ಒಟ್ಟು 9 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಜ ಭಾವಿ ಮುಖ್ಯಪ್ರಾಣನೆ ಪ ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ. ಹರಿಯಮುಂದೆ ನಿಂದು ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1 ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ ಕಾಯ ಕುಳಿತೆ ಭರದಿ ವೃಂದಾವನದಲೀ ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2 ಸುರರು ಎಲ್ಲ ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3 ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ ನಿಮ್ಮ ಮಹಿಮೆಗೇನೆಂಬೆ ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4 ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5 ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ ಕೊಂಡು ಭುವಿಯಲಿ ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6 ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು ದಾನಗೈದ ನಿನ್ನ ಸತಿಗೆ ಜ್ಞಾನಪೂರ್ಣಬಲನು ನೀನ ಹೋ 7 ಚಾರು ಭ್ರಾತೃನಿನ್ನ ಬದಿಲಿ ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8 ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ ಭಂಗ ಸತ್ಯಸರ್ವಪಾಪ ಸುರರು ಕೈವಶ 9 ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ ಘನ್ನ ಜ್ಞಾನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10 ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ ನಿತ್ಯ ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11 ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು ಕೊಡುವೆ ಕಾಮಿತಾರ್ಥವ 12 ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ ಆ ಪರೇಶ ಒಲಿದು ಜ್ಞಾನ ದೀಪ ವಿಡುವ ಹೃದಯಕಮಲದಿ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ ಕೂಪ ದಾಟ ಪೋಪ ಬೇಗಹೋ13 ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ ಅಮರ ಜ್ಞಾನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14 ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ ಸೂತ್ರ ತಾನು ಕಿಂಕಿಣೀ ಸುರಾವದಿಂದ ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15 ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16 ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17 ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18 ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19 ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20 ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21 ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ ಸದನ ವಾಜಿವಕ್ತ್ರಗೆರಗಿ ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22
--------------
ಕೃಷ್ಣವಿಠಲದಾಸರು
ಉಗಾಭೋಗ ಹತ್ತಾವತಾರದಿಂದ ಹರಿಯೆ ಕೊಂಡಾಡು ಪಾಡು ಚಿತ್ತಾಭಿಮಾನಿ ಮುನಿಗೆ ವಲಿದು ಬಂದವನೆನ್ನು ನಿತ್ಯ ಉಡುಪಿಲಿ ನಿಂದು ನಿಜ ಜನರನ್ನು ಕಾಯ್ವ ಸ್ತುತ್ಯ ಗೋಪಾಲಕೃಷ್ಣವಿಠ್ಠಲನಿವನೆನ್ನೊ
--------------
ಅಂಬಾಬಾಯಿ
ಎಂಥಾ ಪಾವನ ಪಾದವೋ ಕೃಷ್ಣಯ್ಯಾ ಇ-ನ್ನೆಂಥಾ ಚೆಲುವ ಪಾದವೊ ಪ. ಪಾದ ಇಂತು ಜಗದಿ ಕೇಳುಪಂಥದೊಳಿದ್ದ ಕುರುಪತಿಯ ಉರುಳಿಸಿದಅ.ಪ. ಹಲವು ಕಾಲಗಳಿಂದಲಿ ಮಾರ್ಗದಿಶಿಲೆ ಶಾಪ ಪಡೆದಿರಲುಒಲಿದು ರಜದಿ ಪಾವನಗೈದು ಕರುಣದಿಂದಬಲೆಯ ಮಾಡಿ ಸಲಹಿದ ಶ್ರೀಹರಿಯ 1 ಬಲಿಯ ದಾನವ ಬೇಡಿ ತ್ರೈಲೋಕವನಳೆದು ಏಕಾಂಘ್ರಿಯಲಿಬೆಳೆದು ಭೇಧಿಸಲಾಗ ನಳಿನಜಾಂಡವ ಸೋಕಿಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ 2 ಚೆÉಂಡು ತರುವ ನೆವದಿ ಕಾಳಿಂಗನು-ದ್ದಂಡ ಮಡುವ ಧುಮುಕಿಚಂಡ ಕಾಳಿಂಗನ ಮಂಡೆಯೊಳು ಪಾದಪುಂಡರೀಕವನಿಟ್ಟು ತಾಂಡವನಾಡಿದ 3 ಸಂತತ ಸೌಖ್ಯವೀವ ಕಾವೇರಿಯಅಂತರಂಗದಿ ನೆಲೆಸಿಸಂತೋಷದಿಂದ ಅನಂತನ ಮ್ಯಾಲೆ ನಿಶ್ಚಿಂತೆಯೊಳು ಲಕುಮಿ ಭೂಕಾಂತೇರ ಸೇವಿಪ 4 ಒಲಿದು ಗಯಾಸುರನ ಶಿರದೊಳಿಟ್ಟುಹಲವು ಭಕ್ತರ ಪೊರೆದೆನೆಲೆಸಿ ಉಡುಪಿಲಿ ಎನ್ನ ಹೃದಯಕಮಲದಲಿತೊಲಗದೇ ಇರುತಿಪ್ಪ ಸುಲಭ ಹಯವದನ5 ನ್ನೆಂಥಾ ಚೆಲುವ ಪಾದವೊ ಪ. ಪಾದ ಇಂತು ಜಗದಿ ಕೇಳುಪಂಥದೊಳಿದ್ದ ಕುರುಪತಿಯ ಉರುಳಿಸಿದಅ.ಪ. ಹಲವು ಕಾಲಗಳಿಂದಲಿ ಮಾರ್ಗದಿಶಿಲೆ ಶಾಪ ಪಡೆದಿರಲುಒಲಿದು ರಜದಿ ಪಾವನಗೈದು ಕರುಣದಿಂದಬಲೆಯ ಮಾಡಿ ಸಲಹಿದ ಶ್ರೀಹರಿಯ 1 ಬಲಿಯ ದಾನವ ಬೇಡಿ ತ್ರೈಲೋಕವನಳೆದು ಏಕಾಂಘ್ರಿಯಲಿಬೆಳೆದು ಭೇಧಿಸಲಾಗ ನಳಿನಜಾಂಡವ ಸೋಕಿಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ 2 ಚೆÉಂಡು ತರುವ ನೆವದಿ ಕಾಳಿಂಗನು-ದ್ದಂಡ ಮಡುವ ಧುಮುಕಿಚಂಡ ಕಾಳಿಂಗನ ಮಂಡೆಯೊಳು ಪಾದಪುಂಡರೀಕವನಿಟ್ಟು ತಾಂಡವನಾಡಿದ3 ಸಂತತ ಸೌಖ್ಯವೀವ ಕಾವೇರಿಯಅಂತರಂಗದಿ ನೆಲೆಸಿಸಂತೋಷದಿಂದ ಅನಂತನ ಮ್ಯಾಲೆ ನಿಶ್ಚಿಂತೆಯೊಳು ಲಕುಮಿ ಭೂಕಾಂತೇರ ಸೇವಿಪ 4 ಒಲಿದು ಗಯಾಸುರನ ಶಿರದೊಳಿಟ್ಟುಹಲವು ಭಕ್ತರ ಪೊರೆದೆನೆಲೆಸಿ ಉಡುಪಿಲಿ ಎನ್ನ ಹೃದಯಕಮಲದಲಿತೊಲಗದೇ ಇರುತಿಪ್ಪ ಸುಲಭ ಹಯವದನ 5
--------------
