ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ. ಒಂದೇ ಬೇಡುವೆನು ಮುಕುಂದ ಇದರ ಬಲ ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ. ಪಾತಕಗಳನೆಲ್ಲ ಪರಿಹರಿಸುವ ದುರ್ವಿ- ಘಾತಕವೈರ ಕತ್ತರಿಸುವುದು ಶ್ರೀಕರುಣಿಯ ಸನ್ನಿಧಾನವನಿರಿಸುವ ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ 1 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ತುಂಬಿದ ಜನರೊಡನಾಡುವಾಗ ನಂಬಿದ ಸತಿಯೊಳು ನಯನುಡಿ ನುಡಿವಾಗ ಅಂಬುದನಿಭ ನಿನ್ನ ಹಂಬಲಗೊಳುವುದ 2 ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ ಪೊಡವಿ ಪಾಲಕರೊಡನಾಡುವಾಗ ಕಡಲಶಯನ ನಿನ್ನ ನೆನೆವರೆ ನಾಚಿಕೆ ಕಾಲ ದೃಢದಿಂದ ಸ್ಮರಿಸುವ 3 ಖೇದ ಮೋದಗಳೆಂಬ ಭೇದವಿಡದೆ ಯಾವಾ- ಗಾದರು ಸರಿಯಾಗಿ ಸ್ಮರಿಸುವರ ಕಾದುಕೊಂಡಿರುವಂಥ ಕರುಣಿಯೆಂಬುದರಿಂದ- ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ 4 ಶ್ರಮವಿಲ್ಲದೆ ಸ್ಮøತಿ ಭ್ರಮಣೆ ಬಿಡಿಸುವ ಶ್ರೀ- ರಮಣ ವೆಂಕಟಗಿರಿ ನಾಯಕನೆ ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ ಕಮನೀಯಪದಕಲ್ಪದ್ರುಮ ನೆರಳಿರಿಸೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಲಕಾಲದಿ ಕರುಣಿಗಳರಸನಾದ ರಾಮಾ ಎನಬಾರದೇ | ಜಗ | ಪಾಲಕ ನಿನಗಿಹಪರಗಳ ನೀವಾ ಪ ಪಂಚಾಗ್ನಿಯಲಿ ದೇಹ ಬಳಲಿಸುವದ್ಯಾತಕ | ರಾಮಾ ಎನಬಾರದೇ | ಪ್ರ | ಪಂಚ ತೊರೆದು ವನವಾಸ ಹಿಡವುದ್ಯಾಕ | ರಾಮಾ ಎನಬಾರದೇ || ಒಂಟಿ ಕಾಲಿನ ಯೋಗಧಾರಣವ್ಯಾಕ | ರಾಮಾ ಎನಬಾರದೇ | ಪುಣ್ಯ | ಸಂಚಿಸೆ ಕೃಚ್ಛೆ ಚಾಂದ್ರಾಯಣಿ ವೃತವ್ಯಾಕ | ರಾಮಾ ಎನಬಾರದೇ 1 ರಾಮಾ ಎನಬಾರದೇ | ಅ| ಖಂಡದಿ ಛಟಪಟ ಕರ್ತಬೋಧಗಳ್ಯಾಕ ರಾಮಾ ಎನಬಾರದೇ || ಮಂಡೆ ಬೋಳಿಸಿ ಭಿಕ್ಷಾನ್ನ ಬಯಸುವದ್ಯಾಕ | ರಾಮಾ ಎನಬಾರದೇ | ಜಗ | ಭಂಡರಂದದಿ ಬತ್ತಲೆ ತಿರುಗುವುದ್ಯಾಕ | ರಾಮಾ ಎನಬಾರದೇ 2 ಉಂಬಾಗ ಉಡುವಾಗ ಕೊಂಬು ಕೊಡುವಾಗ | ರಾಮಾ ಎನಬಾರದೇ | ಸರ್ವಾ | ರಂಭದಿ ಸತಿಸುತಲಾಲನೆ ಮಾಳ್ಪಾಗ | ರಾಮಾ ಎನಬಾರದೇ || ತಿಂಬು ತಾ ಕಳಿಸುತಾ ಎಡಹುತಾಣಕಿಸುತಾ ರಾಮಾಎನಬಾರದೇ | ಇದು | ಸಂಭ್ರಮದಲಿ ಮಹಿಪತಿ ಸುತ ಸಾರಿದಾ ರಾಮಾ ಎನಬಾರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ1 ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ2 ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು 3 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು4 ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ5
--------------
ಶ್ರೀಪಾದರಾಜರು
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು
ಗೋಕುಲದ ಗೋಪಿಯರದೆಷ್ಟು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ ಪಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗುಜಾವದಿ ಮೊಸರ ಕಡೆವಾಗಲು 1ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ಇಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು 2ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |ಪರಿಪರಿ ಗೀತಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠಲನ |ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3
--------------
ಪುರಂದರದಾಸರು
ಹರ ಹರ ಹರ ಹರ ಹರ ಹರಹರ ಹರ ಹರ ಹರ ಹರ ಹರಪಹರ ಹರ ಹರ ಹರ ಹರ ಹರಏಳತಲೆನ್ನಿ ಹರ ಹರ ಹರ ಹರಬೀಳುತಲೆನ್ನಿ ಹರ ಹರ ಹರ ಹರ1ನಡೆಯುತಲೆನ್ನಿ ಹರ ಹರ ಹರ ಹರನುಡಿಯುತಲೆನ್ನಿ ಹರ ಹರ ಹರ ಹರ2ಉಣ್ಣುತಲೆನ್ನಿ ಹರ ಹರ ಹರ ಹರಉಡುವಾಗಲೆನ್ನಿ ಹರ ಹರ ಹರ ಹರ3ಮಲಗುತಲೆನ್ನಿ ಹರ ಹರ ಹರ ಹರವಂದಿಸುತೆನ್ನಿ ಹರ ಹರ ಹರ ಹರ4ಚಿದಾನಂದನನು ಹರ ಹರ ಹರ ಹರಚಿಂತಿಸೆ ಚಿಂತೆಯು ಹರ ಹರ ಹರ ಹರ5
--------------
ಚಿದಾನಂದ ಅವಧೂತರು