ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಕರ್ಷಣನ ರಾಣಿ ವೀರದುರ್ಗೆ ಕಿಂಕರರ ಪಾಲಿಸು ಖೂಳ ಜನ ಸಂಹಾರಿ ಪ ಅಮಿತ ಸದ್ಗುಣರಾಶಿ ಕುಜನಾರಿ ಸುಗನಾಪ್ತೆ ಕಾಯೆ ತಾಯೆ ಅ.ಪ ಮನದ ಖಳರಾ ಭೀತಿ ಬಹು ವೇಗ ಕೇಳಮ್ಮ ಪ್ರಣಿತ ಜನರ ಪಾಲೆ ಕೊಲ್ಲೆ ಅವರ ತನುಮನದಿ ನೆಲೆಸಿದ್ದು ಅನುದಿನವು ಪೊರೆ ನಮ್ಮ ಗುಣಪೂರ್ಣ ನಿನ್ನ ಪತಿಧ್ಯಾನ ಒದಗಿಸಿ ನಲಿಯೆ 1 ಪತಿವ್ರತವು ನೀ ಧರಿಸಿ ಪತಿವೈರಿಗಳ ಅರಿವೆ ಪತಿಹಿತರ ಕಾವ ಕಂಕಣವ ಕಟ್ಟಿ ಪತಿ ಪ್ರೀತಿಪಡಿಸುವೆ ವೀರವ್ರತ ದೀಕ್ಷೆಯಲಿ ಪತಿತಪಾವನೆ ನೀನೆ ಕಾವಲಮ್ಮಾ ನಮಗೆ2 ಕಲಿಯಲ್ಲಿ ಖಳಕೂಟ ಬಲು ಪ್ರಬಲ ಅತಿಕ್ರೂರ ಉಳಿಯಲೀಯರು ದೇವಿ ಸುಜನರನ್ನು ಬಲುಹೀನರೆಂತೆಂದು ಬಲು ಬಾಧೆಪಡಿಸುವರು ಪ್ರಳಯಗೈಸವರನ್ನು ಪಾಲಿಸು ನಿನ್ನವರ 3 ಜ್ಞಾನಮನ ತನುಕರಣ ಆಲಯದ ಅರಿಗಳ ಆಸಕ್ತಚಾರಿಗಳ ಬಿಡದೆ ಮಡುಹಿ ಆನಂದಮುನಿ ತಾಯೆ ಜಯೇಶವಿಠಲನ ಆನಂದ ನಿಜಕರುಣ ಬೆರಿಸಮ್ಮ ನಮ್ಮಲ್ಲಿ 4
--------------
ಜಯೇಶವಿಠಲ