ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳುವಿಕೆಗಿಂತ ತಪವು ಇಲ್ಲ ಪ. ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ. ದುಷ್ಟಮನುಜರು ಪೇಳ್ವ ನಿಷ್ಠುರದನುಡಿ ತಾಳುಕಷ್ಟಬಂದರೆ ತಾಳು ಕಂಗೆಡÀದೆ ತಾಳುನೆಟ್ಟಸಸಿ ಫಲಬರುವತನಕ ಶಾಂತಿಯ ತಾಳುಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು1 ಕುಹಕ ಕುಮಂತ್ರವನು ತಾಳುಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳುಹಲಧರಾನುಜನನ್ನು ಹೃದಯದಲಿ ತಾಳು 2 ನಕ್ಕನುಡಿವರ ಮುಂದೆ ಮುಕ್ಕರಿಸದೆ ತಾಳುಅಕ್ಕಸವ ಮಾಡುವರ ಅಕ್ಕರದಿ ತಾಳುಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳುಪಕ್ಷೀಶ ಹಯವದನ ಶರಣೆಂದು ಬಾಳು 3
--------------
ವಾದಿರಾಜ
ಹೊಲೆಯರಿಲ್ಲದ ಊರೊಳು ಇರಬಾರದು ಪ ಹೊಲೆಯರು ಬೆಳೆದರೆ ಉಣಲುಂಟು ಉಡಲುಂಟು ಅ.ಪ. ಶುಭ ಶೋಭನ ಉಂಟುಹೊಲೆಯರ ನಿಂದಕನು ನಿರ್ಭಾಗ್ಯನುಹೊಲೆಯರಿಗೆ ಉಣಲಿಕ್ಕಿದವನ ಫಲಕ್ಕೆನೆಲೆಗಾಣೆ ನೆಲೆಗಾಣೆ ಧರೆಯೊಳಗೆ ನಾನು 1 ಹೊಲೆಯರು ಮುನಿದರೆ ನೆಲೆಯಿಲ್ಲ ನಿಭ ಇಲ್ಲಹೊಲೆಯರು ಒಲಿದರೆ ಕಷ್ಟವಿಲ್ಲಹೊಲೆಯರೇ ನಮ್ಮ ಸಲಹಲಿ ಸಾಕಲಿ ಎಂದುಫಲ್ಗುಣನ ಸಾರಥಿಯ ಪ್ರಾರ್ಥಿಸಿಕೊಳ್ವರು 2 ಹೊಲೆಯರಿಂದಲಿ ಸಕಲ ದೇವತೆಗಳ ಪೂಜೆಹೊಲೆಯರಿಂದಲಿ ಸಕಲ ಬಂಧು ಬಳಗಹೊಲೆಯರಿಗೆ ಸ್ವಾಮಿ ಮೋಹನ್ನ ವಿಠ್ಠಲಧೊರಿಯೆ ಪಾಂಡವರ ಪ್ರಿಯನೆಂದೆನ್ನು 3
--------------
ಮೋಹನದಾಸರು
ನಾನೇಕೆ ಪರದೇಶಿ ನಾನೇಕೆ ಬಡವನೊಮಾನಾಭಿಮಾನದೊಡೆಯ ವಿಠಲ ಎನಗಿರಲು ಪಮೂರುಲೋಕದ ಒಡೆಯ ಶ್ರೀಹರಿಯು ಎನ್ನ ತಂದೆವಾರಿಜಾಂಬಕೆ ಲಕ್ಷ್ಮೀ ಎನ್ನ ತಾಯಿ ||ಮೂರು ಅವತಾರದವರೆನ್ನಗುರುಕಾಣಿರೊಸಾರಹೃದಯರು ಎನ್ನ ಬಂಧು ಬಳಗ1ಇಪ್ಪತ್ತುನಾಲ್ಕು ನಾಮಗಳೆಂಬ ಹಳನಾಣ್ಯಒಪ್ಪದಲಿ ಉಣಲುಂಟು ಉಡಲುಂಟು ತೆಗೆದು ||ತಪ್ಪದಲೆ ನವಭಕ್ತಿಯೆಂಬ ನವರತ್ನಗಳುಮುಪ್ಪು ಇಲ್ಲದ ಭಾಗ್ಯ ಎನಗೆ ಸಿದ್ಧವಿರಲಿಕ್ಕೆ 2ಎನಗೆ ಎಂಬವನ ಹೆಸರೇನೆಂಬೆ ಶ್ರೀನಿವಾಸತನಗೆಂದರೆಂದು ಬಗೆವನು ಕಾಣಿರೊ ||ಘನಮಹಿಮನಾದಸಿರಿಪುರಂದರವಿಠಲನುಅನುಮಾನವಿರದೆನ್ನ ಶಿರದ ಮೇಲಿರಲಿಕ್ಕೆ 3
--------------
ಪುರಂದರದಾಸರು