ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಆತ್ಮನಿವೇದನೆ ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ 1 ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ 2 ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ವೀರನಾರಾಯಣಸಾಕು ಬಿಡಿಸಯ್ಯ ನರಜನ್ಮದ ಗಂಟು 3
--------------
ವೀರನಾರಾಯಣ
ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ ಪನ್ನಂಗಶಾಯಿಯೇ ಪರಿಪಾಲಿಸಭವ ಪ ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು ನಿನ್ನಿಂದ ಸುಖಬಡುವ ನಿನ್ನಣುಗ ನಾನು1 ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು 2 ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು 3
--------------
ರಾಮದಾಸರು
ಎಷ್ಟು ಸುಖಿಗಳೊ ಗೋವು ಗೊಲ್ಲತಿ ಗೋಪರು ಶ್ರೀಕೃಷ್ಣನೊಡನೆ ಹಗಲಿರುಳು ಕ್ರೀಡೆಯಲಿ ಕಾಲವ ಕಳೆವರು ಪ.ಕೋಹೋ ಕೋಹೋ ತೃವ್ವೆ ತೃವ್ವೆ ಅಂಬೆ ಅಂಬೆ ಬಾರೆ ಎಂದುಮೋಹದಿಂದ ಕರೆಸಿಕೊಂಡು ಓಡಿ ಓಡಿ ಬಂದುಶ್ರೀಹರಿಯ ಹೆಗಲ ಮೇಲೆ ಗಳಗಳಿಟ್ಟುಕದಪುಕಂಠಲೇಹಿಸಿ ಮೊಗದಿರುದಿರುಹಿ ಸಿರಿನಖದಿಂ ತುರಿಸಿಕೊಂಬರು 1ತುಡುಗನೆಂದು ತುಡುವಿಡಿದು ಅಡಿಗಡಿಗೆ ಅಪ್ಪಿ ಚುಂಬಿಸಿಪಿಡಿಪಿಡಿದು ಗೋಪಿಯಡಿಗೆ ಒಪ್ಪಿಸಿ ಒಪ್ಪಿಸಿಮಡದೆರೆಲ್ಲ ಮಧುವೈರಿಯ ಸಂಗ ಸೊಬಗಿಲೋಲಾಡುತಲಿಒಡನೊಡನೆ ಗೋಪಾಲ ಮೂರುತಿಯ ಕಣ್ಣುಮನದಲಿಟ್ಟು ಸುಖಿಪರು 2ಸಣ್ಣವರಾಡಲೊಲ್ಲೆನೆನಲು ಗದ್ದವಿಡಿದು ಮುದ್ದಿಸಿ ನಮ್ಮಣ್ಣ ತಮ್ಮಗಳಿರಾ ಗೆಳೆಯರಿರಾ ಬನ್ನಿರೆಂದುಅಣ್ಣೆಕಲ್ಲೊಡ್ಡಿ ಗಜಗವಾಡಿ ಸೋಲಿಸಿಕೊಂಡಳುವಚಿಣ್ಣರ ಮನ್ನಿಪ ಪ್ರಸನ್ವೆಂಕಟೇಶನ ಉಣ್ಣುವೆಂಜಲಸೆಳೆದುಂಬುವರು 3
--------------
ಪ್ರಸನ್ನವೆಂಕಟದಾಸರು