ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ಬಾರದೆ ವಿಠ್ಠಲಾ | ಶ್ರೀ ಪಾಂಡುರಂಗ ಪ. ಸ್ಮರಣೆ ಮಾಡುತ ಪೊರೆ ಎಂದೆನ್ನುತ ವರಲುವಾ ಧ್ವನಿ ಕೇಳದೇ ಈ ಪರಿಯ ಗರ್ವವಿದೇನೊ ಹರಿಯೆ ಅ. ದೂರದಿಂದಲಿ ಬಂದೆನೋ | ಇಲ್ಲಿಂದ ಮುಂದೆ ದಾರಿ ಕಾಣದೆ ನಿಂದೆನೋ ದ್ವಾರಕಾಪತಿ ನೀನಲ್ಲದಿ ನ್ನಾರು ಕಾಯುವರೀಗ ಪೇಳು ಸಾರಿದೆನು ನಿನ್ನಂಘ್ರಿ ಕಮಲವ ಚಾರು ಚರಿತನೆ ಮಾರನೈಯ್ಯ 1 ತನುಸುಖ ಬೇಡಲಿಲ್ಲಾ | ನಿನ್ನ ನಾನು ಘನವಾಗಿ ಕಾಡಲಿಲ್ಲ ಮನದ ಹಂಬಲ ನೀನೆ ಬಲ್ಲೆಯೊ ಮನಕೆ ತಾರದೆ ಸುಮ್ಮನಿಪ್ಪೆಯೋ ಎನಗೆ ಪ್ರೇರಕ ನೀನೆ ಅಲ್ಲವೆ ನಿನಗೆ ದಾಸಳು ನಾನು ಅಲ್ಲವೆ 2 ಕರೆಕರೆ ಪಡಿಸುವುದೂ | ಸರಿಯಲ್ಲ ನಿನಗೆ ಕರಿವರದ ಕೇಳು ಇದೂ ನರಸಖನೆ ದಯದಿಂದ ನಿನ್ನ ಚರಣ ದರುಶನವಿತ್ತೆ ಒಲಿದು ಕರಪಿಡಿದು ಸಲಹೆಂದರೀಗ ತೆರೆದು ನೋಡದೆ ನೇತ್ರವಿರುವರೆ 3 ಜ್ಞಾನಿ ಹೃತ್ಕಮಲವಾಸ | ಶ್ರೀ ರುಕ್ಮಿಣೀಶ ಭಾನುಕೋಟಿ ಪ್ರಕಾಶ ನೀನೆ ಗತಿ ಇನ್ನಿಲ್ಲ ಅನ್ಯರು ಸಾನುರಾಗದಿ ಸಲಹೊ ಎನ್ನಲು ಆನನದಿ ಈಕ್ಷಿಸದೆ ನಿಂತರೆ ಮಾನ ಉಳಿವುದೆ ಭಕ್ತವತ್ಸಲ 4 ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು ಅಷ್ಟು ಭಾಗ್ಯವನೂ ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ ದೃಷ್ಟಿ ಬಿದ್ದರೆ ಕಷ್ಟ ಉಂಟೆ ಕೊಟ್ಟು ಅಭಯ ಪೊರೆ ಗೋಪಾಲ- ಕೃಷ್ಣವಿಠ್ಠಲ ಮನದಿ ತೋರೋ5
--------------
ಅಂಬಾಬಾಯಿ
