ಕಲ್ಲು ನಾಯೇನೋ ಕೈವಲ್ಯದಾಯಕನೆ
ಕಲ್ಲು ಕರುಣದಿಂದ್ಹೆಣ್ಣಾಗಿರಲುದ್ಧಾರ ಕೇಳೊ ಪ
(ಉಡಬಲ್ಲೆ ಉಣಬಲ್ಲೆ) ಉತ್ತಮ ಸಂಗ ಬಿಡಬಲ್ಲೆ
ನಡೆಯಬಲ್ಲೆನೋ ದುರ್ಮಾರ್ಗದಿಂದ
ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ
ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ 1
ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ
ಮೋಹ ಬಲ್ಲೆನೊ ಬಾಂಧವ ಭವದಿ
ಪಾದದಿ ಭಕುತಿ ಪರಮಾದರೊಂದರಿಯೆನೊ 2
ನಿಷ್ಠುರಾಡುತ ಜನರ ನಿಂದಿಸುವುದು ಬಲ್ಲೆ
ಕಷ್ಟದಾರಿದ್ರ್ಯ ಒಲ್ಲೆನ್ನಬಲ್ಲೆ
ದುಷ್ಟ ಅಲ್ಪರಿಗೆ ಬಾಯ್ ತೆರೆಯಬಲ್ಲೆ ಭೀಮೇಶ-
ಕಷ್ಟ ನಿನದಯ ಬೇಡಿಕೊಂಬೋದೊಂದರಿಯೆನೊ 3