿಯನಾದರೇನು? ನಾ ಈ ಧರೆಯೊಳಗೆ ಎಲ್ಯಿದ್ದರೇನು?
ಮರೆಯದಲೇ ಮಾಡುವರು ಗುರುಗಳು ಮಮತೆ ಎನ ಮೇಲೆ||2
ಕೇವಲಾನಂತಾದ್ರಿ ರಮಣನ ಭಾವ ತಿಳಿಸುವ ನಮ್ಮ ಗುರುಗಳು
ಭಾರ ಭಾವದಲ್ಲಿ ಪೇಳುವೇನು ತುಳುಜಾದೇವಿಯ ಮಹಿಮೆಯನು|| 3
ಪದ್ಯ
ಪೂರ್ವದಲಿ ಕೃತಯುಗ ಪೂರ್ವದಲ್ಲಿ| ದ್ವಿಜವಯ
ನೀರ್ವಕದ್ರುಮನೆಂದು ಊರ್ವಿಯಲ್ಲಿ ಪ್ರಖ್ಯಾತ ಸರ್ವದಾ
ಮಾಡುವನು ಸರ್ವರಿಗೆ ಸಮ್ಮತಪೂರ್ವಧರ್ಮವು ಭಕ್ತಿ
ಪೂರ್ವಕವಾಗಿ|| ಸರ್ವ ಸ್ತ್ರೀಯ ರೊಳಗ ಪೂರ್ವ ಸುಂದರಿಯಾಗಿ
ಇರ್ವಳಾತನ ಮಡದಿ ಊರ್ವಶಿಯ ಪೋಲುವಳು
ಊರ್ವಿಯಲಿ ಪತಿಸೇವೆ ಸರ್ವದಾ ಮಾಡುತಲೆ
ಇರ್ವಳಾತೆಯು ಮನಃ ಪೂರ್ವಕವಾಗಿ||1
ಆ ಕಾಂತನಿಂದಲ್ಲಿ ತಾಕೂಡಿ ತನ್ನ ಮನಕೆ ಬೇಕಾದ
ಸೌಖ್ಯದನೇಕ ವರ್ಷಗಳಲ್ಲಿ ಸ್ವೀಕಾರ ಮಾಡಿದಳು
ಶ್ರೀಕಾಂತನ ದಯದಿ ಆಕೆಯ ಹೆಸರುಂಟು ಅನಭೂತಿ
ಯಂತೆಂದು|| ಆ ಕರ್ದಮಾಖ್ಯ ದ್ವಿಜತಾಕಾಲದಿಂದ
ಭೂತೋಕವನು ಬಿಟ್ಟು ಪರಲೋಕಕೆ ಪೋಗುತಿರೆ
ಆಕೆ ಪತಿವುತೆಯು ಎಂಬಾಕೆ ಸಹಗಮನವೆಂಬ
ಸಹಗಮನೆಂಬೊ ಆಶಾರ್ಯ ಮಾಡುತಿರೆ| ಆ ಕಾಲದಲ್ಲಿ
ಆಯಿತಾಕಾಶವಾಣಿ||
ಪದ
ಬ್ಯಾಡ ಬ್ಯಾಡಮ್ಮ ಬ್ಯಾಡದು || ನೀ ಮಾಡೋಕಾರ್ಯ ಬ್ಯಾಡ||
ಬ್ಯಾಡು ಬ್ಯಾಡುಮ್ಮ ಕೇಳು ಮಾಡತಕ್ಕ ಕಾರ್ಯದೂರ ನೋಡಿ
ಮಾಡುಬೇಕು ಇಂಥ ಮೂಢ ಬುದ್ಧಿ ಮಾಡುವದು||ಪ
ಪತಿಯ ಸರಿಯು ಹಿತಕರಿಲ್ಲವು || ಪತಿವ್ರತೆಗೆ ತನ್ನ
ಪತಿಯ ಹೊರತು ಗತಿಯು ಇಲ್ಲವು || ಸುಳ್ಳಲ್ಲವು||
ಪತಿಯು ಇಲ್ಲದಿದ್ದರೇನು ಸುತರು ಸುಗುಣರುಂಟು ನಿನಗೆ
ಸುತರು ಇರಲು ಪತಿಯ ಕೂಡಿ ಗತಿಯಸಮ್ಮತವು ಅಲ್ಲ|| 1
ಪತಿಯ ಬಿಟ್ಟು ಸ್ಥಿತಿ ಅಧರ್ಮವೇ| ಆ ಸತಿಗೆ ತನ್ನ
ಪತಿಯ ಕೂಡೆ ಗತಿಯು ಧರ್ಮವೇ|| ಸತ್ಕರ್ಮವೇ||
ಪತಿಯ ಮ್ಯಾಲೆ ಸತಿಯು ಊಂಟು ಸತಿಗೆ ಸಮ್ಮತವು ಸತ್ಯ
ಪತಿಯಿಂದಲೇ ಪತಿಯಲೋಕ ಗತಿಯು ಪತಿವುಲೆಯೇ ನಿನಗೆ||2
