ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ | ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ ಪ ಮಾತ್ರ ನುಡಿಸುವ ಬುದ್ಧಿ ಪೇಳಿ | ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ ಸ್ತೋತ್ರ ಮಾಡಿದರೆ ಯೇನಾಹದೋ1 ಚಿತ್ರಿಕ ಬಲು ವಿವೇಕ ಉಳ್ಳವನೆಂದು ಪಾತ್ರರ ಮುಂದೆ ಕೊಂಡಾಡಿದಂತೆ | ಧಾತ್ರಿಯೊಳಗೆ ನಮ್ಮ ಪುರಂದರದಾಸರ ಸ್ತೋತ್ರ ಮಾಡಿರಯ್ಯ ಸಚಲರಾಗೀ 2 ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ | ನೇತ್ರದಿಂದಲಿ ಹರಿಯ ಸರಿದರುಶನಾ | ರಾತ್ರಿಂಚರೆಯೆಂದು ಪೆಸರುಳ್ಳವು ಕುಮುದ ಮಿತ್ರಗೆ ಸರಿಯೇನು ಉಳದಾದವು 3 ಸ್ತೋತ್ರಾಭರಣವಾದ ದಾಸರ ಶವನಕ್ಕೆ ಅ ನ್ಯತ್ರ ನುಡಿವದು ಧಿಕ್ಕರಿಪದು | ನಿತ್ರಾಣವಾದ ಮನುಜ ಹಿರಿಯರ ವಿತ್ತದಿಂದ ಯಾತ್ರಿ ಮಾಡಿ ಪುಣ್ಯ ಘಳಿಸಿದಂತೆ 4 ಸ್ತೋತ್ರ ಮಿಟಮ್ಯಾಲೆ ಪಂಗ್ತಿ ಹಾಕಿ ಕೊಡಲು ಮಾತ್ರೆಗಳ ನೋಡಿ ಬರದಂತೆ ವೋ | ಶತ್ರು ಸಂಹಾರ ನಮ್ಮ ವಿಜಯವಿಠ್ಠಲನಂಘ್ರಿ ಶತ ಪತ್ರ ಬಲ್ಲವರಿಗೆ ಯಿದೆ ವಿಸ್ತಾರ ನಿರ್ಮಾಣ 5
--------------
ವಿಜಯದಾಸ
ಸಾಲವ ಕೊಡದಿದ್ದರೆ ನಿನಗೆ | ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ ಏಸು ದಿವಸದಿಂದ ಎಲ್ಲರ ಸೇವಿಸಿ | ಕಾಸು ಕಾಸಿಗೆ ನಾನು ಕೂಡಹಾಕಿ | ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು | ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ 1 ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ | ಗಡ್ಡ ಬೀಳುವೆನೊ ಸಾಲವ ತೀರಿಸೊ | ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ | ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು 2 ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ ಕೆ ನಿಲ್ಲದೆ ನಿನಗೆ ಸಾಲವಿತ್ತೆ | ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು | ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ3 ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು | ಮೇಲೆ ಮೇಲೆ ಬಿದ್ದು ನಿನ್ನ | ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ 4 ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ | ನೆತ್ತಿಯೆತ್ತಿ ಮೋರೆ ತೋರ ಬೇಕೊ | ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ | ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು 5 ಬಡತನ ಬಂದರಾಗ ನಾ ನಿನಗೆ ಬಾಯಿ | ಬಿಡುವೆನೆ ದೈನ್ಯದಲಿ ಭಾಗ್ಯವಂತಾ | ತಡ ಮಾಡಲಾಗದು ಕೊಡು ಎನ್ನ ಒಡಿವೆ | ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ 6 ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು | ಸಂತತ ಸಂತರ ಮುಂದೆ ನುಡಿದು ಬಿಡುವೆ | ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ | ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ 7
--------------
ವಿಜಯದಾಸ