ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1 ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2 ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ ಚಿತ್ತದೊಲ್ಲಭನ ಸಂಗಡದಿ ನಲಿದು ಮತ್ತೆ ಉಪರತಿಗೆ ಪರಪುರುಷನ ಬಯಸುವ ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3 ಪಗಡೆ ಚದುರಂಗ ಕವಡೆಯನಾಡÀ ಕರೆದರೆ ನಿಗುರುವುವು ಕರ್ಣಗಳು ಮೊಚ್ಚೆಯಂತೆ ಜಗದೀಶನ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4 ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5 ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6 ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7
--------------
ವಿಜಯದಾಸ
ಪನ್ನಗಾಚಲ ವಾಸ - ಪದುಮಿನೀಶಾ ಪ ಬನ್ನ ಬಡಿಸುವ ರೋಗವನ್ನು ಕಳೆ ಶ್ರೀಶಾ ಅ.ಪ. ತನುವ ರಥವನೆ ಮಾಡಿ ತತ್ಸೂತ ನೀನೆನಿಸೀಮನ ಆದಿ ಕರಣವೆಂಬಶ್ವಗಳ ಬಿಗಿಸೀ ||ಗುಣವೆನಿಪ ವಾಗಭಿ - ಮಾನಿಯನೆ ಬಂಧಿಸೀಚನ್ನ ರಥವನು ಚರಿಪೆ ಜೀ | ವನ್ನ ಕುಳ್ಳಿರಿಸೀ 1 ಸೂತ್ರಾಂತರಾತ್ಮಕನೆ | ಸೂತ್ರಧಾರಿಯೆ ನೀನುಮಾತ್ರಾದಿ ಸುಖ ದುಃಖ | ಸಮವೆಂದು ತಿಳಿಸೋ ||ಧಾತೃ ಪಿತ ನೀನಹುದೊ | ಮಾತರಿಶ್ವ ಪ್ರಿಯನೆಗಾತ್ರ ಬಳಲಿಸ ಬೇಡ | ಪ್ರಾರ್ಥಿಸುವ ನಿನ್ನಾ 2 ಘನ್ನ ಮಹಿಮನೆ ನಿನ್ನ | ಏನು ಬೇಡಲಿ ನಾನುನಿನ್ನ ನಾಮ ಸ್ಮರಣೆ | ಅನ್ನಂತ ವೀಯೋನಿನ್ನೊಲಿಮೆ ಉಳ್ಳನಕ | ಇನ್ಯಾವ ಭಯವಯ್ಯಪನ್ನಂಗ ಶಯನ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಭಾರತೀಶ ಪ್ರಿಯ | ವಿಠಲ ಪೊರೆ ಇವಳ ಪ ನೆರೆನಂಬಿ ಬಂದಿಹಳ | ಪೊರೆಯೊ ಶ್ರೀಹರಿಯೇ ಅ.ಪ. ದಾಸ ದೀಕ್ಷೆಯ ಜ್ಞಾನ | ಲೇಸು ಪಡೆದವಳಲ್ಲಆಶೆಪಳು ತವದಾಸ್ಯ | ಮೇಶ ಮಧ್ವೇಶಆಶೆ ಮಾತ್ರಕೆ ಒಲಿದು | ಪೋಷಿಸಲಿ ಬೇಕಯ್ಯಹೇ ಸದಾಶಿವ ವಂದ್ಯ | ವಾಸ ವಾನುಜನೆ 1 ಪತಿಸುತರು ಬಾಂಧವರ | ಹಿತದಲ್ಲಿ ಮತಿಯಿತ್ತುಅತುಳ ವಿಭವದಿ ಮೆರೆಸಿ | ಕೀರ್ತಿಕೊಡಿಸೋಕೃತಿ ಪತಿಯೆ ತವಚರಣ | ಸತತ ನೆನೆಯುವ ಭಾಗ್ಯಪಥದಲ್ಲಿ ಇರಿಸಿ ಕೃತ | ಕೃತ್ಯಳೆಂದೆನಿಸೋ 2 ಉದಧಿ ಶಯನಾ |ಹದುಳದಲಿ ಮೂರೆರಡು | ಭೇದ ತರತಮಜ್ಞಾನವದಗಿಸುತ ಪೊರೆ ಇವಳ | ಮಧು ಮಥನ ಹರಿಯೇ 3 ನಿನ್ನ ನಾಮವ ಬಿಟ್ಟು | ಅನ್ಯ ಸಾಧನ ಕಾಣೆಚೆನ್ನ ಈ ಕಲಿಯುಗದಿ | ಅನ್ನಂತ ಮಹಿಮಾಘನ್ನ ದಯವನಧಿ ಆ| ಪನ್ನ ಜನರಕ್ಷಕನೆನಿನ್ನೊಲಿಮೆ ಉಳ್ಳನಕ | ಇನ್ನಾವ ಭಯವೋ 4 ಭಾವಜ್ಞ ನೀನಾಗಿ | ಪಾವಕಳೆ ಸಲಹೋ5
--------------
ಗುರುಗೋವಿಂದವಿಠಲರು
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು