ಎಲೆ ಎಲೆ ಎಲೆ ಥೂ ಪರದೇಸಿ ನೀ
ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ ಪ
ತಿಳಕೊಂಡು ನೋಡು ನೀನು ಸುಧಾರಿಸಿ
ಬಲವಾಗಿ ಬರದೇನು ಹಿಂಬಾಲಿಸಿ ಅ.ಪ
ಎಷ್ಟು ದುಡಿದಿ ಸತಿಸುತರಿಗಾಗಿ ಗಂಟು
ಕಟ್ಟಿಕಟ್ಹ್ಹೂಳಿಟ್ಟಿ ಇವರಿಗಾಗಿ
ಅಷ್ಟು ಬಿಟ್ಟು ನಡೀತಿದ್ದಿ ಹಾಳಾಗಿ ನಿನ್ನ
ಇಟ್ಟು ಬಂದು ಉಣುತಾರೋ ಹೋಳಿಗಿ 1
ಕಣ್ಣು ಮುಚ್ಚ್ಯಾಟವನಾಡುತಿದ್ದಿ ನೀ
ಬಣ್ಣಗೆಟ್ಟು ಖರೆಯೆನುತಿದ್ದಿ
ಸುಣ್ಣದ್ಹರಳ್ಹೊತ್ತ ಕೋಣ ಹೋಗಿ ಭರದಿ ಕಂಡು
ತಣ್ಣೀರಿನೊಳು ಬಿದ್ದು ಸತ್ತ ಗಾದಿ2
ಘಟ ಇದು
ಪುಸಿಯು ಬರಿದೆ ಗಾಳಿಯ ಮಟ್ಟ
ವಸುಧೇಯೊಳಧಿಕೆಂದು ತೊಡು ನಿಷ್ಠೆ ನಮ್ಮ
ಅಸಮ ಶ್ರೀರಾಮನ ಪಾದ್ಹಿಡಿ ಗಟ್ಟಿ 3