ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಧನ್ಯನಾದೆ ಭೂಮಂಡಲದೋಳ್ ಪ ಶ್ರೀ ಗುರುಸಾರ್ವಭೌಮ ರಾಘವೇಂದ್ರರಾ 1 ಕಲಿಯುಗದೋಳ್ ಭಕ್ತಜನರಾ ಉದ್ಧರಿಸಬೇಕು ಎಂಬ ಮನದಿ ವರಮಂತ್ರಾಲಯದೊಳ್ ಬಂದು ನಿಂದಿಹ ಯತಿವರರಾ 2 ಮಂಗಳಮೂರುತಿ ರಾಘವೇಂದ್ರರ ಬೃಂದಾವನ ಮನದಣೆಯೆ 3 ವಿಶಿಷ್ಟ ಜನರ ಕಷ್ಟಗಳನು ನಿಮಿಷಮಾತ್ರದಿ ಕಳೆದು ಸಲಹುವ ಶ್ರೇಷ್ಟ ಗುರುಗಳ ದಿವ್ಯವಾದ ದರ್ಶನ ಭಾಗ್ಯಾ ದೊರೆಕಿತಿಂದು 4 ಆದಿವ್ಯಾಧಿಗಳೆಲ್ಲ ಹರಿಸಿ ಅಂಧ ಬಧಿರ ಮೂಕತ್ವ ತೊಲಗಿಸಿ ಬಂದ ದುರಿತಗಳೆಲ್ಲ ಓಡಿಸಿ ಕಂದನಂದದಿ ಸಲಹುವ ಗುರುಗಳಾ5 ದಿನದಿನದೊಳ್ ಇವರ ಮಹಿಮೆ ಅಧಿಕವಾಗುತಿರಲು ಕಂಡು ಹಿಂಡು ಹಿಂಡಾಗಿ ಬರುತಲಿಹರೂ 6 ಹೆಜ್ಜೆ ಹೆಜ್ಜೆಗೆ ವಂದಿಸುತಲೀ ದಂಡೆ ಮುಡಿ ಉರುಳುತಲೀ ಮಂಡೆಬಾಗಿ ನಮಿಸತಲಿ ಬಿಡದೆ ರಾಯರ ಕೊಂಡಾಡುತಲೀ 7 ಜನರೆನರವ ಕೊಡುತಾ ಕೊಡುವ ದಾತಾ 8 ನಿತ್ಯ ನಿತ್ಯದಿ ಬ್ರಾಹ್ಮಣರ ವೇದ ಪುರಾಣ ನಡೆಯುತಿರುವುದು ಕೇಳಿ ಭಕ್ತಿಯಿಂದ ಜನರಾನಂದ ಭರಿತರಾಗುತಿಹರು 9 ಕೇಳುತಿಹುದು ಮಂತ್ರಘೋಷ ಪೇಳುತಿಹ ಪುರಾಣ ರಹಸ್ಯ ನೀಡುತಿಹರು ಗುರೂಪದೇಶ ಎಮಗಾಯಿತಿಂದು ಬಹುಸಂತೋಷ10 ಗುರುಗಳ ಮನಸಾರಾ11 ಬಂದ ಭಕ್ತಬೃಂದಕೆಲ್ಲ ಬೇಡಿ ದೊರಗಳ ನೀಡುತ ಸಲಹಿ ಉಣಿಸಿದಣಿಸಿ ಹರಸಿ ಅವರ ಆನಂದದಿಂದ ಕಳುಹುತಿಹರು 12 ಭಕ್ತರಸವ ಪಾನಮಾಡಿಸಿ ಮುಕ್ತಿ ಮಾರ್ಗಕೆ ದಾರಿ ತೋರಿಸಿ ಕರ್ತೃ ಶ್ರೀಹರಿ ಹೊರತುಯಿಲ್ಲೆಂದು ಸತ್ಯವಾಕ್ಯ ವ್ಯಾಕ್ತಪಡಿಸುತಿಹರು13 ಭಕ್ತಜನರ ಪೊರೆಯಲಿವರ ಸರಿಗಾಣೆನೀಧರೆಯೊಳಗೆ ತಂದೆಯಂದದಿ ಬಿಡದೆ ಕಾಯ್ವರು ಸಾರ್ವಭೌಮ ಶ್ರೀ ರಾಘವೇಂದ್ರರು 14 ಎಷ್ಟು ಜನ್ಮದ ಸುಕೃತದ ಫಲವೋ ಶ್ರೇಷ್ಟಗುರುಗಳ ದರ್ಶನವಾಯಿತು ಕಂಗಳಿಂದಲಿ ಕಂಡು ಮನದ ಕ್ಲೇಶವೆಲ್ಲ ಪರಿಹಾರವಾಯಿತು 15 ಹಿಂದೆ ಪ್ರಹ್ಲಾದರಾಜರೆನಿಸಿ ಬಂದು ಮಂಚಾಲೆಯಾಂಬಿಕೆ ದರ್ಶನ ಕೊಂಡು ಗುರುಗಳ ದರ್ಶನ ಮಾಡಿಸೆಂದು ಭಕ್ತಿಲಿಜನ ಬೇಡುತಿಹರು 16 ದೇಶ ದೇಶದ ಜನರಿಗೆಲ್ಲ ವಿಸ್ತಾರದಿಂದ ಎಲೆಗಳ್ಹಾಕಿ ಭಕ್ಷ್ಯ ಪಾಯಸಾನ್ನಗಳನು ತೃಪ್ತಿಯಿಂದ ಉಣಿಸುತಿಹರು 17 ಶ್ರೀ ರಾಘವೇಂದ್ರಾಯ ನಮಃ ಎಂದರೆ ದುರಿತಗಳೆಲ್ಲವದೂರಮಾಳ್ವರು ಸ್ಮರಣ ಮಾತ್ರದಿ ಸಕಲಪಾಪಗಳೆಲ್ಲ ನಾಶಗೊಳಿಸೋರು18 ಗುರುವಾರ ಪೂಜಾ ಸಂಭ್ರಮದಿಂದ ನಮಗಾಯಿತು ಇಂದು ಮುಂದೆ ನಮಿಸಲು ಭಕ್ತವೃಂದಾ 19 ಜಯ ಜಯತು ಗುರುರಾಜ ಜಯ ಜಯತು ಸುರಭೂಜ ಜಯತು ಶ್ರೀ ರಾಘವೇಂದ್ರಾ ಜಯ ಜಯತು ಜಯ ಜಯತು ಜಯ ಜಯಾ 20
--------------
ರಾಧಾಬಾಯಿ
ಕಂಡೆ ನಾ ಬ್ರಹ್ಮಾಂಡಯೊಡೆಯ ಶ್ರೀ ವೆಂಕಟೇಶನ ಪ ಕಂಡೆ ನಾ ಭಕುತರ ಹಿಂಡುಗಳು ನೆರೆ ಕೊಂಡಾಡುತಲಿದೆ ಪದಪುಂಡರೀಕವ ನಾ ಅ.ಪ ತುಂಗ ಮಹಿಮ ಸತ್ಸಂಗವಿತ್ತು ಮನದಂತರ ವರಿ- ತಾಂಗೀರಸದೀ ಮಂಗಳ ಪೌರ್ಣಿಮೆಭಾರ್ಗವವಾಸರದಿ ಭಾರ್ಗವಿಪತಿ ನಿನ್ನನು ಗ್ರಹದಿ ನಗದೊಡೆಯ ಭಕ್ತ- ರಘಹರಿಸುತ ಪನ್ನಗಗಿರಿಯೊಡೆಯ ನಿನ್ನಯ ಗುಡಿಯನ್ನು ಬಗೆ ಬಗೆ ಸುತ್ತಿಪರ ಹಿಂಡನ್ನು ನಾ ಕಂಡೆನೋ ಜಾಗು ಮಾಡದೆ ಬಾಯಿಬೀಗವ ಕೈಕೊಂಡು ಸಾಗಿ ಕಾಸಾರದಿ ಸ್ನಾನ ಮಾಡಿಕೊಂಡು ಬಾಗಿ ವರಾಹದೇವರ ವಂದಿಸಿ ಬೇಗದಿ ಹರಕೆ ಕೈಕೊಂಡಿಹ ದೇವನ 1 ಮುಕ್ತರೊಡೆಯ ಪುರುಷೋತ್ತಮ ನಿನ್ನಯ ಭಕ್ತರ ವಿಪತ್ತುಗಳೆಲ್ಲ ಹರಿಸಿಶಕ್ತ್ಯಾನುಸಾರ ತ್ವ- ದ್ಭಕ್ತರೆಸಗುವ ಅತ್ಯಲ್ಪಭಕ್ತಿಯ ಸ್ವೀಕರಿಸಿ ಭಕ್ತಿಯಿಂದ ಪ್ರಾಕಾರದಿ ಸುತ್ತಲು ಹೊತ್ತಗಂಡದೀಪಸಾರುತಲಿ ನಿತ್ಯನೂತನ ನಿನ್ನ ಸ್ತುತಿಸುತಲೀ ಮತ್ತೆ ಉರುಳುತಲೀ ಉತ್ತಮಗತಿಪ್ರದ ವ್ಯಕ್ತನಹುದೊ ತ್ವ- ದ್ಭಕ್ತರ ಮನೋರಥ ಪೂರ್ತಿಮಾಡುವ ಭಕ್ತವತ್ಸಲನೆಂಬ ಬಿರುದು ಪೊತ್ತ ಸ- ರ್ವೋತ್ತಮ ಶ್ರೀ ಪುರುಷೋತ್ತಮ ನಿನ್ನನು2 ಬೊಮ್ಮಜನಕ ಪರಬೊಮ್ಮನೆ ನಿನ್ನಯ ಸನ್ಮಹಿಮೆಯ ನಾ ಒಮ್ಮನದೀ ಒಮ್ಮೆಯಾದರು ಮನ್ಮನದಲಿ ನಿನ್ನಯ ಸನ್ಮಂಗಳರೂಪವ ನಿಲ್ಲಿಸದೆ ಸುಮ್ಮನೆಕುಳಿತು ಇಮ್ಮನನಾಗಿರೆ ಘಮ್ಮನೆ ಎನ್ನನು ಒಳಕ್ವೈದೆ ಕಣ್ಮನದೆದುರಲಿ ನೀ ನಿಂದೆ ನೀನೆನ್ನಯ ತಂದೆ ಸನ್ಮುದದಿಂದೆ ಪಾಮರನೆಂದೆನ್ನ ಪ್ರೇಮದಿ ಕರುಣಿಸಿ ಸನ್ಮಹಿಮೆಯ ತೋರ್ದೆ ಜಗದೀಶ ಕಾಮಿತಜನರ ಕಲ್ಪದ್ರುಮ ನೀನೆಲೊ ಈ ಮೇಲುಗಿರೀಶ ಶ್ರೀ ವೆಂಕಟೇಶಾ ನಿನ್ನ3
--------------
ಉರಗಾದ್ರಿವಾಸವಿಠಲದಾಸರು