ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲಕೆ ತಕ್ಕ ಸ್ವರೂಪ ಚಲುವಿಗೊಪ್ಪುವ ವಿದ್ಯೆ ಕಲೆಗೆ ಸಲ್ಲುವ ಸುಗುಣ ಭಳಿರೆ ನಿಪುಣ ಕಿರುಕುಳದೆ ಕೈ ನೀಡಿ ಕರೆಕರೆಯ ತಂದೊಡ್ಡಿ ಹರಿಸವಾನುವಮೋಡಿ ವರನಗಾಡಿ ಜೂಜುಗಾರರಿಗೆರೆಯ ಮೋಜಿನೋಳ್ ಸಮನರಿಯ ಸೋಜಿಗಂ ಮಿಗೆತೋರ್ಕುಮಿನಿತುಸೊರ್ಕು ನಿಶಿಚರಾಂತಕನೆನುವ ಪೆಸರಾಂತುಮೀತೆರದ ವಿಷಮವರ್ತನದಿ ಸಂತಸವ ಪಡುವ ಪರಿಯಿದಚ್ಚರಿಯಾಗಿ ತೋರ್ಕುಮೆನಗೆ ಪರಿಪರಿಯ ಚಿಂತೆಗಾಕರಮಿದಾಗೆ ಉರಿಯುತಿಹುದೀಬಗೆಯೊಡಲ ಬೇಗೆ ವರ ಶೇಷಗಿರೀಶನೆ ಶರಣನೆನಗೆ
--------------
ನಂಜನಗೂಡು ತಿರುಮಲಾಂಬಾ
ಮಲಗು ಮಲಗೆಲೊ ಸುಮ್ಮನೆ ಸುಕುಮಾರ ಚೆಲುವ ಜೋಗುಳವ ಪಾಡುವೆ ಗೋಪಾಲ ಪ ಲಲನಾಮಣಿಯರು ಸುಲಭದಿ ನಿನ್ನನು ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ ಭೋಗಿಶಯನ ಹರಿ ಈ ಜಗದೊಳಗೆ ಈಗ ಬಂದಿರುವ ಜಾಗವನರಿಯದೆ ಯೋಗಿ ಜನರು ಅನುರಾಗದಿಂದ ನಿನ್ನ ಸಾಗಿಸಲಿರುವರೊ ಕೂಗದೆ ಸುಖದಲಿ 1 ದುರುಳ ಶಕಟನನು ಮುರಿದ ಕೋಮಲದ ಚರಣ ಕಮಲಗಳು ಉರಿಯುತಲಿದ್ದರು ಮರೆಯಲದನು ಸುವಿನೋದವೀಯುವ ಸರಸಪದಗಳನು ಪರಿಪರಿಯರುಹುವೆನೊ 2 ಎನ್ನಯ ಕರಗಳು ನೋಯುತಲಿರುವುವು ಚಿನ್ಮಯ ರೂಪನೆ ನಿದ್ರೆಯ ಮಾಡೊ ದಧಿ ಪಯ ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ 3
--------------
ವಿದ್ಯಾಪ್ರಸನ್ನತೀರ್ಥರು
ಹನುಮ ಅಣಿಯಾರೊ ನಿನಗೆ ಈ ತ್ರಿಭುವನದೊಳಗೆಹಣಮಂತ ಗುಣವಂತ ಮಣಿಯುವೆನೊ ನಿನಗೆ ಪ ಗಡ್ ಗಡ್‍ಗಡನೆ ರಾಮನ ಪಾದಾಂಬುಜಕೆ ವಂದಿಸುತಖಡ್ ಖಡ್ ಖಡನೆ ಸಿಡಿಲಂತೆ ನಭದೊಳಗೆ ಗರ್ಜಿಸುತಧಡ್ ಧಡ್ ಧಡನೆ ಕಡಲನ್ನೆ ಜಿಗಿಯುತ್ತ ಭಡ್ ಭಡ್ ಭಡನೆ ಸೀತೆಯನು ಶೋಧಿಸುತ ಬಂದಿಯೋ 1 ಬರಬರನೆ ಬಿಂಕದಲಿ ಉರಿಯುತಿಹ ರಕ್ಕಸರದರ್ ದರ್ ದರನೆ ರಣರಂಗಕೊಬ್ಬನೇ ಎಳೆತಂದುಕರ್ ಕರ್ ಕರನೆ ಹಲ್ಗಿಡಿದು ತರಿಯುತ್ತ ಧರೆಯೊಳಗೆಭರ್ ಭರನೆ ಸಿರಿವರನ ಇಚ್ಛೆಯನು ಪೂರ್ತಿಸಿದಿ 2 ಖುದ್ ಖುದ್ ಖುದನೆ ನಗುತ ರಘುರಾಮನನು ಹೃದಯದೊಳುಖುದ್ ಖುದ್ ಖುದನೆ ಬಿಡದೇಳ್ವ ಭಕುತಿಯಲಿ ಸೇವಿಸುತಗದ್ ಗದ್ ಗದುಗಿನೊಳು ವೀರನಾರಾಯಣನಮುದ್ ಮುದ್ ವಂದಿಸಿ ಪರಬ್ರಹ್ಮನ ಪದವಿಯನೆ ಪಡೆಯೊ3
--------------
ವೀರನಾರಾಯಣ
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು