ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಸಲಹೋ ಚರಣವನ್ನು ದೋರಿ ಪರಮ| ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ ಶರಣ ಜನ ಮಾನ ರಕ್ಷಕನೇ ವರಕಮಲ ಕರಕಮಲ ಪದವಿಮಲ ಮಹಿಮನೇ ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ| ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ ಭಕ್ತರ ವಸರಕೊದಗುವೆ ನೀ ಪರೋಪರಿ| ಸುಕಲ್ಪತರು ದನುಜ ಕುಲಸಂಹಾರ ಸರ್ವದುರಿತ ನಿವಾರಾ 1 ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ| ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ ಪ್ರಕಟದೊಳೊದಗಿ ಬಂದೆ ಸರಸೀರುಹ ನಯನ ಜಗದ ತಂದೇ| ಸಿರಿನಂದ ನಂದನ ಪರಮುದಾರೇ| ಸುರವೃಂದ ರಕ್ಷಕ ವರ ಮುರಾರೇ 2 ಶರಣಾಗತ ಜನರ ಪಾಲಾ| ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ| ಶೌರಿ ನರಸಹಕಾರಿ ಗಿರಿಧರನೇ| ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ| ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3 ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ| ಪರಮಾನಂದ ಜೀವದೊರಿಯೇ| ಭವ ವಿನುತ ಮತಿ ಚರಿತಾ ಸಿಂಧೂರ| ನವನೀತ ಚೋರ ಜಗದೀಶ ಹರಿಯೇ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾ|| ವನರುಹ ಯೋನಿವಂದ್ಯನ ಮಧು ಸೂಧನ| ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿಬಾರೆ ಸುರಮೋಹನ ನೀಕರತಾರೆ ಪ ಮಕರಾಂಕನಯ್ಯನ ಕಾಣದೇ ನಾ ನಿಲ್ಲಲಾರೆ| ಯುಕುತಿಲೇ ತಂದು ನೀತೋರೇ| ಕ್ಷಣಯುಗವ ನೋಡುವರೇ| ಪ್ರಕಟದಲಿ ಕಣ್ಣಾರೆ ಕಾಂಬೆನೆಂದು 1 ದೀನಬಂಧು ಮೊರೆಹೊಕ್ಕವರ ಬಿಡನೆಂದು| ಮುನಿಜನ ಸಾರುವನೆಂದು|ನಂಬಿದೆನಾಮಕಬಂದು| ವನಜಾಕ್ಷ ಎನ್ನೊಳು ಕುಂದು|ನೊಡುವ ದುಚಿತವೇನಿಂದು| ಸನುಮುಖಕ ಮಾನವನು ತಂದುಕೂಡಿಸೇನಿಜಾ2 ನರಹರಿ ಶರಣಾಗತ ಸಹಕಾರಿ|ಬಿರುದವ ತಾಳಿದಾಪರಿ| ಮೊರೆಗೇಳಿದನು ದುರಿತಾರಿ|ಉರಗಾರಿ ಚಿನ್ನವನೇರಿ| ಬಂದ ನೋಡ ದಯಬೀರಿ| ಗುರು ಮಹಿಪತಿ ಪ್ರಭು ಉದಾರ|ನೆರೆದನೇತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು