ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉರಗಗಿರಿವಾಸ ವಿಠಲ | ಪೊರೆಯ ಬೇಕಿವಳಾ ಪ ಪರಮಕರುಣಾಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ. ನಿರತ ನಿನ ಸ್ಮರಿಪರಘ | ಪರಿಹರಿಪೆ ನೆಂಬನುಡಿಪರಮ ಸಾರ್ಥಕ ಗೊಳಿಸೊ | ತರಳೇ ಇವಳಲ್ಲಿಕರುಣ ಸಾಗರ ನಿನ್ನ | ಬೇರೊಂದಪೇಕ್ಷಿಸದೆ |ಸರಸದಲಿ ತವರೂಪ | ಚಿಂತೆಯಲ್ಲಿಹಳೋ 1 ಮರುತ ಮತವನೆ ಪೊಂದಿ | ತರತಮದ ಸುಜ್ಞಾನ ಪರಪಂಚಬೇಧಗಳ | ಅರಿತು ಭಜಿಸುವಳೋನೆರೆನಂಬಿ ತವಪಾದ | ಹಾರೈಸುತಿರುತಿಹಳವರ ಸುಸಾಧನವನ್ನೆ | ಅಭಿದೃದ್ಧಿಗೊಳಿಸೊ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀಹರಿಯೆಂಬಮತಿಯಿಂದ ಸೇವಿಸುತ | ದ್ರವ್ಯ ವಿಭಮನಾಹತಗೈದು ಕತೃಪ್ವ | ಅಂತಕಾರಕ ಭ್ರಮವಕ್ಷಿತಿರಮಣ ಪರಿಹರಿಸಿ | ಆರ್ತಳುದ್ಧರಿಸೋ3 ಜ್ಞಾನ ಸದ್ವೈರಾಗ್ಯ | ಅನುವಂಶಿಕವಾಗಿನೀನಾಗಿ ಕರುಣಿಸಿಹೆ | ಜ್ಞಾನಾತ್ಮಹರಿಯೆಮೌನಿಕುಲ ಸನ್ಮಾನ್ಯ | ಜ್ಞಾನಿ ಜನಸಂಗವನುನೀನಾಗಿ ಕೊಟ್ಟಿವಳ ಉದ್ಧರಿಸೋ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವಾಂತಾರಾತ್ಮಕನೆದರ್ವಿ ಜೀವಿಯ ಹೃದಯ | ಗಹ್ವರದಿ ನಿನ್ನಾಭವ್ಯರೂಪವ ತೋರಿ | ಉದ್ದಾರ ಗೈ ಇವಳಾಶರ್ವವಂದ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನೀನೆ ಗುರುವಾಗೆನಗೆ ಕೋನೇರಿವಾಸ ಙÁ್ಞನವಿಲ್ಲದ ಮನುಜ ತಾನಿದ್ದು ಫಲವೇನು ಪ ನಾಳವಿಲ್ಲದ ಘಂಟೆ ಭಾರವಾಗಿದ್ದರೇನು ತೋಳ ಬಲಹಿಲ್ಲದವ ದೊರೆಯಾದರೇನು ಹಾಳು ಭೂಮಿಯು ತನ್ನ ಮೂಲವಾದರೆಯೇನು ಬಾಳಲೀಸದ ಮನೆಯ ಬಲವಂತವೇನು 1 ತಿದ್ದಬಾರದ ತೇಜಿ ಉದ್ದವಾಗಿದ್ದರೇನು ಮೂರ್ತಿ ಮುದ್ದಾದರೇನು ಕದ್ದ ಕಳ್ಳನ ಮಾತು ಬದ್ಧವಾದರೆಯೇನು ಮದ್ದನರಿಯದೆ ಧಾತು ತಿಳಿದಿದ್ದರೇನು 2 ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು ಕಡ್ಡಾಯದಂಗಡಿಯಲಿದ್ದು ಫಲವೇನು3 ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು ಅಕ್ಕರಿಲ್ಲದ ತವರು ಇದ್ದು ಫಲವೇನು ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು 4 ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ 5 ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು ಕಡುಹುಳ್ಳ ದೊರೆಗಳನು ಹೊರವುತಿಹುದು ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು ಒಡನೆ ಹೇಳಿದ ನುಡಿಯ ತಾ ನುಡಿವುದು 6 ಬಂಟ ಬಿಡದೆ ಸೇವೆಯ ಮಾಳ್ಪ ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು ಒಡೆಯನನು ಭಜಿಸಲಿಕೆ ಮನವಿಲ್ಲವು 7 ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು ಒರೆದು ಮಾರ್ಗವ ತೋರು ಉರಗಗಿರಿವಾಸ ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ 8
--------------
ವರಹತಿಮ್ಮಪ್ಪ
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ಶ್ರೀಧರಾ ನೀನೆ ಎನ್ನ ಹೃದಯ ಕಮಲದೊಳಿದ್ದು ಮಾಡಿಸಿದ್ದು ನಾ ಮಾಡಿದೆನೊ ಪ ಇಂದು ಮಾಡುವುದೇನು ಮುಂದೆ ಮಾಡತಕ್ಕದ್ದೇನು ತಂದೆ ಅ.ಪ ಹಿಂದೆ ನಿನ್ನಯ ಜನರ ವಂದಿಸದೆ ಭವ- ಬಂಧನದಿ ನಾ ನೊಂದೆನೋ ಇಂದು ತೀರಿತು ಅದಕೆ ತಕ್ಕಮುಯ್ಯವು ಎನಗೆ ಆ- ನಂದ ವಾಯಿತು ನಿನ್ನ ಕರುಣಾರಸಕೆ ಮಂದಭಾಗ್ಯನಿಗೆ ನೀ ತಂದಂಥ ಬಂಧನವ ಬಂಧಿಸಿ ಎನ್ನಿಂದ ವಂದನೆಯ ಕೊಂಡೆ1 ಮೂರು ದಿನದಲಿ ಹಿಂದೆ ತೋರಿದಂದದಿ ಎನ್ನ ಅ- ಪರಾಧಗಳ ಎಣಿಸಲಿಲ್ಲ ಬಾರಿ ಬಾರಿಗೆ ಗುರುಗಳು ಕಾದಿಹರು ಎಂದೆನ್ನ ಎಚ್ಚರಿಸಿದುದಕೆ ನಾ ಮೈಮರೆದೆನೊ ಮಾರಮಣನೇ ನೀ ಗುರುವಾಸರದಿ ತ್ವರಿತದೊಳು ಹರಿ ಗುರು ಪೂಜೆಗೆ ಕಾತರವನಿತ್ತೆ 2 ಸರ್ವಸೇವೆಯ ನೀ ಕರುಣದಿ ಸ್ವೀಕರಿಸು ಶರಣರಕ್ಷಕನಹುದೊ ನೀನು ಉರಗಗಿರಿವಾಸ ಶ್ರೀ ವೇಂಕಟೇಶನೆ ಎನ್ನ ಸರ್ವಾಪರಾಧಗಳ ಕ್ಷಮಿಸೋ ಅರಿತವನು ನಾನಲ್ಲವೆಂದೆನ್ನ ಕೈಬಿಡದೆ ದುರಿತ ಪರಿಹರಿಸಿ ಕಾಯೋ ಶೌರೆ3
--------------
ಉರಗಾದ್ರಿವಾಸವಿಠಲದಾಸರು
ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
--------------
ಪ್ರಸನ್ನವೆಂಕಟದಾಸರು