ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಗವೇಣಿ ಶುಕವಾಣಿ ಸಖಿ ಪ ಭೋಗ ಭಾಗ್ಯ ಬಯಸುವ | ಕು ಯೋಗ ಕುತ್ಸಿತಳಲಿ ಅ.ಪ. ಅಗಣಿತ ಗುಣಾರ್ಣವಗೆ ಸುಗುಣನೆಂದರಿತು ನಾ ಮಣಿಯಲರಿಯೆ ಬಗೆ ಬಗೆ ಕುಸುಮಂಗಳನು ಸೊಗಸಿನಿಂದಲಂಕರಿಸಿ ನಗಧರನ ಸ್ತುತಿಸಲರಿಯದವಳಲ್ಲಿ 1 ರಮಾಭಿಮಾನ್ಯನಂತಾಸನ ಸದನಗೆ ಕಮಲಾಸನವಿತ್ತು ಪ್ರೇಮ ಮಾಡಲರಿಯೆ ಸೋಮ ಸೂರ್ಯನಂತರುಧಾಮದಿ ಬೆಳಗುತ್ತಿರೆ ನೇಮದಿಂದ ದೀಪದಾರತಿಯ ಮಾಡುವಳಲ್ಲಿ 2 ಸಿರಿಭವಾದ್ಯರೆ ಆಭರಣ ಉಳ್ಳವಗೆ ಕರಗುವ ಕನಕ ತೊಡಿಸಲರಿಯೆ ಕರಿವರದ ವಿಜಯ ರಾಮಚಂದ್ರವಿಠಲನ್ನ ಅರಿತು ಒಲಿಸಲರಿಯದವಳಲ್ಲಿ 3
--------------
ವಿಜಯ ರಾಮಚಂದ್ರವಿಠಲ
ಮಂಗಳ ಮುದ್ದು ಕೃಷ್ಣನಿಗೆ ಜಯ ಮದನ ಜನಕ ಬಾಲ ಹರಿಗೆ ಪ. ಕಡಗೋಲ ನೇಣು ಪಿಡಿದಗೆ ಪಾಲ್ ಗಡಿಗೆ ಒಡೆದು ಇಲ್ಲಿ ಓಡಿ ಬಂದವಗೆ ಕಡಲ ತಡಿಯಲಿ ನಿಂತವಗೆ ಅಷ್ಟ ಮಡದಿಯರರಸನೆಂತೆಂಬ ಪುರುಷಗೆ 1 ಯತಿವರರಿಂದರ್ಚಿತಗೆ ಬಹು ಜತನದಿ ಭಕ್ತವರ್ಗಗಳ ಕಾಯ್ವನಿಗೆ ಯತಿ ಮಧ್ವರಾಯಗೊಲಿದಗೆ ನಿತ್ಯ ಚ್ಯುತ ದೂರವಾದ ಸರ್ವೇಶನೆಂಬುವಗೆ 2 ಗರುಡನ್ನ ಎಡದಿ ನಿಲಿಸಿದಗೆ ಬಲದಿ ಮರುತನ್ನ ನಿಲಿಸಿ ಕೊಂಡ್ಹರುಷಪಡುವನಿಗೆ ಕಿರಿದ್ವಾರದಿ ಮಧ್ವ ಉಳ್ಳವಗೆ ನಮ್ಮ ಸಿರಿಪತಿ ಗೋಪಾಲಕೃಷ್ಣವಿಠ್ಠಲಗೆ 3
--------------
ಅಂಬಾಬಾಯಿ
ಹರಿ ನಂಬಿದವರಿಗೆ ಸರಿಯೆ ಜಗದೊಳು ಹರಿದಾಸಾದವಗೆ ಸಕಲ ಮಾನ್ಯವಗೆ ಧ್ರುವ ಹರಿ ಜ್ಞಾನವುಳ್ಳವಗೆ ದಣಿವಿಕೆಲ್ಲಿಹದವಗೆ ಹರಿಧ್ಯಾನ ಉಳ್ಳವಗೆ ತಾಂ ದುರಿತವೆಲ್ಲಿಹದವಗೆ 1 ಹರಿನಾಮ ಉಳ್ಳವಿಗೆ ನಾಸ್ತಿಕವೆಲ್ಲಿಹದವಗೆ ಹರಿ ದಯುಳ್ಳವಗೆ ದನ್ಯವೆಲ್ಲಿಹದವಗೆ 2 ಹರಿಯ ಭಾವಿಕರಿಗೆ ಭವವುಂಟೆ ಅವಗೆ ಹರಿ ಭಕ್ತಿಯುಳ್ಳವಗೆ ತಾ ಭಯ ವೆಲ್ಲಿಹದವಗೆ 3 ಹರಿದಾಸರದಾಸಾದ ಮಹಿಪತಿಗೆ ಸರಿಯುಂಟೆ ಪೂರ್ವಪುಣ್ಯದ ಫಲಶ್ರುತಿಗೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3
--------------
ಪುರಂದರದಾಸರು