ಬಂದ ಶ್ರೀ ಹರಿ ಬಂದ ಪ
ಬಂದ ಬಂದ ಮುಚುಕುಂದ ಪರದ ಅರ-
ವಿಂದನಯನ ಗೋವಿಂದ ಪರಾತ್ವರ
ಕಂದನೆನ್ನ ಮನ ಮಂದಿರಕೀಗಲೆ
ನಂದವ ನೀಡುತ ಇಂದಿರೆಸಹಿತದಿ ಅ.ಪ.
ಪೊತ್ತವ ಬಂದ
ಅಜಿತನುಬಂದ
ಚಾರುವರಾಹನು ಭೂಸಹಬಂದ ಪೋರನ ಸಲಹಿದ
ಘೋರನು ಬಂದ
ಭಾರ್ಗವ ಬಂದ
ಕೌರವವಂಶಕುಠಾರನು ಬಂದ
ಕಲ್ಕಿಯು ಬಂದ 1
ಉಸುರಲು ಹಯಮುಖಬಂದ
ದತ್ತನುಬಂದ
ನೀಡಲು ಯಜ್ಞನುಬಂದ
ಸಾಧುಹರಿನಾರಾಯಣ ಬಂದ
ಶಿಂಶುಮಾರನು ಬಂದ
ಧನ್ವಂತ್ರಿಯು ಬಂದ 2
ಶ್ರೀ ವಿಷ್ಣುವು ಬಂದ
ಉಲ್ಲಾಸದಿ ಬಂದ
ಸಂತೋಷನು ಬಂದ
ತೈಜಸ ಕರುಣದಿ ಬಂದ
ಮುಕ್ತೇಶನು ಬಂದ
ಪರಾದ್ಯನಂತನು ಬಂದ 3
ಜಗನೂಕೂವ ಬಂದ
ಪುರುಹೂತ ವಿನುತ ಸಕಲಾರ್ತಿಹರ ತಾ ಬಂದ
ವೈರಾಜ್ಯನು ಬಂದ ಶೃತಿ-
ನೀಕ ಸುವಂದಿತನಿರುಪಮ ಬಂದ ವಾಕುಮನಕೆ
ಸಾಕಲ್ಯಸಿಗದ ಪುಣ್ಯ-
ವಿವರ್ಜಿತ ಭಗಲೋಕೈಕ ವಂದ್ಯ
ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ4
ಸರ್ವಸಾಕ್ಷಿಗಭೀರ ಪರಾಕು
ಸ್ವತಂತ್ರನೆ ಪರಾಕು
ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು
ಪ್ರತಿಪಾದ್ಯಪರಾರು
ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು
ಸಮನೆ ಪರಾಕು
ಪರಾಕು 5
ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು
ನಿಖಿಳಪ್ರದಾಯಕ ಪರಾಕು
ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು
ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು
ನೀತ ಜ್ಞಾನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು
ಪರಾಕು 6
ಪರಾಕು ರೂಪಾತ್ಮ ಪರಾಕು
ಪುರುಷ ಸೂಕ್ತ ಸುಗೇಯ
ಪ್ರಖ್ಯಾತ ಮಹಾಮಹಿಮ ಪರಾಕು
ನಾಮಕ ಪರಾಕು
ಸುನಾಮ ಓಂಕಾರಾಧಿಪ ಪರಾಕು
ವಿಭೂತಿ ಪರಾಕು 7
ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ
ಕರುಣಾಮಣಿ ಶ್ರೀಕಾಮ
ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ
ವಿನುತ ಗುಣಲಲಾಮ
ಸುನಾಮ ಮೇಘಶ್ಯಾಮ 8
ಸುಂದರ ಬಂದ
ಸೃಷ್ಠಿಸ್ಥಿತಿಲಯಗೈವ ಮು-
ವೃಂದಕಳೆದು ನಿಜ-
ಸುಧಾರ್ಣವ ಬೃಹತೀನಾಮಗ
ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ
ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು
ಭವ ಪರಿವಾರದ ಕೂಡಿಯೆ ಬಂದಾ 9