ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಲ ಸುಂದರ ಲೀಲವಿಗ್ರಹನೆ ಪ ಭಂಜನ ಬಾರೈ ಉರುಟಣೆಗೆ ಅ.ಪ. ಸಾರಸ ರೇಖರಂಜಿತ ಪಾದಪಂಕಜಕೆ ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ 1 ಫಾಲ ಫಾಲ ದೇಶದಿ ನಾಂ ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ 2 ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ 3 ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ 4 ಚಕೋರ ಚಂದ್ರನೆ ಮಾಲೆಯನರ್ಪಿಸುವೆ ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ 5
--------------
ಬೇಟೆರಾಯ ದೀಕ್ಷಿತರು
ಬಾ ಉರುಟಣೆಗೆ ಕಾಂತ ಪ್ರಿಯಕಾಂತ ಪ. ಕರುಣವ ತೋರೋ ಕಮಲನಯನನೆ ತರುಣಿಮಣಿಯು ನಾ ಕರೆವೆನು ರಮಣ ಅ.ಪ. ವರ ಪನ್ನೀರಿಲಿ ಚರಣವ ತೊಳೆದು ಅರಿಶಿಣ ಹಚ್ಚುವೆ ಕಾಂತ ನಾ ವರ ಲಲಾಟಕೆ ಹರುಷದಿ ಕುಂಕುಮ ತಿಲಕವ ತಿದ್ದುವೆ ರಮಣ 1 ಅತ್ತರು ಪನ್ನೀರಿನ ಗಂಧವನು ಶಿಸ್ತಿಲಿ ಪೂಸುತಲೀಗ ವಿಸ್ತಾರವಾದ ಮಲ್ಲಿಗೆ ಮಾಲೆಯ ಚಿತ್ತಜನಯ್ಯ ಹಾಕುವೆನು ಪ್ರಿಯ 2 ಬಿಳಿಯೆಲೆ ಅಡಿಕೆ ಚೆಲುವಿನ ಸುಣ್ಣ ನಲಿದು ಕೊಡುವೆ ಬಾ ಕಾಂತ ಛಲವ್ಯಾಕೆನ್ನೊಳು ಶ್ರೀ ಶ್ರೀನಿವಾಸ ಒಲುವಿನಲಿ ಬಾ ಬೇಗ ರಮಣ 3
--------------
ಸರಸ್ವತಿ ಬಾಯಿ