ಒಟ್ಟು 10 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು 1 ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು 2 ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು 3 ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ | ಕೊಳದ ಯಿದ್ದ ಹೀನ ನರನು 4 ಪೊಡವಿಯರಸ ಕೇಶವನ್ನ | ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |5 ಸಿರಿ | ವಿಠ್ಠಲನ ಮುಂದೆ ತಂದು | ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು6 ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ | ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು 7 ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ | ಕಂಸಾರಿ ಎನದ ಹೀನ ನರನು 8 ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು | ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು 9 ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ | ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು 10 ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ | ಸೊಲ್ಲು ಪೇಳಿ ಬಾಳದವನು 11
--------------
ವಿಜಯದಾಸ
ಆತ್ಮನಿವೇದನೆ ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1 ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2 ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3 ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4 ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5
--------------
ವೆಂಕಟೇಶವಿಟ್ಠಲ
ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ದಯದೊಲವಿನ ಮೆಚ್ಚು ಧ್ರುವ ಮಾಡದ ಮಾಡಿಸಿತು ನೋಡಿದರೇನ ತಾಂ ನೋಡಿಸಿತು ಕೂಡದ ಕೂಡಿಸಿತು ಬಿಡದಾಗಿಹ್ಯದ ಬಿಡಿಸಿತು 1 ತನ್ನ ತಾನರಸಿತು ಇನ್ನೊಂದರನೆ ಮರೆಸಿತು ಭಿನ್ನ ಭೇದ್ಹರಿಸಿತು ಚಿನ್ಮಯದ ಸುಖ ಬೆರೆಸಿತು 2 ಕಾಣದ ಕಾಣಿಸಿತು ಉಣದೂಟನೆÀ ತಾ ಉಣಿಸಿತು ಅನುಮಾನಗಳಿಸಿತು ಘನ ಮಹಿಪತಿಗೆ ನುಡಿಸಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೇನ ಮಾಡಲಾಪಿಯೋ ಲಕುಮೀಶಾ | ನಾನೀಗ ಪಡೆದದ್ದು ಉಣದಲೆ ಪೋಗುವದೆ | ಪ ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ ಏಕ ಭಕುತಿಲಿ ಸರ್ವೋತ್ತಮನೆಂದು ಏಕಾಂತ ಭಜಿಪÀ ಮನುಜಗಾದರು ಬರೆದ ವಾಕು ತಪ್ಪುವದೇನೋ ಅಜನು ನಿರ್ನೈಸಿದ1 ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು ಬಿಂದು ಮಾತ್ರ ತೊಲಗಿಪ ನಡತಿ ಕಾಣೆ ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ 2 ಇದ್ದದೊಂದು ಮರಿ ಅಡಗಾಣಿಸಿ ಬಂದು ಹದ್ದು ತಾ ವೈಯಲು ಆ ಕುರುಬ ಯೆಲ್ಲಿ ಇದ್ದರೇನು ಭಯ ವಿಜಯವಿಠ್ಠಲ ನಿನ್ನ ಪೊದ್ದಿದವಗಾದರು ಅನುಭವಿಸದೆ ಬಿಡದು3
--------------
ವಿಜಯದಾಸ
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದುಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನುಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯಕಟ್ಟಿದ ಮನೆ ಇದ್ದಂತಿಹುದುಹೊಟ್ಟೆತುಂಬ ಉಣದೆ ಧನವ ಗಳಿಸಿ - ಬಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1ಅತಿ ಪ್ರೀತಿಯಿಂದ ಮದುವೆಯಾದ ಮೋಹದಸತಿ ತನ್ನ ಮರಣದ ಕಾಲಕ್ಕೆಗತಿಯಾವುದೆನುತಲೆ ಮರುಗಿದಪ್ಪಳಲ್ಲದೆಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದಕಂದ ನಿನ್ನಾವಸಾನ ಕಾಲಕೆಮುಂದೇನು ಸಂಸಾರ ನಡೆಸಲುಪಾಯವೇನೆಂದು ಚಿಂತಿಸುವ ಸಂಗಡ ಬಾಹನಲ್ಲ 3ನಾಟರಿಷ್ಟರು ಬಂಧು - ಬಳಗವುಹರಿ ಕೊಟ್ಟುದುಂಟಾದರೆ ಬಂದು ಉಣ್ಣುವರುಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟುಕಂತಿಯ ತಂದೊಟ್ಟಿ ಸುಡುವರು ಕಾಣೊ 4ಇಂತಿದು ಒಂದು ಪ್ರಯೋಜನ ನಿನಗಿಲ್ಲಅಂತ್ಯಕಾಲಕ್ಕೆ ಸಂಗಡ ಬಾಹುದುಕಂತುಜನಕ ನಮ್ಮ ಪುರಂದರವಿಠಲನಸಂತತ ಧ್ಯಾನದೊಳಿರು ಕಾಣೋ ಮನುಜಾ 5
--------------
ಪುರಂದರದಾಸರು
ಮೂರ್ಖರಾದರು ಇವರು ಲೋಕದೊಳಗೆಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖಗಂಟನೊಬ್ಬನ ಕೈಯಲಿಡುವವನೆ ಮೂರ್ಖನಂಟರಿಗೆ ಸಾಲವನು ಕೊಡುವಾತ ಮೂರ್ಖ - ಜಗಕಂಟಕನಾದವನು ಕಡು ಮೂರ್ಖನಯ್ಯಾ 1ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖಸರ್ಪನಲಿ ಗಾರುಡವ ನಡಸುವನೆ ಮೂರ್ಖಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖಅಪ್ಪ ರಂಗಯ್ಯನನು ನೆನೆಯದವ ಮೂರ್ಖ 2ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ 3ಪಡೆದ ಮಗಳನುಮಾರಿ ಒಡಲಹೊರೆವವ ಮೂರ್ಖಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖಬಡತನವು ಬಂದರೆ ಬಯಸಿಕೊಂಬವ ಮೂರ್ಖದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ 4ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖಹೇಮವನು ಗಳಿಸಿ ಉಣದಿದ್ದವನೆ ಮೂರ್ಖನೇಮದಲಿ ಹಿರಿಯರನು ನೋಡದವ ಮೂರ್ಖ ದುರ್ನಾಮವನು ಕೊಂಬಾತ ಕಡು ಮೂರ್ಖನಯ್ಯ 5ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖಭೂಸೂರರಿಗನ್ನವನು ಕೊಡದವನೆ ಮೂರ್ಖಶೇಷಪತಿ ಕೃಷ್ಣನ ನೆನೆಯದವ ಮೂರ್ಖಹರಿದಾಸನಾಗಿರದವನು ಕಡು ಮೂರ್ಖನಯ್ಯ 6ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖಕೊಂಡೆಯವ ಪೇಳಿ ತಿರುಗುವವ ಮೂರ್ಖಪುಂಡರೀಕಾಕ್ಷ ಶ್ರೀ ಪುರಂದರವಿಠಲನಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ 7
--------------
ಪುರಂದರದಾಸರು