ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ನಾಲ್ಕು ತೃಣಾವರ್ತ ಪ್ರಾಣಾಪಹತ್ರ್ತೇ ನಮಃ ಶ್ರೀ ಗುರುಭ್ಯೋ ನಮಃ ಪದ ರಾಗ:ದೇಶಿ ಅಟತಾಳ ಸ್ವರ ಷಡ್ಜ ಛಂದಾದುತ್ಸವ ಬರಲು ಆನಂದದಿಂದಿರುತಿಹಳು|| 1 ದ್ವಿಜವೃಂದಕ್ಕ ಭೋಜನವು|| ಕೊಂಡವರಿಂದ ಆಶೀರ್ವಾದವು|| 2 ಖಡುನಿದ್ರಿ ನೋಡಿದಳು| ಭಂಡಿಯ ಬುಡಕಮಲಗಿಸಿದಳು 3 ಮತ್ತ ಪೂಜಿಸುತಿಹÀಳು|| ಮತ್ತುಡಿತುಂಬಿದಳು|| 4 ಭಾಳಾಗಿ ರೋದನವು | ಕೇಳಲಿಲ್ಲ ಶಬ್ದವು|| 5 ಕಾಲಿಲೆ ಒದ್ದನಾಗೆ| ಬುಡಮೇಲಾಗಿಬಿದ್ದಿತಾಗೆ|| 6 ಕಡ ಶಬ್ದ ಮಾಡುತಲೆ|| ಕೊಡಗಳು ಒಡದವಲ್ಲೆ||7 ನೆರೆದು ಮಾತಾಡಿದರು| ಮುರಿದಂಥವರು ದಾರಿರದೆ ಭಂಡಿಯುತಾನೆ ಮುರದಿತು ಹ್ಯಾಗೆಂದರು|8 ಬಾಲಕರಂದರಾ ಕಾಲಕ್ಕೆ ಈ ಕೂಸಿನ ಕಾಲಿಲೇ ಒದ್ದಿತ್ತೆಂದು| ಬಾಲರನುಡಿಗೆ ಗೋಪಾಲರು ನಕ್ಕರು ಬಾಲರ ಮಾತೆನ್ಯಂದು|| 9 ಗೋಪಿ ಬಿಡದಪ್ಪಿ ಕೂಂಡಳಾಗೆ || ಬಿಡದೆ ಆಡಿಸಿದಳಾಗೆ|| 10 ಧಿಟ್ಟನಂದಗೋಪ ಥಟ್ಟನೆ ಭಂಡಿಯ ಮುಚ್ಚಿ ಪೂಜಿಸುತಿಹನು| ದಿಟ್ಟಾಗಿ ದ್ವಿಜರಿಗೆ ಕಟ್ಟ ಇಲ್ಲದಲೆ ಕೊಟ್ಟಾನು ಗೋಗಳನು||11 ಕಜ್ಜಲಾದಿಗಳಿಂದ ದುರ್ಜನದೃಷ್ಟಿ ವಿಸರ್ಜನ ಮಾಡಿಸುವಾ| ಸಜ್ಜನರಿಂದ ಸುಪೂಜ್ಯ ಮಂತ್ರಿಗಳಿಂದ ಮಾರ್ಜನ ಮಾಡಿಸುವಾ||12 ಖಳರನ್ನು ಕೊಲುವನು| ಬೆಳುವಾನಂತಾದ್ರೀಶನು||13 ಪದ್ಯ ಮಂದ ಗಮನಿಯು ತನ್ನ ಕÀಂದನ ಎತ್ತಿ ಆನಂದದಿಂದಾಡಿಸಲು ಕಂದನಾದನು ಭಾರದಿಂದ ಬೆಟ್ಟದ ಘಾಳಿಯ ರೂಪದಿಂದಲಿ ತೃಣಾವರ್ತ ಮುಂದ ಚಕ್ರದ ಕಂದನಾ ಎತ್ತಿ ತ್ವರದಿಂದ ಬಿಡದಲೆ ವೈದ ಮುಂದ ಗಗನಕ್ಕೆ|| 1 ತಿಳಿವುತಲೆ ಮರ್ತೆಲ್ಲ ಚಿಂತಿಗಳ ಮರ್ತಳಾಗೆ|| 2 ಶ್ರೀಕಾಂತನಾ ಜನನಿ ತೋಕ ಗೋವಿಂದನು ಮೊಲಿಯು ತಾ ಕುಡುತಲಿರುತಿರಲು ಆ ಕಾಲದಲ್ಯವನು ಆಕಳಿಸಿದನು ಬಾಲ ಆಕ್ಯವನ ಬಾಯ ಒಳಗೆ ತಾಕಂಡಳೆಲ್ಲ ಭೂಲೋಕ ಬಿಸ್ತರವು| ಆ ಮ್ಯಾಲಕೊಂದು ದಿನ ಆ ಮಹಾತ್ಮನು ಗರ್ಗನೇಮಿಷ್ಯಲ್ಲಿಗೆ ನಾಮಕರಣವ ಮಾಡಿ ನೇಮಿಸ್ಹೇಸರಿಟ್ಟ ಬಲರಾಮ ಕೃಷ್ಣೆಂದು|| 3 ಸಂಭ್ರಮದಿ ಮುಂದವರು ಅಂಬಿಗಾಲಿಕ್ಕಿ ಬಹಳ್ಹಬಲವತೋರಿ ಆಯತ ತಾಯಿ ಎಂಬುವರು ತೊಡಿಯ ಅವಲಂಬಿಸಲು ನೋಡುವರು ಸಂಭ್ರಮದಿ ಎತ್ರದ್ಯಕೊಂಬುವರು ಬ್ಯಾಗೆ| ಅಂಬುಜೋದ್ಭವಪಿತನು ಸ್ತಂಭಾದಿಗಳನು ಅವಲಂಬಿಸುತ ನಡಿದಾಡಿ ಹಂಬಲಿಸಿ ಮುಂದ ತನ್ನ ನಂಬಿದ್ದ ಗೆಳೆಯರನ ನಂಬಿಗೋಕುಲದಲ್ಲಿ ತುಂಬೆ ಓಡ್ಯಾಡಿದನು ಅಂಬುಜಾಕ್ಷಾ|| 4 ಮುಂದ ಬಹು ಮಂದಿಗಳ ಮಂದಿರದ ಒಳಘೋಗಿ ಸಂದೇಹ ಇಲ್ಲದಲೆ ಛಂದಾದ ಬೆಣ್ಣಿಯನು ತಿಂದಿರುವ ತಿಂದು ಇಲ್ಲಂದಿರುವ ಮನಿಯಲ್ಲಿ ಬಂದಿರುವ ಕಲಹವನು ತಂದಿರುವ ನಿತ್ಯಾ| ನಂದನಂದನವ ಒಂದೂಂದು ಅಪರಾಧವನು ನಂದ ಪತ್ನಿಗೆ ತಿಳಿಯತಿಂದು ಮನದಲಿ ಮಾಡಿ ಒಂದು ದಿನ ಎಲ್ಲಾರು ಒಂದಾಗಿ ಮನಿಮುಟ್ಟ ಬಂದು ಗೋಪಿಯರು ಹೀಗೆಂದರಾಗೆ|| 5 ಪದ, ರಾಗ :ಶಂಕರಾಭರಣ ತಾಳ ತ್ರಿವಡಿ ಅಟ್ಟುಳಿ ಕುಡುವನೋಡಮ್ಮಾ| ಈ ಕೃಷ್ಣ ನಿನ್ನ ಮಗ| ಅಟ್ಟುಳಿ ಯಥೇಷ್ಟ ಇರುವದು ಸ್ಪಷ್ಟ ನಾನಿನಗೆಷ್ಟು ಪೇಳಿದರಷ್ಟೆ ತಾ ಮತ್ತಿಷ್ಟು ಮಾಡುವಾ|| ಪ ಸಿಕ್ಕ ಮನಿಮನಿ ಹೊಕ್ಕು ನೋಡುವನೆ| ತಾ ಸಿಕ್ಕದಿರುವವ ತತ್ಕ ತುಡಗಿವ ಠಕ್ಕನಾಗಿಹನೆ ಅಕ್ಕಕೇಳ್ಬಹಳಕ್ಕರದಿ ಕೈಯಿಕ್ಕಿ ಕಡದಿಹ ಚೊಕ್ಕ ಬೆಣ್ಣಿÂಯ ಚಿಕ್ಕ ಬಾಲಕರಿಗಿಕ್ಕಿ ತಿಂಬುವ ಮಿಕ್ಕ ಬೆಣ್ಣಿಯ ಬೆಕ್ಕಿಗ್ಹಾಕುವಾ|| 1 ಅಡಗಿ ಮನಿಯಲಿ ಅಡಗಿ ಕೊಂಡಿರುವಾ | ಅಲ್ಲಿರುವ ಭಾಂಡವು ಬುಡವು ಮೇಲಾಗ್ಯಾಡಕಲೇರಿಸುವಾ| ಅಡಿಗಳನು ಅಲ್ಲಿಡುತ ನೆಲೆವಿನಲಿಡುವ ಪಾಲ್ಮಸರ್ಕುಡುವ ಗೆಳೆಯರಿಗಿಡುವ ತೀರಲು ಬಿಡದೆ ಮತ್ತಾ ಗಡಗಿಯನು ನಿಂತು ನಗುವನಂತಾದ್ರೀಶನು 