ಮಲಗು ಮಲಗೆಲೊ ಸುಮ್ಮನೆ ಸುಕುಮಾರ
ಚೆಲುವ ಜೋಗುಳವ ಪಾಡುವೆ ಗೋಪಾಲ ಪ
ಲಲನಾಮಣಿಯರು ಸುಲಭದಿ ನಿನ್ನನು
ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ
ಭೋಗಿಶಯನ ಹರಿ ಈ ಜಗದೊಳಗೆ
ಈಗ ಬಂದಿರುವ ಜಾಗವನರಿಯದೆ
ಯೋಗಿ ಜನರು ಅನುರಾಗದಿಂದ ನಿನ್ನ
ಸಾಗಿಸಲಿರುವರೊ ಕೂಗದೆ ಸುಖದಲಿ 1
ದುರುಳ ಶಕಟನನು ಮುರಿದ ಕೋಮಲದ
ಚರಣ ಕಮಲಗಳು ಉರಿಯುತಲಿದ್ದರು
ಮರೆಯಲದನು ಸುವಿನೋದವೀಯುವ
ಸರಸಪದಗಳನು ಪರಿಪರಿಯರುಹುವೆನೊ 2
ಎನ್ನಯ ಕರಗಳು ನೋಯುತಲಿರುವುವು
ಚಿನ್ಮಯ ರೂಪನೆ ನಿದ್ರೆಯ ಮಾಡೊ
ದಧಿ ಪಯ
ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ 3