ಭಕ್ತವತ್ಸಲ ಹರಿ ಎಂಬ ಬಿರುದು ನಿನ ಗಿತ್ತವರ್ಯಾರಯ್ಯಾ ಹೇ ಜೀಯಾ ಪ ತತ್ತರಿಸುತಲಿಹರು ಈ ಜಗದೊಳು ಅ.ಪ ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ ಪರಮ ಸುಜನರುಗಳು ಈ ಧರೆಯೊಳು ಒರಳಿಗೊಡ್ಡಿರುವ ಶಿರಗಳುಳ್ಳವರಂತೆ ದುರುಳರ ಭಯದಿಂದ ನರಳುತಿರೆ 1 ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ ಕಾಶ ಇವರಿಗಿಲ್ಲ ಈ ಭುವಿಯೊಳು ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ ಹಾಸ ಮಾಡುತಲಿಹೆಯೋ ಜಗದೀಶ 2 ಪರಿ ಘನ್ನಬಿರುದುಗಳು ಇನ್ನು ಉಳಿವುದೆಂತೋ ನಾ ಕಾಣೆ ಸನ್ನುತಿಸುವವರಿಗೆ ಇನ್ನಾದರು ಸುಖ ವನ್ನು ನೀ ದಯಮಾಡೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಲಿಂಗವ ಕಟ್ಟುವ ವಿವರವ ಹೇಳುವೆತಲೆವಾಗಿ ಕೇಳಲೆ ಹುಚ್ಚು ಬಡ್ಡಿಲಿಂಗ ಕಟ್ಟಿದೆಯಾದರೆ ಚಿದಾನಂದಲಿಂಗವಾಗುವೆ ಹುಚ್ಚು ಬಡ್ಡಿಪಹೊಟ್ಟೆಯೊಳಗಿರೆ ತಾಯಿಗೆ ಲಿಂಗವಕಟ್ಟುವೆಯೋ ಹುಚ್ಚು ಬಡ್ಡಿಮುಟ್ಟುಮಿಂದಿರೆ ಬಿಂದು ಬೀಳುವಾಗ ಲಿಂಗವಕಟ್ಟಿದೆಯಾ ಹುಚು ಬಡ್ಡಿಕಟ್ಟುವೆ ಯಾರಿಗೆ ಕಟ್ಟಿಕೊಂಬವನಾರುಇಷ್ಟು ಅರಿಯೆ ಹುಚ್ಚು ಬಡ್ಡಿಕಟ್ಟಿದೆಯಾದರೆ ಅಂಗವೆ ನೀನಾಗುನಿಜಲಿಂಗನಹೆ ಹುಚ್ಚು ಬಡ್ಡಿ1ಲಿಂಗ ಹೋಯಿತು ಎಂದು ಪ್ರಾಣವ ಕೊಡುವೆಯೋಲಿಂಗ ಹೋಯಿತೆ ಹುಚ್ಚು ಬಡ್ಡಿಲಿಂಗವು ಹೋದರೆ ನೀನು ಉಳಿವುದೆಂತುಲಿಂಗವು ನೀ ಹುಚ್ಚು ಬಡ್ಡಿಲಿಂಗವ ನೀನೆರಡಾಗಿ ಲಿಂಗವ ಕಟ್ಟಿಹೆಲಿಂಗಾಗಿಯೇ ಹುಚ್ಚು ಬಡ್ಡಿಅಂಗ ಸಜ್ಜೆಯು ಆಗಿ ಲಿಂಗವೇ ನೀನಿರೆಲಿಂಗ ಕಟ್ಟಿದೆ ಹುಚ್ಚು ಬಡ್ಡಿ2ಲಿಂಗವನೆ ಕಟ್ಟಿನಿದ್ರೆಯ ಮಾಡಲುಲಿಂಗವೆಲ್ಲಿತ್ತೋ ಹುಚ್ಚು ಬಡ್ಡಿಲಿಂಗವ ನೀನೀಗ ಲಿಂಗೆಂದು ಪೂಜಿಸನೀನಾರೋ ಎಲೆ ಹುಚ್ಚುಬಡ್ಡಿಲಿಂಗ ಚಿದಾನಂದ ಸದ್ಗುರುವನು ಹೊಂದುಲಿಂಗವ ತಿಳಿವೆ ಹುಚ್ಚು ಬಡ್ಡಿಲಿಂಗವ ತಿಳಿದ ಬಳಿಕ ಲಿಂಗಅಂಗವು ಅಂಗ ಲಿಂಗವು ಹುಚ್ಚು ಬಡ್ಡಿ3
--------------
ಚಿದಾನಂದ ಅವಧೂತರು