ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ಲೋಕನೀತಿ ಕುರಿತ ಕೀರ್ತನೆಗಳು ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ ಬಾಳುವ ಮಗನನು ಕೋಳುವಿಡಿದುದು ಯಮನ ನಾಳಿದೊಡೆಯ ವೇಲಾಪುರದರಸಾ ಪ ಪತಿಯನು ನೀಗಿದ ಸತಿಮಾದಮ್ಮನು ಸುತನಿಂ ಬದುಕುವೆನೆಂದೀ ಊರೊಳು ಅತಿ ತಿರಿತಂದೋವುತಲಿದ್ದಳು ಸುತ ಅಚ್ಯುತ ಸಲಹಯ್ಯಾ 1 ಉರಿಯೊಳು ಬಿದ್ದಂತೊರಲಿ ಪೊರಲಿ ವೋ ಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇ ದುರಿಯಶ ವೊಡೆಯಗೆ ಬರುವುದೆಂದು ನರ ಹರಿ ರಕ್ಷಿಪನೆಂದೊರೆದೆನು ಹರಿಯೆ 2 ಸತ್ತಮಗನ ನೀ ತಂದಿತ್ತುದಿಲ್ಲವೇ ಹೇ ಕತರ್ುೃವೆ ಸಾಂದೀಪೋತ್ತಮನಿಗೆ ಅಂದು ಉತ್ತರೆಯೊಡಲೊಳು ಅತ್ತು ಶಿಶುವು ಸಾ ವುತ್ತಿರಲುಳುಹಿದೆ ಚಿತ್ತಜನಯ್ಯಾ 3 ಇರಿದಪಮೃತ್ಯು ಪೊತ್ತಿರಿದಪವಾದವು ಉರುಳಿದೆ ನೋಡುತ್ತಿರುವರೆ ಸುಮ್ಮನೆ ಅರಿಯದಂತಿರ್ದಡೆ ಪರಿಪಾಲಿಪರಾರು ವರಮೃತ್ಯುಂಜಯ ಕರುಣಾಕರನೇ 4 ಮರಣವನೈದಿದ ತರಳ ನಂಜುಂಡನ ಕರುಣಿಸದಿರ್ದಡೆ ಶಿರವನರಿದು ನಾ ಚರಣದೊಳಿಡುವೆನು ದುರಿತಬಾಹುದು ನಿನ ಗರಿಯದೆ ವೈಕುಂಠವಿಠಲ ಚೆನ್ನಿಗನೇ 5
--------------
ಬೇಲೂರು ವೈಕುಂಠದಾಸರು
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1 ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2 ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
--------------
ಕನಕದಾಸ
ಸುಳ್ಳಿನೊಳಗೆ ನಾ ಬಲು ಸುಳ್ಳ ನನ್ನ ಸುಳ್ಳೆ ನನಗೊಳುಪಿಲ್ಲ ಪ ಸುಳ್ಳು ಹೇಳುವೆನು ಅಳತಿಲ್ಲ ಇದು ಎಳ್ಳಷ್ಟಾದರು ಸುಳ್ಳಲ್ಲ ಅ.ಪ ಸೂಜಿಗಡತರ್ಹೊಗೆಯೇಳ್ವುದ ಕಂಡೆ ಅಗ್ನಿ ಮೂಜಗಡರಿ ಸುಡುವುದು ಕಂಡೆ ಸೋಜಿಗ ಕಂಡೆನು ಉರಿಯೊಳು ಮತ್ತೊಂದು ಬೀಜ ಮೊಳೆತು ತೆನೆಯಾದದ್ದ ಕಂಡೆ 1 ಸಾಸಿವೆಕಾಳಷ್ಟು ಬಟ್ಟಲ ಕಂಡೆ ಇಡೀ ದೇಶ ಅದರೊಳಗಿಟ್ಟಿದ್ದ್ದು ಕಂಡೆ ಹಾಸ್ಯದ ಮಾತಲ್ಲ ತಿರುಗಿ ನೋಡಿ ನಾ ದೇಶದೊಳಗೆ ಆ ಬಟ್ಟಲ ಕಂಡೆ 2 ಮೈಯೆಲ್ಲ ತೂತಿನ ತಿದಿಯ ಕಂಡೆ ಅದು ವಾಯುತುಂಬಿ ಬಾತದ್ದು ಕಂಡೆ ದೀವಿಗೆಯಿಲ್ಲದೆ ಬೆಳಗದುಕಂಡೆ ಮತ್ತು ಕಿವುಡ ಮೂಕರ ಏಕಾಂತ ಕಂಡೆ 3 ಉರಿವುದ ಕಂಡೆನು ಬೆಂಕಿಲ್ಲದೆ ಅದು ಆರಿದ್ದಕಂಡೆನು ನೀರಿಲ್ಲದೆ ಹೊರುವುದ ಕಂಡೆನು ಕೂಲಿಲ್ಲದೆ ಮತ್ತು ಇರಿದುಕೊಲ್ವದು ಕಂಡೆ ಕತ್ತಿಲ್ಲದೆ 4 ಮೇಲಕೆ ಬೇರಿಳಿದ್ವøಕ್ಷ ಕಂಡೆನಲ್ಲಿ ಟೊಂಗೆ ನೆಲಕೆ ಬೆಳೆದದ್ದು ಕಂಡೆ ಕಣ್ಣಿಲಿ ಚಲಿಪದು ಕಂಡೆನು ಎಲ್ಲಿಗೆ ಬೇಕಲ್ಲಿ ಇದರ ಕೀಲಿಕಂಡೆ ಶ್ರೀರಾಮನ ಬಲ್ಲಿ 5
