ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವ ಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ ನದಿಯ ನಿರುತ ಧರಿಸೀ ಮುಂದಲಿಯ ಲೀ ತವ ಶೀತಾಂಶೂನಾ ಕಳೆಯ ತಿಲಕಾ ಮಾಡಿ ಮೆರೆವಾ ಭವ ಭಯ ನಿವಾರಿಸಿ ಹೊರೆವಾ 1 ಮದನ ನಳಿದಾ ಭಾಲನಯನಾ ಸುವಿಧ್ಯದಿ ಮೊರೆಹುಗಲು ವಲುವಾನಂದನಯನಾ ಫಣಿ ಭೂಷಣ ಮಾರಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 2 ಠವ ಠವಿಸುವ ಮುನಿಯ ಮನೋಹರ ಪಂಚ ವದನಾ ರವಿ ಕೋಟಿ ತೇಜದಿರುವಾಘನ ಕಾರುಣ್ಯ ಸದನಾ ಭವಾನೀ ಯಡದ ತೋಡಿಯಲಿರಿಸೀ ಕೊಂಡು ಮೆರೆವಾ ಭವ ಭಯ ನಿವಾರಿಸಿ ಹೊರೆವಾ 3 ಧವಲೀಸುತಿಹ ತನು ರೂಚಯ ಕರ್ಪೂರ ಪರಿಯಾ ತವಕದಿಂದುಟ್ಟಾ ಉಡುಗಿ ಹರನಾ ಚರ್ಮ ಕರಿಯಾ ಸವಿಭೂತಿಯ ಸುಧರಿಸಿ ತಪವೇಷದಿ ಮೆರೆ ವಾ ಭವ ಭಯ ನಿವಾರಿಸಿ ಹೊರೆವಾ 4 ಭುವನತೃಯದಾ ಸುರನರೋರಗ ಪೂಜಿಸುತಿಹಾ ಪಾದ ದ್ವಿತೀಯಾ ಅವಿನಾವಾ ದೇವರ ಜನಗಿರಿ ವಾಸವಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 5 ತ್ರಿವಿಧ ತಾಪವಾಹರಿಸುವದು ಹರಯಂದ ಭರವಿದೀ ಭವಯನ್ನ ಲಾಗಾ ಸುಖಗರೆವ ಸಾನಂದ ವರದೀ ಭವ ಭಯ ನಿವಾರಿಸಿ ಹೊರೆ ವಾ 6 ಸವಾರೀಧರನಾವರಣದಿರುವಾ ಕಪ್ಪುಗೋರಳಾ ತ್ರಿವಿಷ್ಟಾಪರಿಯಾ ಪದವ ಮುನಿವಾ ತ್ರಿಶೂಲ ಸರಳಾ ಕವಿಬೋಧಿಸುವಾ ಡುವರ ಸೂತ್ರದ ಕೈಯ್ಯಾ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 7 ಶಿವಷ್ಟಕವನು ಹೃದಯ ಪತ್ರ ಮ್ಯಾಲ ಬರವಾ ಅವನಿಷ್ಟಾರ್ಥವಾ ಕುಡುತ ದುಷ್ಕøತ ಮೂಲಹರಿವಾ ಅವಿದ್ಯೋಡಿ ಸುವಾ ಗುರು ಮಹಿಪತಿಯಾಗಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಷ್ಠೆಯಿಂದ ನಿಂತ ಈ ಪುಟ್ಟ ಕಪಿಯ ನೋಡೆ ಪ. ಎಷ್ಟು ಮೌನ ಧರಿಸಿದಂಥ ಪುಟ್ಟ ಕಪಿಯ ನೋಡೆ ಅ.