ಪ್ರಾಣಿ ದಿನ ಮೋಸಗಳೆಯಬ್ಯಾಡ ಧ್ರುವ
ವಂದಿಸದೆ ಸಾಧು ಸಜ್ಜನರ ಶ್ರೀಪಾದವನು
ಬರುದೆ ಶೋಧವಿಯ ನೀ ಮಾಡಬ್ಯಾಡ
ಅರಿಯದ ಧಮರಸಂಗ ಕೂಡಬ್ಯಾಡ
ಪರನಿಂದೆ ದೂಷಣೆಯ ಮಾಡಬ್ಯಾಡ
ಗುರುಹಿರಿಯರ ಮಾತು ಮೀರಬ್ಯಾಡ 1
ಏನೆಂದು ತಿಳಿಯದೆ ಜ್ಞಾನಿಗಳ ಮಹಿಮೆಯನು
ಅಜ್ಞಾನತನದಲಿ ಉಳಬ್ಯಾಡ
ಹೀನ ಗುಣದಲಿ ನೀ ಬಾಳಬ್ಯಾಡ
ಅನ್ಯಾಯತನವೆ ನೀ ಕೇಳಬ್ಯಾಡ
ನಿನ್ನ ಸ್ತುತಿ ನೀನೆವೆ ಹೇಳಬ್ಯಾಡ 2
ನಿನ್ನೊಳು ನಿನ್ನ ಸ್ಥಿತಿಗಳನು ತಿಳಿಯದೆ
ಕುಂದ ನೀ ನೋಡಬ್ಯಾಡ
ನಾನೆ ದೊಡ್ಡವನೆಂದು ಆಡಬ್ಯಾಡ
ಮಹಿಪತಿ ನೀ ದಗಿಯ ಬೀಳಬ್ಯಾಡ
ಗುರು ಆಜ್ಞೆಯಿಂದ ಕಡಿಗ್ಯಾಗಬ್ಯಾಡ ಪ್ರಾಣಿ 3