ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಳಿ ಕೂಗಿತು ತಂಪು ಗಾಳಿ ಬೀಸಿತು ಏಳಯ್ಯಾ ಬೆಳಗಾಯಿತು ಪ ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ ಕಂಸ ದಾನವರನಳಿದು ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ1 ವೇದವನು ತಂದೆ ಸುರವೃಂದಕಮೃತವನಿತ್ತೆ ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ ಮೋದದಿಂದಜಪದವಿಯ ಆಂಜನೇಯಗಿತ್ತೆ ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ ವೇದನುತ ನಿರ್ವಸನ ಸುಹಯಾರೂಢನೇ2 ಶರಣಜನ ಬಂದು ಸುಸ್ವರದಿಂದ ಪಾಡುತಿರೆ ಪರಿ ಕಣ್ಣಮುಚ್ಚುವುದೇ ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ ಉರಿಮೋರೆಯಿಂದ ತರಳಾಟ ಆಡುವುದೇ ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ ಭರದಿ ತುರಗವನೇರು ನರಸಿಂಹ ವಿಠ್ಠಲಾ 3
--------------
ನರಸಿಂಹವಿಠಲರು
ಬಂಡು ಮಾಡುವರಲ್ಲೊ ರಂಗೈಯ್ಯ ಪ ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ ಬಿಡುಗಂಣನಿವನೆಂಬರೋ ರಂಗೈಯ್ಯಾ 1 ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ ದೊಡ್ಡ ದೆವ್ವಯೆಂಬರೊ ರಂಗೈಯ್ಯಾ 2 ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ ಕೋರೆದಾಡಿಯನೆಂಬರೊ ರಂಗೈಯ್ಯಾ 3 ತರಳನ ಸಲಹಲು ಸಿರಿಗೆ ಪೇಳದೆ ಬಂದ ಉರಿಮೋರೆಯವನೆಂಬರೊ ರಂಗೈಯ್ಯಾ 4 ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ ಕಪಟ ತಿರುಕನೆಂಬರೊ ರಂಗೈಯ್ಯಾ 5 ಪಿತನ ಮಾತನು ಕೇಳಿ ಮಾತೃಹತ್ಯವಗೈದ ಪತಿತ ಹಾರುವನೆಂಬರೊ ರಂಗೈಯ್ಯಾ 6 ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ ಹತಭಾಗ್ಯನಿವನೆಂಬರೊ ರಂಗೈಯ್ಯಾ 7 ನೆರೆಹೊರೆ ಹೆಂಗಳ ಸುರತದಿ ಕೂಡಿದ ಜಾರ ಚೋರನು ಎಂಬರೊ ರಂಗೈಯ್ಯಾ 8 ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ 9 ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ ದುಷ್ಟ ರಾಹುತನೆಂಬರೊ ರಂಗೈಯ್ಯಾ 10 ಕಂದಾ ನೀ ನಿರ್ದೋಷ ರಂಗೇಶವಿಠಲ ನೆಂದು ತಿಳಿದು ದೂರುವರೊ ರಂಗೈಯ್ಯಾ 11
--------------
ರಂಗೇಶವಿಠಲದಾಸರು
ದಾನವನ ಕೊಂದದ್ದಲ್ಲ ಕಾಣಿರೊ |ನಾನಾ ವಿನೋದಿ ನಮ್ಮ ತೊರವೆಯ ನರಸಿಂಹ ಪ.ಅಚ್ಚ ಪ್ರಹ್ಲಾದನೆಂಬ ರತ್ನವಿದ್ದ ಒಡಲೊಳು |ಬಿಚ್ಚಿ ಬಗಿದು ನೋಡಿದನಿನ್ನೆಷ್ಟು ಇದ್ದಾವೆಂದು 1ನಂಟುತನ ಬೆಳೆಯಬೇಕೆಂದು ಕರುಳ ಕೊರಳೊಳು |ಗಂಟುಹಾಕಿಕೊಂಡನೆಷ್ಟು ಸ್ನೇಹಸಂಬಂಧದಿಂದ 2ಸಿರಿಮುದ್ದು ನರಸಿಂಹ ಪ್ರಹ್ಲಾದಪಾಲಕ |ಉರಿಮೋರೆ ದೈವ ನಮ್ಮಪುರಂದರವಿಠಲ3
--------------
ಪುರಂದರದಾಸರು