ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ಬಲ್ಲವನಿವನು ಚಿಕ್ಕವನಲ್ಲವೆ ಬಾಲಕನು ಇಲ್ಲದ ನುಡಿಗಳ ಎನ್ನೊಡನುಸುರಲು ಇಲ್ಲಿಗೆ ಬಂದಿರೆ ಗೋಪಿಯರÉಲ್ಲರು ಪ ಮಣಿಮಯದೊಡಿಗೆಯನು ತೆಗೆತೆಗೆದ್ಹಣಿವನೆ ಬಲ್ಲವನು ಉಣಲೊಲ್ಲ ಉಡಲೊಲ್ಲ ಚಲಗೊಂಡಳುವ ಜಾರ ಚೋರನಂಬರೇ 1 ಹೆಣ್ಣಿಗೆ ಮರುಳಾಗುವ ಪ್ರಾಯವೆ ಕಣ್ಣು ನಿಮಗೆ ಕಾಣವೆ ಸಣ್ಣವನಿವಗೆ ನಿಲುಕದ ನೆಲುವಿನ ಪಾ ಲ್ಬೆಣ್ಣೆಯ ಮೆದ್ದೋಡಿ ಬಂದನೆಂದೆಂಬರೆ 2 ಅಂಬರದೊಳು ಮೂಡಿದ ಚಂದ್ರಬಿಂಬವ ತಾರೆನುತ ಕುಂಬಿನಿಯೊಳು ಬಿದ್ದು ಹೊರಳುವ ತರಳ ಹಿಡಿಂಬೆಯ ರಮಣ ಕೋಣೆಯ ಲಕ್ಷ್ಮೀರಮಣನು 3
--------------
ಕವಿ ಪರಮದೇವದಾಸರು
ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ಬಾರದೆ ಬಿಡದಲ್ಲ ಪ ಜಗಕೆ ಕಾರಣ ದೇವ ತಾನಿರಲುಬೊಗಳಿಕೊಂಬೆ ಭೇದವಿಲ್ಲೆಂದುತೆಗೆವನು ಯಮ ಬೆನ್ನ ಚರ್ಮ ಇದುನಗೆಯಲ್ಲ ಕೇಳೋ ತಿಳಿಯೊ ದುಷ್ಕರ್ಮ 1 ಭೇದವಿಲ್ಲೆಂದು ತಿಳಿದು ನೀಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊಸಾಧಿಸಿ ನೋಡಲು ನಿನಗೆ ಇಷ್ಟುಬದುಕುಂಟಾದರು ಉಸುರಲಿನ್ಯಾಕೋ 2 ಅಕ್ಕತಂಗಿಯರಿರಲು ನೀನುರೊಕ್ಕವಿಕ್ಕಿ ಮದುವೆ ಆಗುದ್ಯಾಕೊಚಿಕ್ಕ ತಂಗಿತಾಯಿ ಮೊದಲು ನಿನ್ನಲೆಕ್ಕದಲ್ಲಿ ನೋಡಲು ಒಂದಲ್ಲವೇನೋ3 ಸಂಕರ ಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊಸಂಕಟಗೊಳಗಾದಿಯಲ್ಲ ನಿನ್ನಬಿಂಕವ ಮುರಿವರು ಯಮನವರಲ್ಲೊ4 ಇನ್ನಾದರು ಭೇದಮತವನುಚೆನ್ನಾಗಿ ತಿಳಿಯೋ ರಂಗವಿಠಲನುತನ್ನ ದಾಸ್ಯವನು ಕೊಟ್ಟುಉನ್ನತ ಪದವೀವನು ನಿನಗೆ 5
--------------
ಶ್ರೀಪಾದರಾಜರು