ಮುಖ್ಯಮಾತು ನೀನು ಕೇಳಿದ್ದು|| ಗರ್ಭಿಣಿಯು ಮತ್ತು ಮಕ್ಕಳುಳ್ಳ
ಸ್ತ್ರೀಯು ಮಾಳ್ಪುದು || ಧರ್ಮಲಿಲ್ಲದ್ದು|| ಮಕ್ಕಳುಳ್ಳವಳು ನೀನು
ಮಕ್ಕಳನ್ನು ಪಾಲಿಸುವುದು ಮುಖ್ಯನಂತಾದ್ರಿ ರಮಣ ತಕ್ಕ
ಮುಕ್ತಿಕೂಡುವ ನಿನಗೆ|| 3
ಪದ್ಯ
ಆ ಕಾಲಕ್ಕಾಗಿರುವ ಆಕಾಶವಾಣಿಯನ್ನು ತಾ ಕೇಳಿ ಅನುಭೂತಿ||
ಕಾಲ ಮೇರು ಶೈಲದಲ್ಲಿ|| 1
ಚಾರು ಮಂದಾಕಿನಿಯ ತೀರದಲ್ಲಿ ಪರ್ಣದ ಕುಟೀರವನ್ನು
ಹಾರಿಸುತಾ ಬಂದನಾ ನಾರಿ ಇದ್ದಲ್ಲಿ||2
ಆಗ ಆಕೆಯ ಕಂಡು ಹೋಗಿ ಬದಿಯಲಿ ನಿಂತು ಹೀಗೆಂದು
ಮನಸಿನಲಿ ಯೋಗಿಯಂತಲಿ ನಿಶ್ಚಳಾಗಿಹಳು ದಾವಾಕಿ
ದೈವಯೋಗದಲ್ಲಿ ನೋಡಿದರೆ ಯೋಗಿಗಳು ತಮ್ಮ
ಉದ್ಯೋಗಿವನ್ನು ಬಿಡುವರು ಹೀಗೆಂದು ಅನುಭೂತಿಯಾಗಿ
ಮೋಹಿಸಿ ನುಡಿದ ಭೋಗ ಬಯಸುತಲೇ|| 3
ಪದ ರಾಗ:ಶಂಕರಾಭರಣ
ನೀಪೇಳೆ ದಾವದಾವದು ನಿನ್ನ ಜೀವಕ್ಕ ಬೇಕು ಹೇಳೆ|| ಪ
ನಿತ್ಯ ಶೋಷಣ ಮಾಡುಬ್ಯಾಡೇ|| 1
ದೇವತೆಗಳು ಎಲ್ಲಾರು ಬಿಡದೆ ಎನ್ನ ಕೋಕರಾಗಿಹರು||
ಸಾವಿರ ಸ್ತ್ರೀಯರು ಸೇವಿಸುವರು ಎನ್ನ ಸೇವಿಸುವರು ನಿನ್ನನ್ನು 2
ಚಿಕ್ಕ ಪ್ರಾಯದಲ್ಲಿ ನೀನು ಇರುವಿ ನಿನ್ನ ತಕ್ಕ ಪುರುಷನು ನಾನು||
ಮುಖ್ಯನಂತಾದ್ರೀಶ ಸಿಕ್ಕ ನಿನಗೆ ನಿನ್ನ ತಕ್ಕಂತೆ ಆಯಿತ್ಹೇಳೆ|| 3
ಪದ್ಯ
ಧ್ಯಾನದಲ್ಲಿರಲು ದುಷ್ಟ ದನುಜೇಶ್ವರನು ತಟ್ಟನೆ ಮಾಡಿ
ದುಕೃಷ್ಟ ತಾಳ ಧ್ವನಿಯು ಕಟ್ಟು ಇಲ್ಲದೇ ಒಳ್ಳೆ ಗಟ್ಟಿ ವದರಿಸಿ
ನೋಡಿ ಒಂದಿಷ್ಟು ನುಡಿಯದೆ ಇರಲು, ದಿಟ್ಟಾಗಿ ತನಗೆ
ರೀತಿ|| ಸಿಟ್ಟಲೇ ನುಡಿದಾಳು ಆ ಪತಿವುತೆ|| 1
ದಾ ಪೇಳಲೋ ನೀ ಧಿಟ್ಟ ದಾರಿಲ್ಯಾತಕೆ ಬಂದ್ಯೊ ನೀ
ಪಾಪಿಷ್ಠ|| ದೂರದಲ್ಲಿ ಇರೋ ನೀ ದುಷ್ಟ || ಧೈರ್ಯದಿ
ನೀ ಎನ್ನ ಮುಟ್ಟಿದ್ಯೋ ಭ್ರಷ್ಟ|| 2
ಸುಖಭರಿತ || ಲಗುಬಗೆಯಲಿ ಮೋಹಿಸುತ || ಬಗೆ
ಬಗೆಯಲ್ಲಿ ಮಾತನಾಡಿದನು ನಗುನಗುತ| 3
ಪದ, ರಾಗ:ಶಂಕರಾಭರಣ
ಮರುಳು ಗೊಂಡೆನೇ || ತರುಳೆ ನೊಂದೆನೆ||
