ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ರುದ್ರದೇವರಿಗೆ ಮೊರೆ) ನೀಗಿದೆನು ಸಂಸಾರ ಧನ್ಯಾಳಾದೆ ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು ಜಾಗು ಮಾಡದೆ ಕಾವೋ ದೇವನಿರಲು ಭವ ಸಾಗರವ ದಾಟಿಸಿ ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1 ಬಳಲಿದೆನು ಸಂಸಾರದಳವು ಕಾಣದೆ ನಾನು ಭವ ದುಃಖ ಶರಧಿಯೊಳಗೆ ಉಳುಹುವರ ದಾರಿಗಣದೆ ಹರನ ಮೊರೆಯಾಗಲು ನೆಲಸಿದನು ಕರುಣಾಳು ಎನ್ನಯ ಮನದೀ 2 ನೀಲಕಂಠಗೆ ಜಯ ಫಾಲನೇತ್ರನೆ ಜಯ ಮಾಲತೀಧವ ಜಯ ವಂದಿಸುವೆ ಶಿರವಾ ಮೇಲು ನರಸಿಂಹವಿಠಲನಾಣೆ ಬೇಡುವೆ ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3
--------------
ನರಸಿಂಹವಿಠಲರು
ಪ್ರತಿಮೆ ಪೂಜೆಗಳವು ಪರ-ಮಾರ್ಥವಲ್ಲವು ಪಾಮರರಿಗೆ ಅದು ಸಾಧನವುಪ್ರತಿಮೆ ಪೂಜೆಯು ತಿಳಿದವರಿಗೆಉತ್ತಮವಲ್ಲದ ಪರಮಾತ್ಮ ಪ್ರತ್ಯಕ್ಷ ನೀವೆನ್ನಿ ಪ ಶುನಕ ಮನೆ ಮುಂದಿತ್ತು ಆದರೆಬಲ್ಲತೊದರಿ ಮನೆಯ ಉಳುಹುವುದು 1 ದಂಡು ಬರಲು ದೇವರನು ಹೊರು ಎಂಬರುಮುಂದೆ ಏನು ಕೆಲಸವಿಲ್ಲವುಮುಂದೆ ಉರಿಯುವುದು ಹೊತ್ತರೆ ಹಗುರವಿಲ್ಲಚಂಡ ಚೈತನ್ಯಾತ್ಮೆ ನೀವೆನ್ನಿರಿ 2 ಬೆಕ್ಕನೆ ಹಿಡಿದೊಯ್ಯೆ ಇಲಿಗಳ ಹಿಡಿಯುವುದುಬಟ್ಟೆ ಬರಿಯ ಜೋಪಾನ ಮಾಡುವುದುಬೆಕ್ಕು ಪ್ರಯೋಜನ ದೇವರಪ್ರಯೋಜನತಕ್ಕವು ಪರಮಾತ್ಮ ನೀವೆನ್ನಿರಿ 3 ಪ್ರತಿಮೆಗಳ ಯೋಗ್ಯವಲ್ಲ ಬ್ರಹ್ಮವಾದೀಪ್ರತಿಮೆ ಎಂತು ಯೋಗ್ಯ ಪಂಚಾಳನವುಪ್ರತಿಮೆ ಎಂಬುವು ಜಡಬೊಂಬೆಸಂಶಯವಿಲ್ಲ ಪರವಿಲ್ಲ ಪರವಸ್ತು ನೀವೆನ್ನಿರಿ 4 ಕಾಲ ಪರಿ ದೇವರ5
--------------
ಚಿದಾನಂದ ಅವಧೂತರು
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಆರೆನ್ನ ಉಳುಹುವರೈ ರಂಗಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.ಎಂಟು ಕಾಡಾನೆ ಎಂಟು ಕಡೆಯಲಿ ನಿಂತಿವೆಗಂಟನಿಕ್ಕಿವೆ ಮೂರು ದಳ್ಳುರಿಯಸುಂಟರಗಾಳ್ಯೆಬ್ಬರಿಸಲು ಗಿಡಗಂಟಿಲಿ ಬಿದ್ದೆ ನೀನಲ್ಲದೆನ್ನ 1ಹುಲಿಯೊಂದು ಗುಡುಗುಡಿಸುತಿದೆ ಭಯಂಕರಬಲು ತೋಳೆರಡು ಕೆಕ್ಕರಿಸುತಿವೆಸಲುಗೆಯ ಕೋತಿಯೊಂದಣಕಾಡುತಲಿದೆಮೇಲೆ ಕರಡಿಯು ಹತ್ತೆಳವುತಿದೆ 2ಕಾಳುರಗನ ಕಟ್ಟು ಮೈತುಂಬ ನನ್ನನಾಲಿಗೇಳದು ನಿನ್ನ ಕರೆಯಲಿಕೆ ನಿನ್ನಾಳಟ್ಟಿ ಕರೆಸಿಕೊಳ್ಳೆಲೆ ತಂದೆ ನಾಗೋಳಿಟ್ಟೆ ಪ್ರಸನ್ನವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು
ಭಂಡನಾದೆನು ನಾನು ಸಂಸಾರದಿ |ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ಪಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |ದಿಂಢೆಗಾರರ ಮನೆಗೆ ಬಲು ತಿರುಗಿದೆ ||ಶುಂಡಾಲನಂತೆನ್ನ ಮತಿ ಮಂದವಾಯಿತೈ |ಪುಂಡರೀಕಾಕ್ಷನೀ ಕರುಣಿಸೈ ಬೇಗ1ನಾನಾವ್ರತಂಗಳನು ನಾ ಮಾಡಿ ಬಳಲಿದೆನು |ಏನಾದರೂ ಎನಗೆ ಫಲವಿಲ್ಲವು ||ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |ನೀನಾದರೂ ಕೃಪೆಯನಿಡು ಬೇಗ ಹರಿಯೇ 2ಬುದ್ಧಿಹೀನರ ಮಾತಕೇಳಿನಾ ಮರುಳಾದೆ |ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||ಮಧ್ವನುತಸಿರಿಪುರಂದರವಿಠಲ ತತ್ವದ |ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ 3
--------------
ಪುರಂದರದಾಸರು