ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಳು ನೋಡೆ ಇಂದಿರ ದೇವಿ ಪ. ಬಂದಳು ನೋಡೆ ಗೋವಿಂದನ ಸತಿಯು ಸುಂದರ ಪಾದದಿಂದ ಒಂದೊಂದು ಹೆಜ್ಜೆಯನಿಡುತಾ ಅ.ಪ. ಉಲ್ಲಾಸದಿಂದಲೀ ಚೆಲ್ವೆ ಬಂದಳೀಗ 1 ವಜ್ರದಂತೆ ಕಾಂತಿ ಪ್ರಜ್ವಲಿಸುತ್ತಲೀ ಗೆಜ್ಜೆಪಾದದಿಂದ್ಹೆಜ್ಜೆಯನಿಡುತಲೀಗ2 ಮಾರನಮಾತೆಯು ಮುಂಗುರುಳನೇ ತಿದ್ದಿ ಮುಡಿಯ ಮೇಲಿನ ಮಲ್ಲಿಗೆ ಉದುರುತ್ತ 3 ಕಡಗ ಕಂಕಣವು ಬೆಡಗಿನಿಂದಾಲಿಟ್ಟು ನಡಮುಡಿಮೇಲೆ ಅಡಿಯನಿಡುತಲೀಗ 4 ಕುಕ್ಷಿಯೊಳೀರೇಳು ಜಗವಪೊತ್ತುವನಾ ವಕ್ಷಸ್ಥಳದ ಲಕ್ಷ್ಮಿ ಬಂದಾಳೀಗ 5 ಹರಿಯ ಮಂದಿರಕ್ಕೆ ಸರಸದಿಂದಲೀಗ ಓರೆನೋಟದಿಂದ ಮುಗುಳು ನಗೆಯ ನಗುತ 6 ಚಂದದಿಂದಲೀಗ ಬಂದು ಕುಳಿತುಕೊಂಡು ಮಂದ ಭಾಗ್ಯಳಿಗಾನಂದವ ಕೊಡುವಳು 7 ಇಂದಿರೆ ದೇವನ್ನ ಬಂಧನವಾ ಬಿಡಿಸಿ ತಂದೆಗೋವಿಂದನ್ನ ಕಂಡು ತೋರೆ ತಾಯಿ 8 ರಮಾವಲ್ಲಭವಿಠಲನ ಸ್ಮರಣೆಯು ನಿರುತ ಮಾಡುವಂಥ ವರವ ಕೊಡು ತಾಯೆ 9
--------------
ಸರಸಾಬಾಯಿ