ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ಪ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ1 ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ವಿಧಿ ಶಂಭು ಪೂಜಿತನ 2 ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ 3 ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗದ ರತ್ನ ಕಟಕಾ ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ4 ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ ಉದಕೇಜಾಯತ ನೇತ್ರಯದುವಂಶೋದ್ಭವನಾ 5 ಕುಂಡಲ ಕರ್ಣ ಸುಲಲಿತ ಭ್ರೂಯುಗಳ ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ ಅಳಿಬಾಲವೆನಿಪ ಕುಂತಳ ರತ್ನ ಚಕಿತ ಕಲಧೌತ ಮಕುಟ ದಿಗ್ವಲಯ ಬೆಳಗುವನ 6 ಮಾನವ ಹರಿಯಾ ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ ತಟವಾಸ ಜಗನ್ನಾಥವಿಠಲ ಮೂರುತಿಯ 7
--------------
ಜಗನ್ನಾಥದಾಸರು
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