ಕಾರಣನೇ ಇವನು ಎಲ್ಲಕ್ಕೂ
ಕಾರಣನೇ ಇವನು ಪ
ಕಾರಣನಿವನು ಸಾಧಾರಣನಲ್ಲನು
ಮಾರಮಣನು ಕರುಣಾರಸಮಯನು ಅ.ಪ
ಇಚ್ಛೆಯಿಂದಲಿ ತಾನು ಅಖಿಲ ಜಗ
ತ್ಸøಷ್ಟಿಯ ಮಾಡುವನು
ಸ್ವಚ್ಛನಾದರು ತನ್ನ ಮೆಚ್ಚಿಗೆಯಿಂದಲಿ
ತುಚ್ಛನೆಂಬೊ ಶಬ್ದ ವಾಚ್ಯನಾಗಿರುವನು 1
ಎಲ್ಲವ ಬಲ್ಲವನು ಈಶನು
ಇಲ್ಲದ ಸ್ಥಳವಿಲ್ಲ
ಚಿಲ್ಲರೆ ದೈವಗಳೆಲ್ಲರು ಈತನ
ಚೆಲ್ಲಾಟಗಳಿಗೆ ಉಲ್ಲಾಸಿಸುವರು 2
ಭಿನ್ನರೂಪಗಳಿಂದ ಜಗದೊಳು
ತನ್ನ ಲೀಲೆಯ ತೋರ್ಪ
ಸನ್ನುತ ಭಕುತಗೆ ಮನ್ನಣೆಯಿಂದ ಪ್ರ
ಸನ್ನನಾಗಿ ಉನ್ನತ ಪದವೀಯಲು 3