ಪ. ವಾರಿಧಿಯ ದಾಟಿದಂಥ ಪುಟ್ಟ ಕಪಿಯ ನೋಡೆ ಹೀರಿದ ಕುರುಪರ ರಕ್ತ ಪುಟ್ಟ ಕಪಿಯ ನೋಡೆ 1 ತೂರಿದ ಅನ್ಯರ ಮತ ಪುಟ್ಟ ಕಪಿಯ ನೋಡೆ ಸಾರಿ ಹರಿ ಸರ್ವೋತ್ತಮನೆಂದ ಪುಟ್ಟ ಕಪಿಯ ನೋಡೆ2 ಶೌರ್ಯವೆಲ್ಲ ಉಡುಗಿದಂಥ ಪುಟ್ಟ ಕಪಿಯ ನೋಡೆ ಹಾರಿ ಯಂತ್ರದಲ್ಲಿ ಶಿಲ್ಕಿದ ಪುಟ್ಟ ಕಪಿಯ ನೋಡೆ 3 ಮಾನ ಉಳಿಸಿಕೊಳ್ಳಲು ಮೌನದ ಪುಟ್ಟ ಕಪಿಯ ನೋಡೆ ಧ್ಯಾನ ಮುದ್ರಾಂಕಿತದಿ ಶೋಭಿಪ ಪುಟ್ಟ ಕಪಿಯ ನೋಡೆ 4 ಯೋಗಾಸನದಿ ಪದ್ಮಾಸನವು ಪುಟ್ಟ ಕಪಿಯ ನೋಡೆ ವಾಗೀಶನ ಪದಕ್ಹೋಗುವ ತಪದ ಪುಟ್ಟ ಕಪಿಯ ನೋಡೆ 5 ವ್ಯಾಸರಿಗೊಲಿದ ವೇಷಧಾರಕ ಪುಟ್ಟ ಕಪಿಯ ನೋಡೆ ಮೋಸವೊ ಧ್ಯಾನವೊ ಅರಿಯೆ ಪುಟ್ಟ ಕಪಿಯ ನೋಡೆ 6 ಕಷ್ಟದ ಭವಕಟ್ಟು ಬಿಡಿಸುವ ಪುಟ್ಟ ಕಪಿಯ ನೋಡೆ ಕಟ್ಟಿನೊಳ ಸಿಲ್ಕಿ ಗುಟ್ಟು ತಿಳಿಸದ ಪುಟ್ಟ ಕಪಿಯ ನೋಡೆ 7 ಸಿದ್ಧ ಸಾಧನ ಬುದ್ಧಿ ಬಲಿದ ಪುಟ್ಟ ಕಪಿಯ ನೋಡೆ ಉದ್ಧಾರಕ ಪ್ರಸಿದ್ಧ ಪುರುಷ ಪುಟ್ಟ ಕಪಿಯ ನೋಡೆ 8 ಸ್ವಾಪರೋಕ್ಷಿ ಜಗದ್ವ್ಯಾಪಕನಾದ ಪುಟ್ಟ ಕಪಿಯ ನೋಡೆ ಗೋಪಾಲಕೃಷ್ಣವಿಠ್ಠಲನ ದಾಸನೀ ಪುಟ್ಟ ಕಪಿಯ ನೋಡೆ 9
--------------
ಅಂಬಾಬಾಯಿ
ಪೊರೆಯಬೇಕೋ ಎನ್ನ ಶ್ರೀ ನರ ಹರಿಯೆ ಕೇಳೋ ಮುನ್ನಾ ಪ ನೀ ಪೊರೆಯದಿರಲು ಈ ಪೊಡವಿಯೊಳಗೆ ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ ನೀರ ಪೊಕ್ಕರು ಬಿಡೆನೋ ಬೆನ್ನಲಿ ಭಾರ ಪೊತ್ತರು ಬಿಡೆನೋ ಕೋರೆಯ ಬೆಳೆಸಿ ನೀ ಘೋರ ರೂಪನಾಗಿ ತಿರುಕನೆಂದು ಪೇಳಲು ಬಿಡೆನೋ 1 ಕೊಡಲಿ ಪಿಡಿಯೆ ಬಿಡೆನೋ ನೀ ಘನ ಅಡವಿ ಸೇರಲು ಬಿಡೆನೋ ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ ಉಡುಗಿ ಜರಿದು ತುರುಗೇರಲು ಬಿಡೆನೋ 2 ಪಾಪಿ ಎಂದು ಎನ್ನ ಜರಿಯದೆ ಕಾಪಾಡೆಲೊ ಘನ್ನ ಶ್ರೀ ನರಹರಿಯ ನಾಮಕೆ ಪೋಪದ ಪಾಪಗಳುಂಟೆ ಜಾಲವ ಮಾಡದೆ 3
--------------
ಪ್ರದ್ಯುಮ್ನತೀರ್ಥರು
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವಮುಟ್ಟಿದೆನು ಬ್ರಹ್ಮವನು ಮುಕ್ತನಾದೆನುಹುಚ್ಚು ಮೂಳಿ ಹೆಂಡತಿಯ ಪ ಮೆಚ್ಚಿ ನಲಿವ ಮಗನು ಸೊಸೆಯುಉಜ್ಜಿ ಬದುಕನೆಲ್ಲ ನಾನು ಉಡುಗಿ ಕಳೆದೆನು 1 ನೆಂಟರಿಷ್ಟರೆಲ್ಲರನ್ನು ದೂರಮಾಡಿ ಕುಳಿತೆ ನಾನುಹೆಂಟೆಯಂತೆ ಕಂಡೆನಯ್ಯ ಹೇರು ಹೇಮವ 2 ಅಷ್ಟದೇವರನ್ನು ನಾನು ಅಡವಿಗೆಂದು ಅಟ್ಟಿಬಿಟ್ಟೆಕಷ್ಟಪಡಿಪ ಪುರೋಹಿತನ ಕಡೆಗೆ ತಳ್ಳಿದೆ 3 ವಾರವಾರ ನೇಮವನ್ನು ಒಲೆಯನೀಗ ಹೊಗಿಸಿದೆದಾರಿ ಹಚ್ಚಿಸಿದೆನು ಕುಲವ ಶೀಲವ್ರತಗಳ 4 ಮತಗಳೆಂಬ ವಾದವನ್ನು ಮಣ್ಣುಪಾಲು ಮಾಡಿದೆನುಸತತ ಚಿದಾನಂದ ಬ್ರಹ್ಮ ಸಾಕ್ಷಿಯಾದನು 5
--------------
ಚಿದಾನಂದ ಅವಧೂತರು
ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ದೇವರ ಮನಿ ಬರುವೆ ಬೇಗ ಪ ಅಂಗಳ ಥಳಿ ಹಾಕಿ ರಂಗವಲ್ಲಿಯ ಹಾಕಿತಂಗಳ ಮೊಸರನ್ನಾ ಕಡೆಯಲ್ಹಾಕಿಬಂಗಾರದ ಬಟ್ಟಲೊಳು ರಂಗ ಬೆಣ್ಣೆಯನೀವೆಕಂಗಳನೆ ತೆಗಿ ಬೀರು ಮಂಗಳವಾ1 ಹಾಸಿಗೆ ಬಿಟ್ಟೇಳು ವಾಸುದೇವನೆ ನಿಮ್ಮಹಾಸಿನ ತೊಟ್ಟಿಲೊಳು ಮಲಗು ಕೂಸಾಏಸು ಹುಡುಗರೆಲ್ಲ ಸೋಸಿಲಿ ಕರೆವರುದೋಸೆ ಕೊಡುವೆ ತಿನ್ನೋ ಏಳು ಬೇಗ 2 ತರುವು ಕಟ್ಟಲಿ ಬೇಕು ಕರುವು ಕಾಯಲುಬೇಕುತೊರೆದು ಮಲಿಯನುಣ್ಣು ಏಳು ಬಾಲಜರದ ಕುಂಚಿಗೆ ಹೊದ್ದು ಹೊರಗೆ ಬಂದಿಹ ರಾಮಕರೆಯುತ್ತಲಿರುವನು ಕಣ್ಣೆತ್ತಿ ನೋಡು 3 ಕೋಳಿ ಕೂಗುತಲಿದೆ ಕಾಳು ಕಡಿವೆ ಹಾಕುಏಳು ಗಿಳಿಯು ನಿನ್ನ ಕೇಳುತಲಿವೆಪಾಲು ಸಕ್ಕರಿನಿತ್ತು ಸಾಲು ಕೋಕಿಲ ಹಿಂಡುಗಾನ ಮಾಡುತಲಿವೆ ಏಳು ಬೇಗ4 ಅಂದ ಮಾತನು ಕೇಳಿ ಆ ಕಂದ ಎತ್ತಿಕೋ ಎನ್ನಒಂದು ಬಟ್ಟಲದೊಳಗೆ ತಂದುಕೊಡು ಆಡುವೆಎಂದು ತಾಯಿ ಚಿನ್ನಾ ಹಿಂದೆ ಸೆರಗಪಿಡಿದು ಇಂದಿರೇಶ 5
--------------
ಇಂದಿರೇಶರು
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ವಿಶ್ವ ಕಾಯೋ ಎನ್ನ ಪ ಪರಮಾತ್ಮ ನೀ ದೂರ ಮಾಡಿದರೆ ಗತಿಯೇನು ಅ.ಪ ನಿನ್ನ ಲೋಕಕೆ ಎನ್ನ ವೈದಾಗ ಕರುಣಾತ್ಮ ನಿನ್ನ ಕ್ರಿಯ ಗುಣ ರೂಪ ತೋರಿ ಎನಗೆ ನಿನ್ನ ಪರಿವಾರ ಜನರಲ್ಲಿ ಸೇರಿಸಿ ಪರಮ ಧನ್ಯನಾ ಮಾಡಯ್ಯ ಮದ್ಬಿಂಬ ಮಾರಮಣ 1 ಸ್ಮøತಿ ಜ್ಞಾನ ಮನ ಬುದ್ಧಿ ಮಾತ್ರ ಭೂತವು ಕರಣ ಧಾತು ಸಪ್ತಕ ಪಂಚ ಕೋಶಗಳಲಿ ಸತಿ ಸಹಿತ ಪ್ರಥಮಾಂಗನಲಿ ಕುಳಿತು ನೀ ಸತತ ಪ್ರತಿ ತತ್ವ ವ್ಯಾಪಿಸಿ ಜೀವಕರ್ಮವ ಮಾಳ್ಪೆ 2 ಚತುರ ದಶಲೋಕದಲಿ ಪ್ರತಿದೇಹರಥ ನಿನಗೆ ಕೃತಿರಮಣ ಸರ್ವತ್ರ ನಿನ್ನ ಲೀ¯ ಸತಿ ರಮಣ ಸುರರೆಲ್ಲ ಗತನಿದ್ರರಾಗಿನ್ನು ನೋಳ್ಪರೈ ಮಹಚಿತ್ರ 3 ಕಂಡ ಕಡೆಯಲಿ ಪೂಜೆ ಭಂಡಾರ ತುಂಬಿಹುದು ವಿಧಿ ಸುರರು ಸರ್ವತ್ರ ನಿನ್ನ ಕಂಡು ಪೂಜಿಪರಯ್ಯಾ ಪೂರ್ಣ ವಿಭವಗಳಿಂದ ಮಂಡÉ ಬಾಗಿದೆ ಭಕ್ತ ತಂಡದಲಿ ಇಡು ಎನ್ನ 4 ಪೂಜ್ಯ ಪೂಜಕನಾಗಿ ಪರಿಪೂರ್ಣ ವೈಭವದಿ ಪೂಜಿಸುವೆ ನಿನ್ನ ನೀ ಸರ್ವಕಾಲ ಭೋಜ್ಯ ಭೋಕ್ತøನಾಗಿ ಆನಂದ ಸಿರಿಗೀವೆ ಅಜರುದ್ರ ಸುರಗಣಕೆ ಉಣಿಸಿ 5 ಹದಿನೆಂಟು ನರಮುಖವು ಮಧ್ಯ ಗಜಮುಖ ದೇವ ಪದವೆರೆಡು ಭುಜ ನಾಲ್ಕು ಪದುಮೆ ರಮಣ ಉದಯಾರ್ಕ ಕಿರೀಟ ಕುಂಡಲಭೂಷ ಗದೆ ಪದುಮ ಆರೆ ಶಂಖ ಮಣಿಯುಕ್ತ ಮಾಲಧರ 6 ಮೂರ್ತಿ ಜಯೇಶವಿಠಲ ವಿಶ್ವನಾಮಕ ವಿಶ್ವವ್ಯಾಪ್ತಗುಪ್ತ ಉಚ್ಛ್ವಾಸ ಬಿಡುತಿಹೆನೊ ಉಡುಗಿ ಸಕಲ ಶಕ್ತಿ ಉತ್ಸಾಹ ನೀಡಯ್ಯ ಸ್ವಾಂತರದಿ ಕಲೆತೆನ್ನ 7
--------------
ಜಯೇಶವಿಠಲ
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