ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾ ನೀ ಬೇಗನೆ ಬಾರೊಮುಖವನೆ ತೋರೋ ಪ ಕಾಶೀ ಪೀತಾಂಬರ ಕೈಯಲಿ ಕೊಳಲುಪೂಸೀದ ಶ್ರೀಗಂಧ ಮೈಯೊಳಗಮ್ಮ 1 ಉಡಿಯಲ್ಲಿ ಉಡಿಗೆಜ್ಜೆ ಬೆರಳಲಿ ಉಂಗುರಕೊರಳಲಿ ಹಾಕಿದ ಹುಲಿಯುಗುರಮ್ಮ2 ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕೃಷ್ಣ3
--------------
ವ್ಯಾಸರಾಯರು
ಗೋಪಿ ಚಂದನದಿಂದ ಎ ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ. ಮೃಡಸಖ ನಿನ್ನಯ ರೂಹವ ತೋರೆ ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ. ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು ಮಜ್ಜಿಗೆ ಕಡಗೋಲು ನೇಣು ಸಹ ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ 1 ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ ಇಟ್ಟು ಕೌಸ್ತುಭಹಾರ ತುಳಸಿಮಾಲಾ ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ 2 ಮಕರಕುಂಡಲ ಕಿರೀಟ ಶೋಭಿಸುತಲಿ ಅಕಳಂಕ ಚರಿತ ಶ್ರೀ ಶ್ರೀನಿವಾಸ ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ 3
--------------
ಸರಸ್ವತಿ ಬಾಯಿ
ಜನ್ಮ ಸಫಲವಾಯಿತು ಪ. ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ. ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ 1 ಒಡ್ಡಿ ನಿಂತದ್ದು ಕಂಡು 2 ಮಕರಕುಂಡಲ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ 3 ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು 4 ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ 5
--------------
ವಾದಿರಾಜ
ಭೃಂಗಕುಂತಳೆ ಶ್ರೀರಂಗನಸತಿಸ-ರ್ವಾಂಗದಿ ಶೃಂಗಾರೆತುಂಗವಿಕ್ರಮೆತುರಂಗಗಮನೆಭವಭೃಂಗವು ನಿವಾರೆಪಚರಣದಂದುಗೆ ನಡುಪಟ್ಟಿಯಉಡಿಗೆಜ್ಜೆಕರದಲಿ ಕಂಕಣ ಕಡಗ ಬಳೆಕೊರಳೊಳು ಮುತ್ತು ರತ್ನದಿ ಶೋಭಿಪತರತರ ಪದಕದ ಸರಮಾಲೆ1ಬಾಲಚಂದ್ರನವೋಲು ದೇವಿ ಕ-ಪೋಲವು ಪೊಳೆಯುವುದುಲೋಲಾಡುವ ಗಿಳಿವಾಲೆಯು ಕರ್ಣಕೆ ವಿ-ಶಾಲದಿ ಶೋಭಿಪುದು2ಪಟ್ಟೆ ಪೀತಾಂಬರ ಉಟ್ಟು ದೇವಿನೆರಿ ಚೆಲ್ಲುತ ನಡೆತಂದೂಸೃಷ್ಟಿಯೊಳ್ ಸುಜನರ ಪಾಲಿಸಿ ಲಕ್ಷುಮೀಕ್ಷುಲ್ಲರ ಮುರಿದಂದುಅರಿಸಿನ ಕುಂಕುಮ ಚಂದ್ರ ಕಸ್ತೂರಿಯುನಯನದಿ ಕಾಡಿಗೆಯುಶಿರದಿ ಮುಂದಲೆ ಬೊಟ್ಟು ಜಡೆಗೊಂಡೆ ಪುಷ್ಪವುಚರಣದಿ ಮಿಂಚಿಕೆಯೂ3ಹಸ್ತದಿ ಪದ್ಮಾವು ಬೆರಳೊಳು ಉಂಗುರತಿತ್ತಿಗೆ ಮೂಗುತಿ ಮುಖರಗಳೂನಿತ್ಯವು ಸ್ಮರಿಸೆ ಗೋವಿಂದನ ದಾಸನಅರ್ಥಿಯೊಳ್ ದೇವಿಯ ಪೊರೆಯುವಳು4
--------------
ಗೋವಿಂದದಾಸ
ರಂಭೆ-ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು 1ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು 2ಸುರರುಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ 3
--------------
ಪುರಂದರದಾಸರು