ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಧ್ರುವ ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ ಉರಿಯನಪ್ಪಲು ಬಹುದು ಗರಳವನು ಕುಡಿ ಬಹುದು ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1 ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು ಅಗಜೆಯರಸನ ಉರಿಯ ನಯನ ಕಾನಲು ಬಹುದು ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2 ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3 ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು ವಿಷದ ಉರುಗನ ಕೂಡೆ ಸರಸವಾಡಲು ಬಹುದು 4 ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ ದುರಿತ ನಾಶನವಹುದು ಮರಳಿ ಜನ್ಮಕೆ ಬಾರದಂಥ ಪದವಿಯಹುದು5
--------------
ಕವಿ ಪರಮದೇವದಾಸರು
ಎಷ್ಟೋಹರಿಮರುತರ ಕೃಪಿ ನಿನ್ನಲ್ಲಿ |ಕೆಟ್ಟುದೇ ಭೂಷಣವಾಗಿಹುದೋ ಪಾರ್ವತೀ ರಮಣ ಪವಿಷವನ್ನೆ ಭೋಜನ ಮಾಡಿ ಜೀರ್ಣಿಸಿಕೊಂಡಿ |ವಸನಬಿಟ್ಟು ಜಿನಸ್ಥಿ ಭಸ್ಮ ಧರಿಸಿ ||ವೃಷಭವಾಹನನಾಗಿ ಭೂತ ಪ್ರೇತಗಳೊಳು ಸ್ಮ |ರಿಸದ ಭೂಮಿಯೊಳಿರಲು ಪೂಜಿಪರು ಸುರರೆಲ್ಲ 1ತಂದೆ ತಲೆ ಕಡಿದುದಕೆಕುಂದುಹೊಂದದಲಿದ್ದೆ |ನಿಂದಿತನ ಶಿರದ ಮೇಲಿರಿಸಿಯಿದ್ದೆ ||ಒಂದೊಂದೆ ನೀನೆ ಪರದೈವ ಎಂದು ಪೇಳ್ದೆ | ಗೋವಿಂದನಿಂದರ್ಚನೆಯ ಕೊಂಡೆ ಭಳಿ ಭಳಿರೆ ಶಿವ 2ಗುರುವೆನಿಸಿಕೊಂಬೆ ಪ್ರಾಣೇಶ ವಿಠಲನೊಳು | ಮತ್ಸರಿಸುತಿಹ ಖಳರಿಗೆ ಇದಲ್ಪವೇನೊ ||ಸರಿವಬ್ಬರಿಗೆ ಆಹೆನೆಂಬುವನು ಕೆಡುವ ನೀ |ಉರುಗನಂತಾಗಬೇಕೆಂದಾಗಿ ಮೆರೆದೆಲವೊ3
--------------
ಪ್ರಾಣೇಶದಾಸರು
ಹರಿಯೆ ಸರ್ವೋತ್ತಮ ಹರಿಯೆ ಪರದೈವತ |ಹರಿಯೆ ಸರ್ವಂ ವಿಷ್ಣುಮಯಂ ಜಗತು ಪ.ಹರಿಯಲ್ಲದನ್ಯತ್ರ ದೈವಗಳುಂಟೆಂದು |ಉರುಗನ ಮುಡಿಯನಾರಾದರೆತ್ತಲಿ ಅಪಜಗಂಗಳ ಪುಟ್ಟಿಸುವಬೊಮ್ಮ ನಿನ್ನ ಮಗ |ಜಗದ ಸಂಹಾರಕ ನಿನ್ನ ಮೊಮ್ಮಗನು ||ಜಗದ ಪಾವನೆ ಭಾಗೀರಥಿ ನಿನ್ನ ಮಗಳು |ಜಗದ ಜೀವನಮಾತೆ ನಿನ್ನರಸಿಯಲೆ ದೇವ 1ವಿಶ್ವತೋಮುಖ ನೀನೆ, ವಿಶ್ವತಶ್ಚಕ್ಷು ನೀನೆ |ವಿಶ್ವತೋಬಾಹುವಿಶ್ವ ಉದರ ನೀನೆ ||ವಿಶ್ವವ್ಯಾಪಾರ ವಿಶ್ವಸೂತ್ರಧಾರಕ ನೀನೆ |ವಿಶ್ವನಾಟಕ ವಿಶ್ವವಿಷ್ಣುವೇ ನಮೋ ನಮೋ 2ಆಗಮನಿಗಮ ಪೌರಾಣ ಶಾಸ್ತ್ರಂಗಳಿಗೆ |ಯೋಗಿಜನಕಗಮ್ಯಮೂರ್ತಿ ನೀನೆ ||ನಾಗಶಯನಸಿರಿ ಭೋಗಿಭೂಷಣವಿನುತ |ಭಾಗವತರ ಪ್ರಿಯ ಪುರಂದರವಿಠಲ 3
--------------
ಪುರಂದರದಾಸರು