ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ಮಹದಾದಿ ದೇವ ವಂದ್ಯ | ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು ರಹಸ್ಯಮತಿ ಕೊಡುವುದು ಸ್ವಾಮಿ ಪ ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ ಅನಂತ ಜನುಮವಾಗೆ ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು ಜ್ಞಾನಿಗಳಿಗರಿವಾಗಿದೆ ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ ಮಾನವನ ಕ್ಲೇಶಕೆಣಿಯೆ ಆನಂದ ನಂದನನೆ ತೃಣವ ಪಿಡಿದು ರುತುನ ವನು ಮಾಡಿ ತೋರುವ ಸ್ವಾಮಿ 1 ನಿನ್ನಧೀನ ಕರ್ಮಸ್ವಭಾವ ಮೊದಲಾಗಿ ಅನ್ಯಥಾ ಯಲ್ಲಿ ಕಾಣೆ ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ ಬಿನ್ನಪವ ಬರಿದೆನಿಸದೆ ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ ನಿನ್ನ ದಾಸನ ದಾಸನು ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ ಸನ್ನನಾಗೋ ಪಾವನ್ನರನ್ನ 2 ನರರಿಗೆ ಸಾಧನ ಸತ್ಕೀರ್ತನೆ ಎಂದು ಪರಮೇಷ್ಠಿ ಒರೆದನಿದಕೊ ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ ದುರಿತ ಬೆಮ್ಮೊಗವಾಗವು ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ ಶರಣರೊಳಗಿಟ್ಟು ಕಾಪಾಡು ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ3
--------------
ವಿಜಯದಾಸ
ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ ಕುಜನರೊಳಾಡದಲೆ ನಿಜ ಭಕುತಿಯಿಂದ ಭುಜಬಲವುಳ್ಳ ಪರಜರಟ್ಟುವ ದಿ ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ ಕರಯುಗಳ ಮುಗಿದು ಶಿರವಾನಿಲ್ಲದೆ ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ ಪರಿಹರವೊ ಬಂದರಘಳಿಗೆಯಲಿ ದುರುಳರಿಗಾಯ್ತು ಮರಿಯದೆ ಚೆನ್ನಾಗಿ1 ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ಜ್ಞಾನಾಂ ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು ಸುರರು ಮೆಚ್ಚುತಲಿರೆ ಮುರರಿಪು ಚತುರ್ದಶ ಧರಣಿಗೆ ಪರನೆಂದು ಬಿರಿದನು ಎತ್ತಿ ಡಂಗುರವ ಹೊಯಿಸಿ ಡಿಂಗರರಿಗೆ ಸಚ್ಛಾಸ್ತ್ರ ಕೊಡುವ ಯತಿಶಿರೋಮಣಿ ಕರ್ನಾ 2 ಪಾದಾಂಬುಜಾತ ಕೃಷ್ಣಾ ತನು ಭವಸರಿತ ನಿವಾಸಾ ದಿವಿಜೇಶನಾಯುಧ ಕವಚದಿಂದಲಿ ತನ್ನವರನ ಪೊರೆದೆತ್ತಿ ನವವಿಧ ಬಗೆ ತೋರಿ ತವಕದಿ ಕೋಲುಪುರ ಪವಿತುರ ಸ್ಥಳದಲ್ಲಿ ರವಿಯಂತೆ ಪೊಳವರು ಭವದೋಷ ಕಳೆವುತಾ ಕವಿಗಳ ಮನೋಹರ ವಿಜಯವಿಠ್ಠಲನ ಶ್ರವಣ ಮನನ ಧ್ಯಾನವನು ಬಲ್ಲವರಾ3
--------------
ವಿಜಯದಾಸ
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ ರೇಣು ನಂಬಿದ ಮಾನವ ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ ಪರದೈವ ನೀನೆಂದು ಮೂಢಮತಿಯಾದವನು | ಪರಿಪೂರ್ಣವಾಗಿ ನಿರುತ | ನೆರೆ ನಂಬಿದೆನು ನಾನಾ ಪ್ರಕಾರದಲಿ ಸ್ಮರಣೆ ಮಾಡುತ ಮನದಲಿ | ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ ಸ್ತರ ಮಾಡು ಇವನ ಕೀರ್ತಿ ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ ಕರಪಿಡಿದು ಪಾಲಿಸುವುದು ಸ್ವಾಮಿ1 ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ | ಸಾಕುವುದು ಸಾಕಾರನೆ ನೂಕು ದುರಳದಿಂದ ಬಂದ ವಿಪತ್ತುಗಳ ತಾಕಗೊಡದಂತೆ ವೇಗ ಶುಭ | ವಾಕು ನೇಮಿಪುದು ಸತತ ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ 2 ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು | ಸರ್ವರನು ಈ ವಿಧದಲಿ | ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ ನಿವ್ರ್ಯಾಜದವನ ಮಾಡಿ ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ ಸರ್ವದಾ ಕೃಪೆಮಾಡು ಎಂಬೆ ಸಿರಿ ವಿಜಯವಿಠ್ಠಲ ನಿನ್ನ ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ 3
--------------
ವಿಜಯದಾಸ