ಮರಳು ಗೊಂಡೆ ತರುಳೆ ನಿನ್ನ ಹೊರಳಿ ನೋಡುವ
ಯ್ಹರಳಿನೋಟಕೆ|| ಪ
ಮಾನ್ಯ ಮಾನಣಿ || ರನ್ನೆ ಶಿರೋಮಣಿ || ಚೆನ್ನವಾದ
ಚಿನ್ನದಂಥ ನಿನ್ನ ದೇಹವನ್ನು ಕಂಡು|| 1
ಮಾತುಲಾಲಿಸೆ|| ಪ್ರೇತಿ ತೋರಿಸೆ ||ಪ್ರೀತಿ ಎಂಬೊದ್ಯಾತಕಿನ್ನ
ಸೋತು ಕಾಮಾಪೂರದಲ್ಲಿ|| 2
ನಿಂತು ಮರೆತೆನಾ || ಅನಂತಾದ್ರೀಶನಾ || ಎಂಥಹವರಿಗೆ
ಭ್ರಾಂತಿ ಬಿಡಿಸುವಂಥ ನಿನ್ನ ಕಾಂತಿ ನೋಡಿ|| 3
ಆರ್ಯಾ
ಇಂಥಾ ಮಾತವು ಕೇಳಿ || ಚಿಂತಾಕ್ರಾಂತಳಾದಳಾಗ ಆಗ
ಆ ಬಾಲಿ|| ಬಂದಿತು ಇಂಥಾ ಘೋರಾ || ಚಿಂತಿಸ
ಬೇಕಿನ್ನು ಇವನ ಸಂಹಾರಾ|| 1
ಶಾಪಿಸ ಬಾರದು ಜ್ಞನಿ || ಶಾಪಿಸಿದವರ ಅಗುವುದು ತಪಹಾನಿ||
ಪರಿ ಮನಸಿಗೆ ತಂದು ವ್ಯಾಪಾರವು ಮಾಡಿದಳು ಮತ್ತೊಂದು| 2
ಎಂಬಾಕೆ ನಾಮವೇ ತುಳಜಾ|| 3
ಪದ ರಾಗ :ಸಾರಂಗ ತಾಳ :ತಿವಿಡಿ ಸ್ವರಷಡ್ಜ
ಸಲಹಬೇಕೆಂದು ನಿಲ್ಲದೆ|| ಪ
ಪಾಶಾಕೃಷ್ಟ ಧರಿಸುತಾ||1
ವರೆಂದು || ದಯಮಾಡಿ ವರಗÀಳ
ನೀಡುವಳು ಹಿಡಿಯಂದು|| ಕಾರುಣ್ಯಸಿಂಧು||
ಗಾಢನೆ ಧ್ವನಿ ಮಾಡುತಲೇ ಹಾರ್ಯಾಡುತಲೇ ತ್ವರ ಮಾಡಿಸುತಲೇ
ಓಡಿ ಬರುತಿಹ ಪ್ರೌಢಗಣಗಳ ಕೂಡಿ ಸಿಂಹಾರೂಢಳಾಗಿ||2
ಎಂತು ಪೊಗಳಲಿ ನಾನು|| ಅತ್ಯಂತ ಬಹಳಾದಂತ ಮಹಿಮೆಗಳನು
ಎಂತೆಂಥವರು ಬೇಕಂತ ಹುಡುಕಿದರೇನು|| ಹಿಗಂತ
ಆಕೆಯ ಅಂತೂ ತಿಳಿಯದು ಇನ್ನು|| ಗುಣವತಿ ತಾನು||
ಶಾಂತಿಯಿಂದ ಅನಂತಾದ್ರೇಶನ ಕಾಂತಯಳ ಪೋಲುವಂತ
ದೇವಿಯು ಚಿಂತೆಯಲಿ ತನ ಚಿಂತಿಸಿರುವಳ
ಚಿಂತೆ ಬಿಡಿಸ ಬೇಕಂತ ಧಾವಿಸಿ|| 3
ಆರ್ಯಾ
ಸಾರ ಪರಮಾದರದಿಂದ ಕೂತು
ಕೇಳಿದವರು || ಪರಿಪೂಜಿಸುತಾ ತುಳಜಾ ತಾನಾಗುವಳು
ಪ್ರತ್ಯಕ್ಷ|| 1
ವರಕವಿತಾ ರಚನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ ||
ಚರಿಸದು ಎನ್ನ ಉಪಾಯ|| ಗುರು ಕೃಪೆಯಿಂದಾಯಿತೊಂದಧ್ಯಾಯ|| ಶ್ರೀಹರೇ ಪ್ರಸೀದ||