ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಆತ್ಮನಿವೇದನೆ ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ 1 ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ 2 ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ವೀರನಾರಾಯಣಸಾಕು ಬಿಡಿಸಯ್ಯ ನರಜನ್ಮದ ಗಂಟು 3
--------------
ವೀರನಾರಾಯಣ
ಎನ್ನಪರಾಧವೇನು ನಿನ್ನ ಸೂತ್ರಾಡಿಸಿದ್ಹಾಂಗ ಆಡುವೆ ಹರಿ ಧ್ರುವ ಆಡಿಸಿದರಾಡುವೆ ನೋಡಿಸಿದರೆ ನೋಡುವೆ ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗ 1 ನಡೆಸಿದರ ನಡೆಯುವೆ ಕೂಡಿಸಿದರ ಕೂಡುವೆ ನುಡಿಸಿದರೆ ನುಡಿಯುವೆ ಚೇತರಿಸಿದಂತೆ 2 ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ ಇಡಿಸಿದರೆ ನಾ ಇಡುವೆ ಸರ್ವಭೂಷಣ 3 ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ 4 ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗ 5 ನೇಮಿರೆ ನೀವಂದು ನಾ ಮಾಡುವದಿನ್ನೊಂದು ನಿಮಿತ್ಯಮಾಡಿದೋರುದು ಸೋಜಿಗಿದೊಂದು 6 ಎನ್ನ ಬಾಹ್ಯಂತ್ರ ಪೂರ್ಣ ಚನ್ನಾಗಿರೆ ನೀ ಕರುಣ ಅನುದಿನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚಿಂತೆಯಿಲ್ಲದ ನರನು ಧರೆಯೊಳಗಿಹನೇ ಅಂತರಂಗದಿ ನಮ್ಮ ರಂಗನಿಲ್ಲದಿರೆ ಪ ಅಂತರಂಗದಿ ಶುದ್ಧಿ ಇಲ್ಲದಿರೆ ರಂಗಯ್ಯ ಎಂತು ನೀನಿಹೆಯಯ್ಯ ಮಾನಸದಿ ಸ್ವಾಮಿ ಅ.ಪ ಧನಧಾನ್ಯಗಳ ಚಿಂತೆ ಕನಕದೊಡವೆಯ ಚಿಂತೆ ತನುಜ ತನುಜೆಯರನ್ನು ಪಡೆವ ಚಿಂತೆ ಅನಿಶ ಯೌವ್ವನವಾಂತು ಕನಸು ನನಸುಗಳಲ್ಲಿ ವನಿತೆಯರನೊಡಗೂಡಿ ಭೋಗಿಸುವ ಚಿಂತೆ 1 ಉಡಿಗೆ ತೊಡಿಗೆಯ ಚಿಂತೆ ಉಡುವೆನೆಂಬಾ ಚಿಂತೆ ಒಡಲ ಪೋಷಿಪ ಚಿಂತೆ ಕಡಲಲೆಗಳಂತೆ ಪಿಡಿದೆನ್ನ ಬಾಧಿಪುವು ಬಿಡಿಸೆಲ್ಲ ಚಿಂತೆಗಳ ಕೊಡು ನಿನ್ನ ಸೇವೆಯನು ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್