ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ
ಉರಿಯನಪ್ಪಲು ಬಹುದು
ಗರಳವನು ಕುಡಿ ಬಹುದು
ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1
ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು
ಅಗಜೆಯರಸನ ಉರಿಯ ನಯನ ಕಾನಲು ಬಹುದು
ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2
ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು
ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು
ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3
ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು
ವಿಷದ ಉರುಗನ ಕೂಡೆ ಸರಸವಾಡಲು ಬಹುದು 4
ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ
ದುರಿತ ನಾಶನವಹುದು
ಮರಳಿ ಜನ್ಮಕೆ ಬಾರದಂಥ ಪದವಿಯಹುದು5