ಒಟ್ಟು 7 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ದಾಸರ ಭಾಗ್ಯವಿದು ಪ ತಂದೆ ಮುದ್ದು ಮೋಹನ ದಾಸರ ಭಾಗ್ಯವಿದು ಅ.ಪ. ಕರಿಗಿರಿ ನರಹರಿ ಸಂದರ್ಶನವು | ನರಹರಿ ಭಕುತರ ವಿಹಿತದಸೇವೆ |ಪರಿಪರಿ ಗೈಯ್ಯುತ ಹಿಗ್ಗುತ ನಾನು | ಧರಿಸಿರುವಂಕಿತ ಭಾಗ್ಯವು ಎಲ್ಲಾ 1 ಉರುಗಾದ್ರಿವಾಸನ ಶರಣರ ಕೂಡೆ | ಸರಸದಿ ಕೇಳುತ ಹರಿ ಮಹಿಮೆಯನುಉರುತರ ಸುಖಸಂತೋಷದಿ ಕೀರ್ತನೆ | ಹಿರಿದಾಗಿ ಪಾಡುತ ನರ್ತಿಪುದೆಲ್ಲ2 ಭವನಿಧಿ ದಾಟಿಪ ಹವಣೆಯು ಎನಿಸುವ | ಭುವನ ಮೋಹನನ | ಗುಣರೂಪಗಳನವನವ ಕೀರ್ತನೆ ಸ್ತವನದಲಿ ಗುರು | ಗೋವಿಂದ ವಿಠಲ ನುಡಿಸುವುದೆಲ್ಲಾ 3
--------------
ಗುರುಗೋವಿಂದವಿಠಲರು
ನಂಬಿದೆ ನಿನಪಾದ ಅಂಬುಜಾಕ್ಷನ ಪ್ರಿಯಬೆಂಬಿಡದಲೆ ಯೆನ್ನ | ಕಾಯೋ |ಬೆಂಬಿಡದಲೆ ಯನ್ನ ಕಾಯೆಂದು ನಿನ್ನನುಹಂಬಲಿಸೂವೆ ಮೋಹನ್ನರಾಯಾ ಪ ದೋಷರಾಶಿಯನೀಗಿ | ದಾಸನ್ನ ಮಾಡಿದಋಷ್ಯಂಶರಾಗಿಹ ನಿಮ್ಮಾ |ಋಷ್ಯಂಶರು ವಿಜಯ ದಾಸರ ಪ್ರೇಮಕ್ಕೆಆಶ್ರಯನಾಗಿಪ್ಪ ಮೋಹನ್ನ 1 ಹೆಮ್ಮೆಯ ಪಡುವೆ ನಾ ನಿಮ್ಮವರವನೆಂದುದುರ್ಮಮತೆಯ ನೀಗೋ ಎನ್ನಾ |ದುರ್ಮಮತೆಯು ನೀಗಿ | ಭರ್ಮಗರ್ಭನ ಪಿತನಪೇರ್ಮೆ ದೊರಕಿಸೊ ಎನಗೆ ಮುನ್ನಾ 2 ಅಂಬುಜಾಂಬನಂಘ್ರಿ | ಅಂಬುಜ ತೋರೆಂದುಹಂಬಲಿಸಿ ಬೇಡುವೆ ನಿನಗೆ |ಹಂಬಲಿಸಿ ಬೇಡುವೆ | ಶಂಬರಾರಿಯ ತೇಜನಂಬಿ ಬಂದಿಹೆ ನಿನ್ನ ಅಡಿಗೇ 3 ವಿಷಯಧುಯ್ಯಲಿನಿಂದ | ಕ್ಲೇಶವಧಿಕವಯ್ಯ ವಿಷದಂತೆ ಕಾಣಿಸೊ ಜೀಯ |ವಿಷದಂತೆ ಕಾಣಿಸಿ | ಶೇಷವಿಲ್ಲಾಧಾಂಗೆ |ದೋಷವಳಿಸಿ ಕಾಯೊ ಜೀಯಾ 4 ನಿನ್ನ ವಂಶಜನಾಗಿ | ನಿನ್ನವರವನಾಗಿಉನ್ನಂತ ಮಹಿಮ ಶ್ರೀಹರಿಯಾ |ಉನ್ನಂತ ಮಹಿಮನು | ಅನ್ನಂತನ ಪಾದಕಾಣದಿದ್ದವನಿರೆ ವ್ಯರ್ಥ 5 ಪಂಚಾಶದ್ವತ್ಸರ | ಹಂಚಿಪೋಗುವ ಮುನ್ನಪಂಚರೂಪಾತ್ಮಕ ಹರಿಯಾ |ಪಂಚರೂಪಾತ್ಮ ವಿ | ರಿಂಚಿಪಿತನ ಪಾದಹಂಚಿಕಿಂದಲಿ ತೋರೊ ಮೋಹನ್ನ 6 ಉರುಗಾದ್ರಿವಾಸ ವಿಠಲಾತ್ಮಕನು ಶಿರಿಗುರುಗೋವಿಂದ ವಿಠ್ಠಲನ |ಗುರಗೋವಿಂದ ವಿಠಲನ ಚರಣಾರವಿಂದವತೋರಿ ಪೊರೆ ನಮ್ಮ ಹಿರಿಯಾ 7
--------------
ಗುರುಗೋವಿಂದವಿಠಲರು
ಭಕುತವತ್ಸಲ ಶೀಲಾ-ಶೇಷಗಿರಿಯ ಲೋಲಾ ಪ ನೀ ಕರುಣಿಸೊ ಎನ್ನಾ-ಕುಲಸ್ವಾಮಿ ಘನ್ನಾಅ.ಪ ಮಂದಭಾಗ್ಯನು ನಾನು ವೃಂದಾರಕ ವಂದ್ಯ ತಂದೆ ಎನಗೆಂದೆಂದು ಅನಿಮಿತ್ತಬಂಧೂ ವಂದಿಪೆ ನಿನ್ನಯ ದ್ವಂದ್ವಪಾದದ ಧ್ಯಾನ ಅ- ದೊಂದನಾದರು ಇತ್ತು ಬಂಧವ ಪರಿಹರಿಸೊ ಹಿಂದೆ ನಿನ್ನಯ ನಾಮ ಒಂದೇ ಬಂಧಹರಿಸಿತು ಭಕುತವೃಂದಕೆ ಅಂದು ಅವರೇನೆಂದು ಕರೆದರೋ ಮಂದರೋದ್ಧರ ಬಂಧಮೋಚಕ1 ಓಲೈಪರೋ ಮುಕ್ತಜಾಲ ನಿನ್ನ ಕಾಲನಾಮಕ ಆಪತ್ಕಾಲಬಾಂಧವನೆಂದು ಕಾಲಿಗೆರಗುವೆ ಕೃಪಾಳು ನೀನಲ್ಲವೆ ಸೊಲ್ಲಲಾಲಿಸೊ ಲಕುಮಿನಲ್ಲ ನೀ ನಲ್ಲದಲೆ ಇನ್ನಿಲ್ಲವೆಂದಿಗೂ ಬಲ್ಲಿದರಿಗತಿಬಲ್ಲಿದನು ಆ- ವಲ್ಲಿ ನೆನೆದರೆ ಅಲ್ಲೇ ಪೊರೆವೆ 2 ಪುರಾಣಪುರುಷನೆ ಪರಮ ಕರುಣಿ ಎಂದು ಪುರಾಣದೊಳು ನೀನೆ ಪ್ರತಿಪಾದ್ಯನೊ ಕರಿ ಧ್ರುವ ಭೃಗು ಭೀಷ್ಮರ ಚರಿತೆಯ ನೋಡಲು ಹರಿ ನಿನ್ನ ಸರಿಯುಂಟೆ ದುರಿತಾಪಹಾರದಿ ಸ್ಮರಿಪರಘ ಪರಿಹರಿಪ ಶ್ರೀಪ ಸುರಪಹರಮುಖವಿಬುಧವಂದ್ಯ ದರಸುದರ್ಶನಧಾರಿ ಶ್ರೀ ವೇಂಕಟೇಶಉರುಗಾದ್ರಿವಾಸ ವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ಸ್ಮರಿಸಿ ಬದುಕಿರೊ ಗುರುವರರಾ ನರ- ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ ದಾಸದೀಕ್ಷೆಯ ವಹಿಸಿದವರ ಹರಿ ದಾಸರ ಕೂಡಿ ನರ್ತಿಸಿ ನಲಿದವರ ಶ್ರೀಶನ ಮಹಿಮೆ ಬಲ್ಲವರ ಭವ ಪಾಶಗಳಳಿವ ಸನ್ಮಾರ್ಗಬೋಧಕರ 1 ಬಡತನದಲಿ ಬಳಲಿದವರ ಭಾಗ್ಯ ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ ಮೃಡಸಖನೊಲುಮೆ ಪಡೆದವರ ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2 ಪಂಕಜಾಕ್ಷನ ಪೊಗಳಿದವರ ತಂದೆ ವೆಂಕಟೇಶ ವಿಠ್ಠಲ ದಾಸರಿವರ ಬಿಂಕದಿ ಹರಿಯ ಮರೆತವರ ಗರ್ವ ಬಿಂಕಗಳಳಿಯ ಸನ್ಮಾರ್ಗಕೆಳದವರ3 ತಾಳ ತಂಬೂರಿ ಪಿಡಿದವರ ಗೆಜ್ಜೆ ತಾಳ ಮೇಳದಿ ನರ್ತಿಸಿ ನಲಿದವರ ವ್ಯಾಳ ಶಯನನ ಭಕ್ತರಿವರ ಸಂಜೆ ವೇಳೆ ಹರಿಭಜನೆ ಮಾಡಿ ನಲಿದವರ 4 ಮಡದಿ ಮಕ್ಕಳು ಬಂಧು ಜನರ ಕೂಡಿ ಕಡು ಸಂಭ್ರಮದಿ ಹರಿಭಜನೆ ಮಾಡ್ದವರ ಕಡಲ ಶಯನನ ಭಕ್ತರಿವರು ಭಾಗ್ಯ ಬಡತನ ಸಮವೆಂದು ತಿಳಿಯ ಹೇಳ್ದವರ 5 ಹರಿಗುಣ ಕೀರ್ತಿಸಿದವರ ನರ ಹರಿಯ ಮಹಿಮೆಗಳ ಶಿಷ್ಯರಿಗೊರೆದವರ ಹರಿಯೆ ಸರ್ವೋತ್ತಮನೆಂದವರ ನಮ್ಮ ಉರುಗಾದ್ರಿವಾಸ ವಿಠ್ಠಲನ ನಂಬಿದವರ6 ಮಮತೆಯ ಬಿಡಬೇಕೆಂದವರ ದೇಹ ಮಮತೆಯ ಬಿಡುತ ಹರಿಪುರ ಸೇರಿದವರ ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7
--------------
ನಿಡಗುರುಕಿ ಜೀವೂಬಾಯಿ
ಶ್ರೀನಿವಾಸನೆ ಏಳು ಶ್ರೀನಿಕೇತನ ಏಳುಗಾನಲೋಲನೆ ಏಳು ಸಾನುರಾಗದಲಿಏಳಯ್ಯ ಬೆಳಗಾಯಿತು ಪನಂಬಿದೆ ತಂದೆ ಮುದ್ದುಮೋಹನ ವಿಠ್ಠಲ ಏಳುಸುಂದರ ಶ್ರೀ ಉರುಗಾದ್ರಿವಾಸ ವಿಠ್ಠಲ ಏಳುಇಂದುಸಿರಿಉರುಗಾದ್ರಿವಾಸ ವಿಠ್ಠಲ ಏಳುಇಂದಿರಾಪತಿತಂದೆ ವೆಂಕಟೇಶ ವಿಠ್ಠಲನೆ1ಆನಂದಮಯಅಂತರಾತ್ಮ ವಿಠ್ಠಲ ಏಳುನವನೀತಧರ ತಾಂಡವ ಕೃಷ್ಣ ವಿಠ್ಠಲ ಏಳುಜಗವ ಮೋಹಿಪಜಯಾಪತಿವಿಠ್ಠಲ ಏಳುಸಮರ್ಯಾರೋ ನಿನಗಿನ್ನು ಶಾಂತೀಶ ವಿಠ್ಠಲ ಏಳಯ್ಯ 2ಗಂಗೆಯ ಪಡೆದ ಗಜವರದ ವಿಠ್ಠಲ ಏಳುಮಂಗಳ ಮಹಿಮ ಶೇಷಶಯನ ವಿಠ್ಠಲ ಏಳುಗರುಡನೇರುತ ಪೊರೆದಹರಿವಿಠ್ಠಲ ನೀ ಏಳುನಿರುತಪೊರೆ ಎಮ್ಮ ಧೃವವರದ ವಿಠ್ಠಲ ಏಳಯ್ಯ 3ಪರಿಪಾಲಿಪ ಗುರುವಾಸುದೇವ ವಿಠ್ಠಲ ಏಳುವರಪಾಲಿಪ ವರದ ಲಕ್ಷ್ಮೀಶ ವಿಠ್ಠಲ ಏಳುಪದ್ಮನಾಭಪ್ರದ್ಯುಮ್ನ ವಿಠ್ಠಲ ಏಳುಮುದ್ದುಮಖದ ವರದ ವೆಂಕಟೇಶ ವಿಠ್ಠಲನೇ 4ಸಜ್ಜನರ ಪ್ರಿಯ ಶ್ರೀ ಸುಙ್ಞÕನ ವಿಠ್ಠಲ ಏಳುಶಾಮಸುಂದರ ಕೃಷ್ಣ ಶ್ರೀನಾಥ ವಿಠ್ಠಲ ಏಳುಭಯಹಾರಿಭಾರತೀಶವಿಠ್ಠಲ ನೀ ಏಳುಪರಿಸರನೊಡೆಯ ಶ್ರೀ ವರಹ ವಿಠ್ಠಲನೆ 5ಜ್ಞಾನನಿಧಿಆನಂದಮಯವಿಠ್ಠಲ ನೀ ಏಳುಸಜ್ಜನ ಪ್ರಿಯ ಶ್ರೀಪ್ರಾಜÕ ವಿಠ್ಠಲ ಏಳುಜಗನ್ಮೋಹನ ಜಗದ್ಭರಿತ ವಿಠ್ಠಲ ಏಳುವಿಶ್ವಮೂರುತಿ ವಿಜ್ಞಾನಮಯ ವಿಠ್ಠಲನೇ 6ವಿಷ್ಣುಮೂರುತಿ ಕ್ರಷ್ಣದ್ವೈಪಾಯನ ವಿಠ್ಠಲ ಏಳುಅಕ್ಷರೇಢ್ಯನೆ ಲಕ್ಷ್ಮೀಶ ವಿಠ್ಠಲ ಏಳುಕಂಟಕಹಾರಿ ಶ್ರೀವೆಂಕಟೇಶ ವಿಠ್ಠಲ ಏಳುಸರಸೀಜಾಕ್ಷನೆ ಸಲಹೋ ಶ್ರೀರಮಣ ವಿಠ್ಠಲನೆ 7ದುರುಳರ ಮಡುಹಿದ ವರದ ವಿಠ್ಠಲ ಏಳುಕಂಜಾಕ್ಷ ಪನ್ನಗಶಯನ ವಿಠ್ಠಲ ಏಳುದಾರಿತೋರುವ ದಾಮೋದರ ವಿಠ್ಠಲ ನೀ ಏಳುಸರಸಿಜನಾಭನೆಪೊರೆಎನ್ನ ವಿಠ್ಠಲ8ಕಂಜಾಕ್ಷ ಕಮಲನಾಥ ವಿಠ್ಠಲ ಏಳುಮುರಮರ್ದನನೆ ಏಳು ಮುರಳೀಧರ ವಿಠ್ಠಲದಯದಿ ಪಾಲಿಪ ದಯಾನಿಧೆ ವಿಠ್ಠಲ ನೀ ಏಳುಅಚ್ಚುತಹರಿಕೃಷ್ಣ ಕ್ರೇತಜÕ ವಿಠ್ಠಲ9ಜ್ಞಾನಿಗಳರಸ ಆನಂದ ವಿಠ್ಠಲ ಏಳುಭಾಗವತಪ್ರಿಯ ಭಾರ್ಗವೀಶ ವಿಠ್ಠಲ ಏಳುಕರ್ತೃ ಶ್ರೀ ಪುರುಷೋತ್ತಮ ವಿಠ್ಠಲ ನೀ ಏಳುಮುರವೈರಿ ಮಧುರಾನಾಥ ವಿಠ್ಠಲನೆ 10ರಮೆಯರಸನೆ ರಮಾಧವ ವಿಠ್ಠಲ ನೀ ಏಳುಕರುಣಾಳುಹರಿಕಾರುಣ್ಯ ವಿಠ್ಠಲ ಏಳುಎದುರಿಲ್ಲ ನಿನಗೆ ಯದುಪತಿ ನೀ ಏಳುಉದ್ಧರಿಸೆನ್ನಉದ್ಧವವರದ ವಿಠ್ಠಲನೆ11ಗೋಪಿಕಾಲೋಲ ಗೋಪೀನಾಥ ವಿಠ್ಠಲ ಏಳುವೆಂಕಟೇಶ ವೈಕುಂಠಪತಿ ವಿಠ್ಠಲ ಏಳುಶ್ರೀನಿಕೇತನ ಶ್ರೀಕಾಂತ ವಿಠ್ಠಲ ಏಳುಧನ್ಯನಾದೆನೋ ದೇವ ಧನ್ವಂತ್ರಿವಿಠ್ಠಲ 12ಶ್ರೀಧರಪೊರೆವೇದವತೀಶ ವಿಠ್ಠಲ ಏಳುಸಾಧುಗಳರಸನೆ ಭಕ್ತವತ್ಸಲ ಏಳುಮೇಧಿನಿಯೊಳು ನಿನ್ನ ಪೋಲುವರ್ಯಾರಿಲ್ಲಸಾದರದಿಂ ಕೇಳೋ ನೀ ಎನ್ನಸೊಲ್ಲ 13ರನ್ನ ಮಂಟಪದೊಳಗೆ ಚಿನ್ನದ ತೊಟ್ಟಿಲೊಳುಕನ್ನೆಯರು ತೂಗಿ ಪಾಡಿದರೊ ಗೋವಿಂದಕರುಣಾಸಾಗರ ಕೃಷ್ಣ ಕಡು ನಿದ್ರೆ ಸಾಕೆಂದುಕಮಲಾಕ್ಷಿ ಸ್ತುತಿಸುವಳು ಕಮಲನಾಭವಿಠ್ಠಲಏಳಯ್ಯ ಬೆಳಗಾಯಿತು 14
--------------
ನಿಡಗುರುಕಿ ಜೀವೂಬಾಯಿ