ನಿನ್ನ ನಂಬಿದೆನಯ್ಯ ಚನ್ನಕೇಶವರಾಯ
ಇನ್ನಾದಾರೂ ಕೃಪೆಯ ತೋರಿಸಯ್ಯ ಪ
ಎನ್ನ ಕರ್ಮದ ಫಲದಿ ಬನ್ನಗೊಂಡಿಹೆನಯ್ಯ
ನಿನ್ನ ಚರಣವನೆನಗೆ ಸನ್ನಿಹಿತ ಮಾಡಯ್ಯ ಅ.ಪ
ನಡೆವುದೂ ನಿನಗಾಗಿ ನುಡಿವುದೂ ನಿನಗಾಗಿ
ಪಡೆವುದೂ ನಿನಗಾಗಿ ಎನ್ನಿಸಯ್ಯ
ಕೊಡುವವನು ನೀನಾಗಿ ಪಡೆವವನು ನಾನಾಗಿ
ಪೊಡವಿಯಲೆಷ್ಟುದಿನ ಬಾಳ್ವುದಯ್ಯ 1
ಕಲಿಯುಗದಿ ಭಜನೆಯಿಂದಲೆ ಭವವು ಕಳೆವುದೆಂದು
ಉಲಿದರೈ ವ್ಯಾಸಾದಿ ಮುನಿವರ್ಯರು
ಕಲುಷ ಪೂರಿತನಾಗಿ
ಬಲುನೊಂದೆ ಕೈ ಪಿಡಿಯೊ ಮಾಂಗಿರಿರಂಗ 2