ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆ ಮಾಡೋ ಕೃಷ್ಣ ಕೃಪೆಮಾಡೋ ತಪ್ಪದೆ ಪ್ರಾತಃ ಸಂಜೆ ನಿನ್ನ ಸ್ತುತಿ ಮಾಡುವಂತೆ ಪ ಚಂದ್ರಹಾಸನಂತೆ ವ್ರತ ಮಾಡಲರಿಯೆ ಅಂದಿನ ಧ್ರುವನಂತೆ ತಪಗೈಯಲಾರೆ ಕಂದ ಪ್ರಹ್ಲಾದನಂತೆ ಬಿಡದೆ ನುತಿಸಲಾರೆ ಸಂದ ನಚಿಕೇತನಂತೆ ಮೃತ್ಯುಗೆಲ್ಲಲರಿಯೆ 1 ಕರಿರಾಜನಂತೆ ಕೂಗಲರಿಯೆನೋ ಗರುಡನಂತೆ ಸದಾ ಹೊತ್ತು ತಿರುಗಲಾರೆ ಮರುತಜನಂತೆ ಭಂಟನಾಗಲರಿಯೆ ಉರಗರಾಜನಂತೆ ಶಯನಕಾಗಲಾರೆ 2 ದ್ರೌಪದಿಯಂತೆ ಅತ್ತು ಮೊರೆಯಿಡಲಾರೆ ರೂಪೆ ಭಾಮೆಯಂತೆ ಬಲು ಮೋಹಿಸಲಾರೆ ಆಪಾಟಿ ಸಖನಾಗರಿಯೆನು ಮಕರಂದನೊಲು ವಿಪ್ರನಾರಾಯಣನಂತೆ ಭಕ್ತಿಯರಿಯೆನೊ ಹರಿಯೆ 3 ಜಾಜಿಪುರೀಶ ನಿನ್ನ ಚರಣ ಸೇವೆಯ ಕೊಡೊ ಸಾಜದಿ ಮಾಡುವೆ ತಿಳಿದಂತೆ ಪಾಮರನು 4
--------------
ನಾರಾಯಣಶರ್ಮರು
ಜೋಜೋಜೋ ಬಾಲ ಮುಕುಂದಾ | ಯೋಗಿ ಹೃದಯಾನಂದ | ಜೋಜೋ ನಮ್ಮ ಗೋಪಿಯ ಕಂದಾ | ಜೋಜೋ ಗೋಪಾಲ ಗೋವಿಂದಾ | ಜೋ ಜೋ ಪ ಉರಗರಾಜನ ಹಾಸಿಗೆ ಮೇಲೆ | ಶಿರಿದೇವಿ ಕೈಯಲಿ ಶೇವೆಯ ಕೊಳ್ಳುತಲಿ | ಭರದಿ ನಾರದ ಗಾಯನದಲಿ | ಇಂಥಾ | ಮೆರೆವ ಯೋಗದ ನಿದ್ರೆಯಲೀ || ಜೋಜೋ 1 ಆದನೆಲ್ಲವ ಬಿಟ್ಟು ಶ್ರೀಹರಿ | ವಿದಿತ ಬಾಲಕ ವೇಷವದೋರಿ | ಪುದುಳದಿಂದಲಿ ತೊಟ್ಟಿಲ ಸಾರಿ | ಮುದದಲ್ಲಾಡುವ ಸುರ ಸಹಕಾರಿ || ಜೋಜೋ 2 ಏನು ಪುಣ್ಯವೋ ಗೋಕುಲ ಜನರ | ಶ್ರೀ ನಂದಾತ್ಮಜ ನಾದವಿನೋದಾ | ಧ್ಯಾನ ಮೌನಕೆ ಗೋಚರಪಾದ | ಮಹಾ | ದಾನಿ ಮಹೀಪತಿಸುತ ಪ್ರಿಯನಾದಾ | ಜೋ ಜೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು