ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ | ಸಾರು ನೀನು ಎನಗೆ ಸುಮ್ಮನ್ಯಾತÀಕೆ ಯಿದ್ದೀ ಪ ನೀರೊಳು ಮುಣಗೆ ವೇದವ ತಂದಾತನೊ | ಭಾರವನು ಪೊತ್ತು ಸುರರ ಕಾಯಿದಾತನೊ | ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ | ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1 ಗಗನಕೆ ಬೆಳದು ಸುರ ನದಿಯ ಪಡೆದಾತನೊ | ಹಗೆಗಳ ಕೊಂದು ಹರುಷಿತನಾದನೊ | ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ | ಮಗನಮಗನ ತಂದ ಮಹಿಮನೊ 2 ಹರಗೆ ಸಾಯಕವಾಗಿ ಪುರ ಉರಹಿದಾತನೊ | ದುರುಳರನ ಕೊಂದ ದುರ್ಲಭದೇವನೊ | ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ - ಶರಣರಿಗೊಲಿದು ಬಂದ ಸರ್ವೋತ್ತಮನೊ 3
--------------
ವಿಜಯದಾಸ
ಧುಮ್ಮಸಾಲೆನ್ನಿರೈಯ್ಯಾ | ಒಮ್ಮೆ ಸಾಧು ಜನರು | ಬೊಮ್ಮನ ಪದವಪಡದ | ನಮ್ಮ ಮುಖ್ಯ ಪ್ರಾಣನ ಪ ನಷ್ಟರಾವಣನ ಬಾಲಕ್ಕಿಟ್ಟ ಬೆಂಕಿಯಿಂದ ಲಂಕಾ | ಪಟ್ಟಣವ ಸುಟ್ಟು ಬೊಬ್ಬೆ ನಿಟ್ಟ ಹನುಮಪ್ಪನಾ 1 ಪಾಪಕರ್ಮಕೀಚಕಾದಿ | ಕಾಪುರುಷ ಕೌರವರಾ | ಕೋಪಾಗ್ನಿಯಲಿ ಸುಟ್ಟ | ಭೂಪ ಭೀಮನಾ 2 ಉದ್ಧಟ ದುರ್ವಾದಿಗಳಾ | ಸಿದ್ಧಾಂತವೆಂಬ ವಹ್ನಿಯಲ್ಲಿ | ಬುದ್ಧಿಯಿಂದ ಉರಹಿದಾಪ್ರ | ಸಿದ್ಧಮಧ್ವರಾಯನಾ 3 ಮೂಲ ಗುರುವಾಗಿ ಜಗ | ಪಾಲಿಸುವಾ ಮಹಿಪತಿ | ಸಿರಿ | ಲೋಲನಿಜ ದಾಸನಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