ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಡದಿರು ಕಡುಮೋಹದಡವಿಬಿದ್ದು ಮನ ಕೆಡುವ ಶರೀರ ಜಡದೃಶ್ಯವಿದು ಪ ಜಲದ ಮೇಲಿನ ಗುರುಳೆಯಂತೆ ಈ ದೇಹ್ಯ ಗಳಿಗೆ ಚಲಿಸಿ ಒಡೆದು ನೆಲಕೆ ಬೀಳುವುದು ಬಳಿದ ಕಸದತೆರಗಳಿಗೆ ನಿಲ್ಲದೆ ಇದನು ಎಳೆದುಹಾಕುವರಂತ್ಯ ಕಾಲದಲಿ 1 ಕ್ಷಿತಿಯೊಳಿರುವ ತನಕ ಸತಿಸುತರೆಲ್ಲರು ಸತತ ಹಿತದಿ ಬಲುಪೂಜೆ ಮಾಳ್ಪರು ಸತ್ತ ಬಳಿಕ ತಮಗ್ಹತ್ತಿತ್ತು ಮುಟ್ಟೆಂದು ಹಿತದವರೆಲ್ಲ ಮುಟ್ಟುತೊಳಕೊಂಬರು2 ಗಳಿಸಿದ ಧನಮಾನ್ಯ ಬಲುಸಂಪದವೆಲ್ಲ ಉಳಿವುದು ಎಲ್ಲ ಇಲ್ಲೇ ಜತೆಯಲಿ ಬರದೇನು ತಿಳಿದು ಶ್ರೀರಾಮನ ಚರಣಕಮಲಧ್ಯಾನ ಗಳಿಸಿ ಘನಮುಕ್ತಿ ಪಡಕೊಳ್ಳೆಲೊ 3
--------------
ರಾಮದಾಸರು
ತನ್ನ ಕಷ್ಟದಿ ತನಗೆ ದೊರಕುವುದು ಹಾಗ ಉನ್ನಂತ ಭಾಗ್ಯಗಳು ಹರಿಯ ವಿನಿಯೋಗ ಪ ಕಟ್ಟಿಗೆಯ ಹೊರೆ ತಂದು ಪಟ್ಟಣದೊಳಿಳುಹಿದರು ಉಟ್ಟ ಬಹಿರ್ವಾಸವನು ಬಿಗಿದಿಟ್ಟರು ಮೊಟ್ಟೆಯನು ಕೊಂಡೊಯ್ದು ಇಟ್ಟದನು ಮಾರಿದರು ಹೊಟ್ಟೆ ತುಂಬಿಸಿ ಕಡೆಗೆ ಕಟ್ಟುವನು ಹಾಗ 1 ಪದಪದ್ಯಗಳ ಹೇಳಿ ಕುಣಿದಾಡಲು ಹದಿನಾರನೆಯ ವಿಧಿಯ ಸದನದೊಳು ಸವಿದುಣಲು ಕದನ ಕರ್ಕಶನಾಗಿ ಕಡಿದು ಬರೆ ಹಾಗ 2 ಸೂಜಿ ನೂಲನು ಕೊಂಡು ಬಾಜಾರದೊಳು ಕುಳಿತು ಸೋಜಿಗದ ಹೊಲಿಗೆಯನು ಮಾಡಿಕೊಡಲು ಕಾಜು ಬಳೆಗಳ ಹೊತ್ತು ದಣಿದು ಮಾರಿದರವಗೆ ರೋಜು ಉಳಿವುದು ಅಸ್ತಮಯಕೆ ಒಂದ್ಹಾಗ 3 ಭಾಗ್ಯವುಳ್ಳವನನ್ನು ಬಾಧಿಸಲು ಅವ ತನಗೆ ಕಾಗೆ ಕರಿದೆನಿಸಿ ತಾ ಕಸ್ತೂರಿ ಹೋಲುವುದೆ ಮೊಗೆಮೊಗೆ ಮಲ್ಲಿಗೆಯು ಪರಿಮಳಿಪುದೆ 4 ಹರಿಯ ಸೇವೆ ಮಾಡೆ ಇಹಪರದ ಸೌಖ್ಯಗಳು ಹರನ ಸೇವೆಯ ಮಾಡೆ ಪರಮ ಪದವು ಸಿರಿಯರಸ ವರಾಹತಿಮ್ಮಪ್ಪ ನಿನ್ನಡಿಯ ಕರುಣರಸ ಹೊರತಾಗಿ ಸಿರಿಯು ಸೇರುವಳೆ 5
--------------
ವರಹತಿಮ್ಮಪ್ಪ
ದೇಹ ಭಾವವು ಹೋಗಿ ದೇವನೇ ತಾನಾಗಿದೇಹಗುಣವೆಲ್ಲಿಯದೋ ಮುಕ್ತ ಪ ಗರುಡನ ಮನೆಯೊಳಗೆ ನಾಗರ ಜಾತಿಯಪರಿ ನಡೆವುದೇನೋ ಮುಕ್ತಶರೀರ ಸಹಿತದ ಬ್ರಹ್ಮಾಗಿ ತಾನಿರೆಹರಿವವೆ ಪ್ರಾಣಗಳು ಮುಕ್ತ1 ಉರಿಯದು ಉರಿಯಲು ಉರಿಯಲಿಅರಗದು ಇಹುದೇನೋ ಮುಕ್ತಕರುವಿಟ್ಟೆರಕದಿ ಥಳಥಳ ಹೊಳೆಯದೆಇರುವುದೇ ಈ ಇಂದ್ರಿಯಗಳು ಮುಕ್ತ2 ರವಿಯದು ಬೆಳಗಿರೆ ಕಿರಣ ಕಾಂತಿಯಿಂಗೂಗೆಗಳೆಲ್ಲ ತಿರುಗುವವೋ ಮುಕ್ತಖವ ಖವ ಖವಿಸುತ ಪರವಶವಿರೆವಿವರಿಸೆ ಮನವೆಲ್ಲೊ ಮುಕ್ತ 3 ಈಶನ ಕಣ್ಣುರಿ ಭುಗು ಭುಗು ಭುಗಿಲೆನೆಏಸು ಉಳಿವುದು ಕಾದು ಮುಕ್ತಿಸೂಸುವ ಮುಖದಲಿ ತೃಪ್ತಿಯೆ ತುಂಬಿರೆವಾಸನೆ ಎಲ್ಲಿಹುದೋ ಮುಕ್ತ 4 ಪರಮಾತ್ಮನು ತಾ ಪರಿಪೂರ್ಣನಾನಿರೆಮೆರೆವುದು ಅವಿದ್ಯೆ ಮುಕ್ತಗುರು ಚಿದಾನಂದ ಸಹಜದಿ ತಾನಿರೆಇರುವುದೆ ಜೀವತ್ವ ಮುಕ್ತ 5
--------------
ಚಿದಾನಂದ ಅವಧೂತರು