ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು