ನಿನ್ನ ಸೇವೆಯನೊಂದನಿತ್ತು ಸಲಹೋಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ ಪ
ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷವನ್ನು ಕುಡಿದಿಹ ನೀಲಕಂಠನೊಡನೆಸನ್ನುತಾಂಬರವ ಬೇಡುವುದೆಂತು ಕರಿಚರ್ಮ-ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ 1
ಮಿರುಗುವಾಭರಣಗಳ ಬೇಡಿಕೊಂಬುದೆಂತುಉರಗಕುಂಡಲಹಾರ ವಲಯನೊಡನೆಪರಮ ಭಾಗ್ಯವ ಬೇಡಿಕೊಂಡೆ ನಾನೆಂತು ವಿಧಿಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ 2
ಕರಿತುರಗ ಮುಖ್ಯವಾಹನವ ಬೇಡುವುದೆಂತುನಿರುತ ಬಸವನ ಮೇಲೆ ಚರಿಪನೊಡನೆಕರುಣದಿಂದೆನಗೆ ಕೊಡಲೇನುಂಟೊ ಕೆಳದಿಪುರ-ದೆರೆಯ ರಾಮೇಶ ಶ್ರೀಕರ ಪಾರ್ವತೀಶ 3