ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೊ ಪ
ರಾಣಿ ಭಾರತೀ ರಮಣ ನಿನಗೆಣೆಕಾಣೆ ತ್ರಿಭುವನದೊಳಗೆ ಸರ್ವಪ್ರಾಣಿಗಳ ಹೃದಯದಲಿ ಮುಖ್ಯಪ್ರಾಣನೆಂದೆನಿಸಿದೆಯೊ ಧಿಟ್ಟ ಅ.ಪ
ಧೀರ ನೀನಹುದೋ ವಾಯುಕುಮಾರ ನೀನಹುದೊಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ 1
ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟು ಲಂಕೆಯ ಸೀತೆಗುಂಗುರಕೊಟ್ಟೆ ಜಗಜ್ಜಟ್ಟಿ ಹನುಮ2
ದುರಿತ ಮಾರ್ತಾಂಡ ನೀನಹುದೊಕುಂಡಲ ಕಿರಿಘಂಟೆ ಉಡಿಯಲಿಪೆಂಡೆ ನೂಪುರ ಕಾಲಲಂದಿಗೆತಂಡ ತಂಡದಿ ಕೃಷ್ಣನಂಘ್ರಿಪುಂಡರೀಕಕೆ ಕೈಯ ಮುಗಿದ 3