ವಾದಿರಾಜ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ರಂಗ ಬಂದ ಬೃಂದಾವನದಲಿ ನಿಂದಕೊಳಲಿನ ಧ್ವನಿ ಬಹು ಚೆಂದ ಪ ನಂದಗೋಪಿಯರ ಕಂದ ಮುಕುಂದಸುಂದರಿಯರ ಆನಂದ ಗೋವಿಂದ ಅ.ಪ ಮಂದಗಮನೇರ ಕೂಡಿ ಸರಸವನಾಡುತಇಂದಿರೆಯರಸ ನಗುತ ಕೊಳಲನೂದುತಎಂದೆಂದಿಗೂ ತನ್ನ ನಂಬಿದ ಭಕ್ತರಬಂದು ಪೊರೆವ ಗೋವಿಂದ ಮುಕುಂದ 1 ಉದಧಿ ಸಂಚಾರ ಗುಣಗಂಭೀರನವನೀತದಧಿ ಭಾಂಡಚೋರ ರುಗ್ಮಿಣಿ ಮನೋಹರಮದನ ಗೋಪಾಲನು ಭಜಿಸುವ ಭಕುತರಹೃದಯದೊಳಗೆ ನಿಂದು ಮುದವನು ಕೊಡುವ2 ಮಧುರೆಯಿಂದಲಿ ಬಂದ ಮಾವನ್ನ ಕೊಂದಕಡೆಗೋಲ ನೇಣ ಕೈಲಿ ಪಿಡಿದ ದ್ವಾರಕಾವಾಸಹಡಗಿನಿಂದಲಿ ಬಂದು ಉಡುಪಿಲಿ ನೆಲೆಸುತಬಿಡದೆ ಪೂಜೆಗೊಂಬ ಒಡೆಯ ಶ್ರೀಕೃಷ್ಣ3
--------------
ವ್ಯಾಸರಾಯರು
ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ. ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ. ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ 1 ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ ಪಂಥದಲಿ ಕೀಚಕನ ಸೋಲಿಸಿ ನಿಂತು ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ 2 ಮದ್ದಿಗೆ ಭಟ್ಟರಲಿ ನೀ ಜನಿಸೀ ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ 3 ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ 4 ರಾಮ ಸೇವೆ ನೀ ಸಂಭ್ರಮದಲಿ ಮಾಡಿ ರಾಮರ ಧ್ಯಾನ ಮಾಡುತ ಪೂಜಿಸುತಿರುವಿ ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ 5
--------------
ಸರಸಾಬಾಯಿ
ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |ಸವ್ಯಸಾಚಿ ಪ್ರೀತ ಹೋಮಧ್ಯಗೇಹಜಾತ ಹೋ ಪತರಣಿಬಿಂಬಕೆ ಜಿಗಿದೆ ಗದೆಯನು ವಗೆದೆಅಸುರಗ ಕರವನು ಮುಗಿದೆ |ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |ತರಿದೆ,ವಜ್ರಶರೀರ, ಧರಣಿಯಭಾರವಿಳುಹಿದುದಾರಮತಿ, ಕಪಿ |ವರನೊಳತಿ ಕೃಪೆ ಮಾಡಿದೆ ದಾನವ |ಬೇಡಿದೆ ಸುಮತಿಯ ನೀಡಿದೆ 1ದಂಡ ಮೇಖಲ ಧಾರ ಕುಜನಕುಠಾರ|ಬ್ರಹ್ಮ ಶರೀರ ಜೈಸಿದೆಮಂಡೋದರಿ ವಲ್ಲಭನ ಚರಿಸಿದೆಯೋವನ|ತಂದೆ ಮಾಧವನ ಉಡುಪಿಲಿಚಂಡವಿಕ್ರಮರಾಮ ಸೇವಕ ಭೀಮ |ಸದಾಚಾರಧಾಮಯತಿ ಮೇ |ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ 2ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |ಮುಕುತಿಪತಿಪ್ರಾಣೇಶ ವಿಠಲನದಾಸ ಸಲಹೋ ನಿರ್ದೋಷ3
--------------
ಪ್ರಾಣೇಶದಾಸರು
ಕೋಲುಹಾಡುಕೋಲು ಮುಕ್ತಿ ಮಾರ್ಗದ ಕೋಲು ದುಷ್ಟಶಾಸನಕೋಲು ಸುಖತೀರ್ಥಯತಿರಾಯನ ಕರದಂಡುಕೋಲು ಕೋಲೆ ಪ.ಕಂಬುಗೇಹನ ಸೀಳ್ದ ಕಲ್ಲ ಬೆನ್ನಲಿ ತಾಳ್ದಕುಂಭಿನಿತಂದ ಕಂಬದಿ ಬಂದನಮ್ಮಯ್ಯಕೊಂಬುವರಿಲ್ಲ ತ್ಯಾಗವೆಂಬ ಬಲಿಯೊತ್ತಿದಡಂಬಕಕ್ಷತ್ರೇರ ಕಂಠದರಿ ನೋಡಮ್ಮಯ್ಯ1ಅಂಬುಧಿಯ ದಾಟಿದ ರಂಭೆರೊಳೋಲ್ಯಾಡಿ ದಿಗಂಬರ ತಿರುಗಿ ಪಶುವೇರಿದ ನಮ್ಮಯ್ಯಅಂಬುಜಜಾಂಡ ಒಳಕೊಂಬ ಒಡಲ ಚೆಲುವಕೊಂಬು ಕೊಳಲೂದುವರ್ಥಿಯ ನೋಡಿರಮ್ಮಯ್ಯ 2ಸರ್ವಜÕರಾಯನ ಪೂರ್ವದ್ವಾದಶಸ್ತವನಕೋರ್ವನೆ ಮೆಚ್ಚಿ ಉಡುಪಿಲಿ ನಿಂದನಮ್ಮಯ್ಯಉರ್ವಿಗುಬ್ಬಸ ಮತವ ಪೂರ್ವಪಕ್ಷವ ಮಾಡಿದಸರ್ವೇಶ ಪ್ರಸನ್ವೆಂಕಟ ಕೃಷ್ಣ ಕಾಣಮ್ಮಯ್ಯ 3
--------------
ಪ್ರಸನ್ನವೆಂಕಟದಾಸರು