--------------
ರಾಮದಾಸರು
ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ ಪಒಡಲಿನಾಸಗೆ ಪರರ ಕಡೆಯಿಂದ ಧನವನ್ನು |ತಡೆಯದಲೆ ತಂದು ಸಂತೋಷ ಪಡುವೆ ||ಕೊಡುವ ವೇಳೆಗೆಅವರಬಿರುನುಡಿಗಳನು ಕೇಳ್ವ |ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2ಆಳಿದೊಡೆಯನ ಮಾತಕೇಳಿನಡೆಯಲು ಬಹುದು |ಉಳಿಗವ ಮಾಡಿ ಮನದಣಿಯ ಬಹುದು ||ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |ಪೇಳಲಳವಲ್ಲ ಋಣದವಗೊಂದು ಸೊಲ್ಲ 3ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು |(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4ಹೆತ್ತಸೂತಕಹತ್ತುದಿನಕೆ ಪರಿಹಾರವು |ಮೃತ್ಯು ಸೂತಕವು ಹನ್ನೆರಡು ದಿನವು ||ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5ಅವರದ್ರವ್ಯವ ದಾನ-ಧರ್ಮವನು ಮಾಡಿದರೆ |ಅವರಿಗಲ್ಲದೆ ಪುಣ್ಯ ಇವರಿಗುಂಟೆ ||ಅವರದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |ಅವರಮನೆಬಾಡಿಗೆಯ ಎತ್ತಿನಂದದಲಿ6ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |ಕಂದಿ ಕುಂದಿದೆನಯ್ಯ ಕರುಣಾನಿಧೆ ||ಇಂದಿರಾರಮಣ ಶ್ರೀ ಪುರಂದರವಿಠಲನೆ |ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 7
--------------
ಪುರಂದರದಾಸರು
ಪಾಲಿಸು ಲೋಕನಾಯಕನೆಗುಣಶೀಲ ಶಂಕರ ಗಂಗಾಧರನೆಫಾಲಲೋಚನಘೋರಕಾಲಭಯ ವಿದೂರನೀಲಕಂಠೇಶ್ವರನೇ ಭಕ್ತರಕಾವಬಾಲ ಚಂದಿರಧರನೇ ಪನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರಕಪಾಲಶೇಷಗೆಗಿಂತು ಸಾಧ್ಯವೇ 1ಉರಗಕುಂಡಲಧರ ರಜತಾದ್ರಿ ಗಿರಿವರಕರಿಚರ್ಮಾಂಬರಧರನೇ ಮುಕ್ತಿಯನೀವಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇಕಾಮನ ಕಣ್ಣ ಉರಿಯೊಳು ದಹಿಸಿದಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದನಿನ್ನ ಚರಣವಸುರರುನರದಾನವರು ಭಜಿಸಲುವರವನಿತಾ ತೆರದೊಳೆನ್ನನು 2ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲನಂದಿವಾಹನ ದೇವನೆನಿನ್ನಯ ಪಾದಕೊಂದಿಸುವೆನು ಶಿವನೆಎನ್ನೊಳು ಬಂದು ಪಾಲಿಸು ಪರಮೇಶನೆಭೀಮನಿಗಂದು ವರವಿತ್ತು ಮೆರೆಸಿದೆಇಂದ್ರಸುತನಿಗೆ ವನದಿ ನೀನತಿಚಂದದಲಿ ಶರ ಒಂದ ಪಾಲಿಸಿದಂದು ಕುರುಕುಲ ವೃಂದವನು ಗೋವಿಂದಸಾರಥಿಯಾಗಿ ಕೊಂದನು ಚಂದ್ರಧರನೇ 3
--------------
ಗೋವಿಂದದಾಸ