ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವವನೆ ಕರ್ಮಜಯ ಬಳಿಕಂ ಸಾವವನೆ ಉಣ್ಣುವರು ಜನರು ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ ದಾಸವೃಂದವು ತೋಷದಿಂದಲೆ ಪೂಶರಯ್ಯನ ವಿಡಿದು ಘನ ಸಂ- ಸುಕೃತ ಫಲವಿಹುದೋ ಶ್ರೀಶನಲಿ ನಿಜದಾಸ ಭಕುತಿಯ ಮೀಸಲಿರಿಸೀ ಮನವ ಮೋಹದೆ ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1 ಮೃಗಜಲಕೆ ನೀರೆಂದು ಭಾವಿಸಿ ಪೊಗಲೆಳಿಸುವೆರಳೆಗಳ ಪರಿಯಲಿ ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು ಮಿಗಿಲಾಗಿದ ವಿಷಯಲನಲದಿ ಧಗಧಗಿಸಿ ಜನಗಳು ಪೋಪರಲ್ಲದೆ ಖಗಪತೀ ವಾಹನನ ನೆನೆಯರು ಜಗವ ಪಾವನನು 2 ನೀರಜಾಸನ ಪಿತನೆ ಅಕ್ಷಯ ಶ್ರೀ ರಮಾವಲ್ಲಭನೆ ತವ ಪರಿ ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು ಸಾರಸುಮತಿಯನಿತ್ತೆಮಗೆ ಹರೆ ಸೇರಿಸೆಮ್ಮನು ನಿನ್ನ ಅಡಿಯಲಿ ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3
--------------
ನರಸಿಂಹವಿಠಲರು
ದೀಪ ಬೆಳಗುವಾಗಾ ಉಣ್ಣುವರುಣ್ಣಿರೋ ಬೇಗ ಬೇಗಾ ದೀಪ ಲೋಪವಾದಮೇಲೆ ಬರಿದಪ್ಪುದು ಭೋಜನಶಾಲೆ ಪ ಚಿತ್ತಶುದ್ಧಿಎಂಬ ಎಳೆಬಾಳೆಎಲೆ ಎಡೆಮಾಡಿ ನಿತ್ಯನಿರ್ಮಲವೆಂಬ ರಾಜಾನ್ಹವ ನೀಡಿ ಸತ್ಯಸಾಧುಸಂಗವೆಂಬ ಘೃತಸಾರಾನ್ಹವ ನೀಡಿ ಪ್ರತ್ಯುಗಾತಮ ಆತ್ಮನ ನಿರಂತರ ತೃಪ್ತಿಬಡಿಸಿ ನೋಡಿ ದೀಪ 1 ಗುರುಕೃಪೆಯೆಂದೆಂಬ ಪರಡಿಯ ಪಾಯಸದಾಹಾರಾ ನಿರುತಾನ್ಹ ಉದಾನಮಾಡಲು ಷಡುರಸದುಪಚಾರಾ ಹರಿಹರ ಭೇದಗಳಡಗಿದನು ಭವಾಮೃತ ಸಾರಾ ಪೊಸದುಪ್ಪದಭಾರಾ ದೀಪ 2 ಕೆಂದ ಆಕಳÀ ಕರೆದು ಕಾಸಿದ ಕ್ಷೀರವ ಕೈಕೊಂಡು ತಂದೆ ತಾಯ್ಗಳ ಭಕುತಿ ಮಾಡಿದ ಮಸುರೋಗರ ಉಂಡು ವಂದಿಸಿ ಶ್ರೀ ಗುರು ವಿಮಲಾನಂದನ ಸೈಂದವನೊಳಗೊಂಡು ತೇಗುತ ಮೆರದುಂಡು 3
--------------
ಭಟಕಳ ಅಪ್ಪಯ್ಯ
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದುಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನುಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯಕಟ್ಟಿದ ಮನೆ ಇದ್ದಂತಿಹುದುಹೊಟ್ಟೆತುಂಬ ಉಣದೆ ಧನವ ಗಳಿಸಿ - ಬಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1ಅತಿ ಪ್ರೀತಿಯಿಂದ ಮದುವೆಯಾದ ಮೋಹದಸತಿ ತನ್ನ ಮರಣದ ಕಾಲಕ್ಕೆಗತಿಯಾವುದೆನುತಲೆ ಮರುಗಿದಪ್ಪಳಲ್ಲದೆಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದಕಂದ ನಿನ್ನಾವಸಾನ ಕಾಲಕೆಮುಂದೇನು ಸಂಸಾರ ನಡೆಸಲುಪಾಯವೇನೆಂದು ಚಿಂತಿಸುವ ಸಂಗಡ ಬಾಹನಲ್ಲ 3ನಾಟರಿಷ್ಟರು ಬಂಧು - ಬಳಗವುಹರಿ ಕೊಟ್ಟುದುಂಟಾದರೆ ಬಂದು ಉಣ್ಣುವರುಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟುಕಂತಿಯ ತಂದೊಟ್ಟಿ ಸುಡುವರು ಕಾಣೊ 4ಇಂತಿದು ಒಂದು ಪ್ರಯೋಜನ ನಿನಗಿಲ್ಲಅಂತ್ಯಕಾಲಕ್ಕೆ ಸಂಗಡ ಬಾಹುದುಕಂತುಜನಕ ನಮ್ಮ ಪುರಂದರವಿಠಲನಸಂತತ ಧ್ಯಾನದೊಳಿರು ಕಾಣೋ ಮನುಜಾ 5
--------------
ಪುರಂದರದಾಸರು