2 ಆರ್ಯಾ ಪರಿ ಗೋಪಿ ಯಶೋದಿಯು ತಾ ನಕ್ಕು|| ಕೋಪಿಸಲಿಲ್ಲವು ವ್ಯಾಪಕನಾಗಿಹ ಆ ಪುತ್ರನ ಸ್ನೇಹದಿ ಸಿಕ್ಕು|| 1 ಪದ್ಯ ಒಂದು ದಿನದಲಿ ಸ್ನೇಹದಿಂದ ರಾಮಾದಿಗಳು ಛಂದಾಗಿ ಕೊಡಿ ಆನಂದ ದಿಂದಾಡುತಿರೆ ಮುಂದವರು ತಾಯಿಯ ಮುಂಧೇಳಿದರು ನಿನ್ನ ಕಂದ ಕೃಷ್ಣನು ಮಣ್ಣು ತಿಂದನೆಂದು ಅಂದ ಮಾತನು ಕೇಳಿ ಮಂದಗಮನಿಯು ತಾನು ಕಂದನಾ ಕೈ ಹಿಡಿದು ಮುಂದಕ್ಕೆ ಕರದು ಭಯದಿಂದ ಇರುವವನ ಕಣ್ಲಿಂದ ನೋಡುತಲೆ ಅಂದಳೀಪರಿಯು ಹಿತದಿಂದ ಬಣ್ಣೆಸುತಾ|| 1 ಪದ, ರಾಗ:ಶಂಕರಾಭರಣ ತಾಳ:ತ್ರಿವಿಡಿ ಮಣ್ಣ್ಯಾಕ ತಿಂಬುವಿಯೋ| ಅಪ್ಪಯ್ಯಾ ಕೃಷ್ಣಾ| ಮಣ್ಣ್ಯಾಕ ತಿಂಬುವಿ ಉಣ್ಣಂದರವಲ್ಲಿ|| ಪ ಅನ್ನದೊಳಗ ಸವಿ ಬೆಣ್ಣಿಯೊಳಗ ಸವಿ ಹಣ್ಣಿನೊಳಗ ಸವಿ ಮಣ್ಣೇನು ಸವಿ ಕೃಷ್ಣ|| 1 ಮಣ್ಣುತಿಂದಿಹನೆಂದು ಸಣ್ಣವರ್ಹೇಳೋರು ಕಣ್ಣತಿ ಕಂಡು ನಿಮ್ಮಣ್ಣ ಹೇಳುವ ಮತ್ತ|| 2 ಸಣ್ಣಕ್ಕಿ ಅನ್ನವು ಬೆಣ್ಣೆ ಕಾಶಿದ ತುಪ್ಪ ಉಣ್ಣೊ ಮತ್ತಿಷ್ಟು ನಮ್ಮಣ್ಣಾನಂತಾದ್ರೀಶಾ|| 3 ಆರ್ಯಾ ಜನನಿಯ ನುಡಿ ಸಜ್ಜನರೊಡಿಯನು ತಾ ಅನುಸರಿಸುತ ಮನಸಿಗೆ ತಂದು| ಜನನ ರಹಿತ ಆ ಜನನಿಗೆ ನುಡದನು ಅನುಮಾನವಿಲ್ಲದೆ ಹೀಗೆಂದ|| 1 ಪದ, ರಾಗ:ಶಂಕರಾಭರಣ ಮಣ್ಣು ತಿಂದಿಲ್ಲವÀಮ್ಮ| ತಿಂದಿಲ್ಲ ಮಣ್ಣು ಎಂದ್ಯಂದಿಲ್ಲವಮ್ಮ ಪ ಬಟ್ಟಹಚ್ಚಿಕೈಲೆ ಮುಟ್ಟಿಲ್ಲವಮ್ಮಾ| ಧಿಟ್ಟಾಗಿ ಹೆಜ್ಜೆ ಹೊರಗಿಟ್ಟಿಲ್ಲವಮ್ಮಾ|| 1 ಎಲ್ಲೆ ಹೋಗದೆ ನಾ ಇಲ್ಲಿದ್ದೇನಮ್ಮಾ | ಎಲ್ಲಾರು ಈ ಪರಿ ಸುಳ್ಳಾಡೋರಮ್ಮ|| 2 ಆಣಿ ಕಾಣಮ್ಮ|| 3 ಪದ್ಯ ಕಾಯಜನಪಿತ ತನ್ನ ಬಾಯಲೀ ಪರಿಯನಲು ತಾಯಿ ಆ ಕಾಲದಲಿ ಬಾಯಿನೋಡುವೆನೆನಲು ತಾಯಿ ನೀ ನೋಡೆಂದು ಆ ಯಶೋದಿಯ ಮುಂದ ಆ ಎಂದು ಬಾಯದೆಗೆದ ಆಯತಾಕ್ಷಾ| ಬಾಯವಳಗೆ ಕಂಡಳಾ ತಾಯಿ ಲೋಕಗಳೆಲ್ಲಾ ಬಾಯಿವಳಗ ಗೋಕುಲವು ತಾಯಿಇರುವಳಲ್ಲೆ ಭ್ರಮಿಸಿದಳು ಮಾಯವೊ ಇದು ಸ್ವಪ್ನ ಪ್ರಾಯವೂ ಬುದ್ಧಿ ವ್ಯವಸಾಯವೊ ಎಂದು|| 1 ಲಗಬಗಿಯ ಜ್ಞಾನಚಕ್ಷುಗಳಿಂದ ನೋಡಿ ರೋಮಗಳುಬ್ಬಿ ಗಂಟಲವು ಬಿಗಿದು ಸಂತೋಷದಲಿ ಮಗನಲ್ಲ ಇವ ಸರ್ವ ಜಗದೊಡೆಯನೆಂತೆಂದು ಬಗಿಬಗಿಯ ಸ್ತುತಿಮಾಡಿ ಕೈಮುಗಿದಳಾಗೆ | ಜಗದೀಶ ಮತ್ತ ಲಗಬಗಿಯ ಮೋಹಪಾಶ ಬಿಗದು ಕಟ್ಟಿದನಾಗೆ ಮಗನೆಂದು ತಿಳಿದಾಕಿ ಬಿಗಿದಪ್ಪಿ ಮುದ್ದಾಡಿ ಹಗಲಿರುಳು ತಾನು ಕಾಲವನು ಕಳದಳಾ ಮಗನಾ ಸಂಭ್ರಮದಿ|| 2 ಖಡುನಂದಗೋಪನಾ ಮಡದಿ ಒಂದಿನದಲಿ ಬಿಡದೆ ದಾಸಿಯಕಿಲ್ಲ ಬಿಡಿಗೆಲಸ ಮಾಡುತಿರೆ ಖಡು ಹರುಷದಲಿ ದೂಸರು ಕಡವುವಳು ತಾನೇವ ನಡುವೆ ಕೃಷ್ಣನ ಲೀತಿ ನುಡುವುತಿಹಳು| ಧಡಿಯ ಪೀತಾಂಬರವು ಶಡಗರದಿ ಉಟ್ಟಿಹಳು ಮಡಿಯ ಕುಪ್ಪಸವು ಬಿಗಧಿಡದು ತೊಳ್ಳಿಹಳು ಆ ಮಡಿಯ ಕುಪ್ಪಸದೊಳಗ ಅಡಗಿರುವ ಶುಚವೆರಡು ಬಿಡದೆ ಮಗನಲಿ ಸ್ನೇಹ ತೊಡಕಿ ತೊರದಿವಹು|| 3 ನಡವಿನೊಡ್ಯಾಣ ಬಡನಡುವಿನಲಿ ಇಟ್ಟಿಹಳು ಕಡಗ ಶಂಕಣ ಕೈಲೆ ಕಡಗೋಲಧಗ್ಗವನು ಹಿಡಿದೆಳೆದು ಶ್ರಮದಿಂದ ಕಡುವಂಥ ಕಾಲದಲಿ ನಡುಗುತಿಹವೆರಡೂ ಕುಚ\ ಬಡನಡವು ಬಳಕುವುದು ಬಿಡದೆ ಮುಖದಲ್ಲಿ ಬೆವರು ಬಿಡುವುದದು ತುರಬಿನಲಿ ಮುಡಿದ ಮಲ್ಲಿಗಿ ಹೂವು ಸಡಲುತಿಹವು| ಗಡಬಡಿಸಿ ಕೃಷ್ಣ ಮಲಿ ಕುಡಿಯ ಬೇಕೆನುತ ಆ ಕಡುವ ಕಾಲಕ ಬಂದು ದೃಢವಾಗಿ ಕಡಗೋಲು ಹಿಡಿದು ಮಾತಾಡಿದನು| ಕಡುವ ಈ ಕೆಲಸ ನೀ ಬಿಡು ಅಮ್ಮ ಎನಗಮ್ಮಿ ಕೂಡು ಬ್ಯಾಗ ಎಂದು|| 4 ಬಿಟ್ಟು ಆ ಕೆಲಸವನು ಥಟ್ಟನೆ ಆ ಮಗನ ಘಟ್ಟ್ಯಪ್ಪಿಕೂಂಡು ಮುದ್ದಿಟ್ಡು ಮುಖ ನೋಡುತಲೆ ದಿಟ್ಟಾಗಿ ತೂಡೆಯ ಮ್ಯಾಲಿಟ್ಟು ಬಹುಸಂಭ್ರಮ ಬಟ್ಟು ತೊರದಿಹÀ ಮೊಲಿಯ ಕಟ್ಟಕಡಿಗ್ಯಾಪಾತ್ರ ಬಿಡ್ಹೊರಗ ಛಲ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಪೂತನಾ ಅಸುಹಾರಿಣಿ ನಮಃ ಪದ್ಯ ಪೊಡವಿಯಲಿ ಎಲ್ಲರಿಗೆ ಒಡಿಯನಾಗಿರುವಂಥ ಖಡು ಪಾಪಿ ಕಂಸಗೆ ಬಿಡದೆ ಪ್ರತಿವರ್ಷಕ್ಕೆ ಕೊಡತಕ್ಕ ಕಪ್ಪವನು ಕುಡಬೇಕು ಎಂತ್ಯೆಂದು ನಡದು ತಾ ಮಥುರೆಯಲಿ ಖಡುನಂದಗೋಪಾ| ಒಡಿಯನಪ್ಪಣಿಯಿಂದ ಗಡಬಡಿಸೆ ಪೂತನಿಯು ಹುಡುಗರನ್ನು ಹುಡುಕುತಲೆ ಬಡಿವಾರ ತೋರುತಲೆ ನÀಡದು ಬಂದುಳು ಹಾದಿ ಹಿಡಿದು ಗೋಕುಳಕೆ|| 1 ಧಡಿಯ ದಿವ್ಯಾಂಬರವು ಶಡಗರದಿ ಉಟ್ಟಿಹಳು ಕಿಡಿಯಂಥ ಕುಪ್ಪುಸವು ದೃಢ ಬಿಗಿದು ತೊಟ್ಟಿಹಳು| ಬಿಡÀದೆ ಸರ್ವಾಭರಣ ಜಡದಿಹಳು ತಾ ಮಿಂಚು ಹೊಡದಂತೆ ತೋರುವಳು ಉಡುರಾಜ ಮುಖಿಯು| ಎಡಬಾರಿ ದುರಬಿನಲಿ ದೃಢವಾಗಿ ಮಲ್ಲಿಗಿಯು ಮುಡಿದಿಹಳು ಉರದಲ್ಲಿ ದೃಢವಾದ ಕುಚವೆರಡು ನಡವುದಾ ಕಾಲಕ್ಕೆ ನಡಗುತಿಹವು 2 ಬಿಂಬೋಷ್ಟಿ ಮಾಯ ಅವಲಂಬಿಸುತ ಗೋಕುಲದ ತುಂಬ ಬೆಳಕವು ಮಾಡಿ ಜಂಭದಲಿ ಬರುತಿಹಳು ಗಂಭೀರಳಾಗಿ ತನಗುಂಭ ತಿಳಿಗುಡದೆ ಕುಚ ಕುಂಭಗಳವಳಗ ವಿಷ ತುಂಬಿಟ್ಟು ಕೊಂಡು ಅಂಬುಜಾಕ್ಷಿಯ ಕಂಡು ಸಂಭ್ರಮದಿ ಗೋಕುಲದ ಜಗದಂಬಿಯೊ ಎಂದೂ 3 ಮುಂದ ಆ ಪೂತನಿಯು ನಂದಗೋಪನ ಮನಿಗೆ ಬಂದು ದೇವೇಚ್ಛಿಯಲಿ ನಂದನಂದನನ ಕಣ್ಣಿಂದ ನೋಡಿದಳಾಗ ಛಂದದ್ಹಾಸಿಕೆಯಲಿ ಛಂದಾದ ಲೌಕೀಕದ ಕಂದನಂತೆ| ಮುಂದವನ ತೊಡಿಯ ಮ್ಯಾಲೆ ಛಂದಾಗಿ ಧರಿಸಿದಳು ಕಂದರ್ಪನೈಯನೆ ಕಂದನಾಗಿರುವನೆಂತ್ಯೆಂದು ತಿಳಿಯದೆ ನಿದ್ರಿ ಯಿಂದಿರುವ ಸರ್ಪ ಕರದಿಂದ್ಹಿಡಪರಿ ರಜ್ಜು ಎಂದುಬ್ಯಾಗೆ 4 ಶ್ರೀನಿವಾಸನ ಜನನಿ ಮೌನ ಹಿಡಿದಳು ಕಪಟತನ ತಿಳಿಯದೆ ಬುದ್ಧಿಹೀನ ಪೂತನಿಯು ಸ್ತನಪಾನ ಮಾಡಿಸಿದಳಾ ದಾನವಾರಿಗೆ ಅವನು ಪ್ರಾಣಸಹಿತಾಗಿ ವಿಷಪಾನ ಮಾಡಿದನು| ದ್ರೂಣನಾಗಿರುವವನ ಪಾಣಿಯಲಿ ಸಿಕ್ಕು ಗತಿಗಾಣದಲೆ ಉತ್ಕøಷ್ಟ ವಾಣಿಯಿಂದಲೆ ಒದರಿ ಭ್ರೂಣಹನನಕ ಬಹಳ ಜಾಣಿ ಎಂತ್ಯೆನಿಸುವಳು ಪ್ರಾಣ್ಹೋಗಿಬಿದ್ದಳಾ ಪ್ರಾಣಿ ಪೂತನಿಯು. ಪದ:ರಾಗ :ಶಂಕರಾಭರಣ ಅಟತಾಳ, ಸ್ವರಷಡ್ಜ ಬಿದ್ದಾಳು ಪ್ರಾಣ ಹೋಗಿ ಪೂತನಿ ಜನ್ಮಗೆದ್ದಾಳು ಬಾಲಕ ಘಾತಿನಿ| ಬಂತುದೆವಾಯಿತು ಮತ್ತಲ್ಲೆ|| 1 ಗಿರಿಯಂತೆ ಆ ದೇಹ ಇರುವೋದು ಆರು ಹರದಾರಿ ಪರಿಯಂತೆ ಬಿದ್ದಿಹದು| ಕರಚರಣಗಳ್ಹರವಿ ಇರವದು ಅಲ್ಲಿ ಇರವೂ ವೃಕ್ಷಗಳೆಲ್ಲಾ ಮುರದಿಹದು|| 2 ಎರಡು ಕಣ್ಣುಗಳು| ದಾಡುವರಲ್ಲೆ ನದಿಗಳು|| 3 ಭಾವಿಯಪರಿ ತೋರುವುದು ಹೇಳುವದಿನ್ನು ಉಳದಿಹುದು ದಾನವಾರಿಯಕೊಂಡು ಕರದಿಂದ ವಿಷಪಾನ ಮಾಡಿಸಿದ ಕಾರಣಿದಿಂದ | ಹಾನಿತನಗೆ ಬಂತು ತ್ವರದಿಂದ| ಅಚುತಾನಂತಾದ್ರೀಶ ಕರದಿಂದ|5 ಪದ್ಯ ಬಾಲಕಾಕಿಯ ಎದಿಯಮ್ಯಾಲೆ ನಿರ್ಭಯದಿಂದ ಲೀತಿಯನ ಮಾಡುತಿಹ ಬಾಲಿಯರು ಬ್ಯಾಗ ಆ ಬಾಲಕನ ಕರಕೊಂಡು ಮ್ಯಾಲೆ ಗೋಮೂತ್ರದಲಿ ಬಾಲಗ್ಯರದರು ಅವರು ಭಾಳ ಸಂಭ್ರಮದಿ| ಕಾಲ ಆ ಕಾಲಕಿಟ್ಟರು ನಂದ ಬಾಲಕರನೆನಿಸುವ ಜಗತ್ಪಾಲಕಗ ರಕ್ಷಾ|| 1 ಬಾಲ ನಿನ್ನನ್ನು ಜಗತ್ಪಾಲಕನು ರಕ್ಷಿಸಲಿ| ಪದಾಗಳು ಆ ಮೂರು ಪಾದದವ ರಕ್ಷಿಸುತಾ ಜಂಘವನು ಮತ್ತ ಶ್ರೀರಂಗ ತಾ ರಕ್ಷಿಸಲಿ ಜಾನುವನು ರಕ್ಷಿಸಿ ಜಾನ್ಹವಿಜನಕಾ | ಉರುಗಳಾ ರಕ್ಷಿಸಲಿ ಉರ್ವೀಶ ಹರಿತಾನು ನಾಭಿಯನು ಶ್ರೀಪದ್ಮನಾಭ ಸಂರಕ್ಷಿಸಲಿ ಹೃದಯಗತ ಶ್ರೀ ಹರಿಯು ಭುಜಗಳನು ರಕ್ಷಿಸಲಿ ಭುಜಗಶಯನಾ||2 ಕಂಠವನು ಮತ್ತ ವೈಕುಂಠಪತಿ ರಕ್ಷಿಸಲಿ ಮುಬವನ್ನು ರಕ್ಷಿಸಲಿ ಮುಕುಟವರ್ಧನ ಹರಿಯು| ಶಿರವನ್ನು ರಕ್ಷಿಸಲಿ ಶಿರಿಯರಮಣನನು ತಾನು ಅಂಗಜನ ಜನಕ ಸರ್ವಾಂಗ ರಕ್ಷಿಸಲಿ| ಜಲಜಾಕ್ಷಿಯರು ಹೀಂಗ ಹಲವು ದೇವತಿಗಳನ ಬಲಗೊಂಡು ಮತ್ತವರ ಬಲದಿ ರಕ್ಷೆಯ ನೀಡಲು| ಜಲಜಮುಖಿ ಜನನಿ ತನ್ನ ಚಲುವ ಬಾಲಕಗ ತಾ ಮೊಲಿಕೊಟ್ಟು ಮಂಚದಲಿ ಮಲಗಿಸಿದಳವನಾ| ಖಳಕಂಸಗಾ ಕಪ್ಪುಗಳ ಕೊಟ್ಟು ನಂದ ತಾ ಇಳದ ಮನಿಯಲಿ ಇರಲು ತಿಳದು ಆ ಸುದ್ದಿ ತನ್ನ ಸ್ಥಳವನ್ನು ಬಿಟ್ಟು ಆ ಸ್ಥಳಕ ಬಂದನು ಪರಮ ಗೆಳೆಯ ವಸುದೇವ ಮನದೊಳಗ ಹಿಗ್ಗುತಲೆ|| 3 ಆರ್ಯಾ ಜಾಣನು ಆತನ ಕಾಣುತಲ್ಯದ್ದನು ಪ್ರಾಣಬರಲು ದೇಹದ ಪರಿಯು| ಪ್ರಣಾಮಮಾಡಿ ಆ ಪ್ರಾಣಯನಪ್ಪಿದ ಪಾಣಿಹಿಡಿದು ಗೋಕುಲ ಧೊರಿಯು|| 1 ಆಮ್ಯಾಲಿಬ್ಬರು ಪ್ರೇಮದಿ ಕುಳಿತರು ಕ್ಷೇಮವಿಚಾರ ಮಾಡುತಲೆ| ಆಮ್ಯಾಲ ಶೌರಿಯು ಕೋಮಲ ಹೃದಯದಿ ತಾ ಮಾತಾಡಿದ ಪ್ರೇಮದಲೆ|| 2 ಪದ:ರಾಗ:ಶಂಕರಾಭರಣ ತಾಳ:ಭಿಲಂದಿ ಸ್ವರ:ಪಂಚಮ ಸಕಲ ಜನರು ನಂದಗೋಪ ಸುಖದಲಿರುವರೆ ಸಖನೆ ನಿನ್ನ ಮನಿಗೆ ಭಾವುಕರು ಬರುವರೆ|| ಪ ದೃಷ್ಟ ವಿಷಯನಾದಿ ನೀ ಅದೃಷ್ಟಯೋಗದಿ| ವೃಷ್ಟಿ ಮಾಡಿದಿ|| 1 ನಿನಗ ಪುತ್ರನಾದ ಸುದ್ದಿ ಎನಗ ಮುಟ್ಟಿತು | ನನಗೆ ಕಡೆಯ ಪುತ್ರನವನೆ ನಿನಗೆ ಒಪ್ಪಿತು|| 2 ಸಕಲರಿಂದ ಕೂಡಿ ಅವನು ಸುಖದಲಿರುವನೆ ಸಕಲ ಜನರಿಗ್ಯವನು ಪ್ರಾಣಸಖನು ಆದನೆ|| 3 ಅಲ್ಯೆ ಗೋಗಳೆಲ್ಲ ರೋಗ ಇಲ್ಲದಿರುವವೆ| ಹುಲ್ಲು ನೀರಿನಿಂದ ಸೌಖ್ಯದಲ್ಲಿ ಇರುವವೆ|| 4 ಚನ್ನಿ ಗಾನಂತಾದ್ರೀಶನ್ನ ನೆನುವರೆ 5 ಆರ್ಯಾ ಛಂದಾಗ್ಯವ ಹೀಗೆಂದ ಮಾತು ಆನಂದಗೋಪ ತಾ ಕೇಳುತಲೆ| ಮುಂದಾ ಶೌರಿಯಮುಂದ ನುಡದನು ಮಂದಹಾಸ್ಯದಲಿ ನಗುವುತಲೆ|| 1 ಪದ, ರಾಗ :ಮುಖರಿ ತಾಳ :ಆದಿ ದುಃಖವು ಸುಖಕಾರಿಯೆ ಪ ಎನಗೆ ತಿಳಿನೀನು|| 1 ಹಿಂದಿನ ದುಃಖ ಹಿಂದೆ ಹೋಯಿತು | ತಿಳಿ ಮುಂದ ನಿನಗೆ ಸೌಖ್ಯವಾದೀತು|| 2 ಚಿಂತಿಮಾಡಲಿ ಬ್ಯಾಡಾ ವಸುದೇವಾ| ಚಲುವಾನಂತಾದ್ರೀಶನೆ ದಯ ಮಾಡಿರುವಾ|| 3 ಆರ್ಯಾ ನಂದ ಗೋಪನಾನಂದ ವಚನಗಳ ಛಂದದಿ ಕೇಳುತ ವಸುದೇವಾ | ಮುಂದ ನುಡದ ಹೀಗಂದು ಮತ್ತ ತ್ವರದಿಂದ ತನ್ನ ಹೃದ್ಗತ ಭಾವಾ || 1 ಪದ ರಾಗ:ಸಾರಂಗ ಆದಿತಾಳ ಸ್ವರ:ಷಡ್ಜ ಭಿಡಯಾ ಬಿಟ್ಟ ಹೇಳುವೆ ಎನ್ನ ನುಡಿಯು ಲಾಲಿಸಿ|| ಪ ಉತ್ತಮ ಕೇಳಿನ್ನಾಮಗನಾ ಉತ್ಪತ್ತಿ ಕಿವಿಯಿಂದ ಕೇಳಿ| ಉತ್ಪನ್ನವಾದಾವು ಬಹಳ ಉತ್ಪಾತಗಳು|| 1 ಕಂಸನ ಅಂಜಿಕೆಯಿಂದ ಸಂಶಯ ಬಿಡುವÀಲ್ಲದಿನ್ನು| ಸಂಸಾರದೋಳ್ಸುಖವು ಸ್ವಲ್ಪಾ ಸಂಶಯವೆ ಭಾಳಾ||2 ಮುಟ್ಟಿತು ಕಂಸಗ ಕಪ್ಪ ಭೆಟ್ಟಿ ಆಯಿತು ನಿಮ್ಮನು| ಘಡ್ಯಾಗಿ ಅನಂತಾದ್ರೀಶನ ಮುಡ್ಡಿ ಭಜಿಸುತ|| 3 ಪದ್ಯ ಯಾದವನ ಮಾತಿಗ್ಯನು ಮೋದವನು ಬಟ್ಟು ನಂದಾದಿಗಳು ಗೋಕುಲದ ಹಾದಿಯನು ಹಿಡಿದು ಪರಮಾದರದಿ ನಡದರು. ಅಗಾಧವಾಗಿಹ ದೇಹ ಹಾದಿಯಲಿ ಬಿದ್ದಿಹುದು ಹಾದಿಯನು ಕಟ್ಟಿ| ಆ ದೇಹ ನೋಡುತ ಅಗಾಧ ಬಟ್ಟವರು ಅಲ್ಯಾದದ್ದು ಮನದಲ್ಲಿ ಶೋಧಿಸ್ಯಂದರು ಹೀಗೆ | ಸಾಧು ವಸುದೇವ ಹುಸಿ ಆದದ್ದು ಉಂಟೇ| 1 ಪರಿ ಅವರು ಕೊಡಲಿಯನು ಕೊಂಡು ಕಡಕಡದು ಈ ದೇಹವನು ಸುಡಲು ದೂರದಲಿಟ್ಟು ಕಡೆ ಬಿಡದೆ ಆಕಾಶಕ್ಕೆ ಅಡರಿತಾಗೆ| ಖಡುಪಾಪಿ ಪೂತನಿಯು ಕುಡಲು ವಿಷ ಮೊಲಿಯನ್ನು ಕುಡುದು ಸದ್ಗತಿಕೊಟ್ಟ ತಡವಿಲ್ಲದಲೆ ಹರಿಯು ದೃಢಭಕ್ತಿಯಿಂದಲೆ ಕಡಿಗೆ ಕ್ಷೀರಾದಿಗಳು ಕೊಡಲು ಸದ್ಗತಿಯನ್ನು ಕುಡವದೇನÀದು|| 2 ಶೌರಿಸಖನಂದ ಪರಿವಾರ ಸಹಿತಾಗಿ ತಾ ಈ ರೀತಿ ಉತ್ಪಾತ ಮೀರಿ ಮನಿಯಲಿ ಬಂದು ಪೂರ್ವದಲಿ ಆಗಿಹ ಅಪೂರ್ವ ವೃತಾಂತವನು ಪೂರ ಕೇಳ್ಯಾಶ್ಚರ್ಯ ಪೂರಿತನು ಆಗಿ ವೈರಿ ಪೂತನಿಯ ಸಂಹಾರಿಯಾ ಕರಕೊಂಡು| ಚಾರುಮುಖ ನೋಡಿ ಸುಖಪೂರನಾದಾ | ಈ ರೀತಿ ಚರಿತವನು ಆರು ಕೇಳುವರು ಅವರ ಘೋರ ದುರ್ಷಟವೆಲ್ಲ ದೂರಾಗಿ ಹೋಗುವದು ಶುಭಚನ್ಹ ಚಾರ್ವನಂತಾದ್ರೀಶ ಮೂರುತಿಯು ಮುಗಿಸಿದಿದು ಭಾಗವತ ದಶಮಸ್ಕಂಧ 3 ಪೂತನಾದಧೋ ನಾಮ ತೃತಿಯೋಧ್ಯಾಯಃ| || ಶ್ರೀ ಕೃಷ್ಣಾರ್ಪಣಮಸ್ತು|| || ಮೂರನೆಯ ಅಧ್ಯಾಯವು ಸಂಪೂರ್ಣ||
--------------
ಅನಂತಾದ್ರೀಶ - ಕಥನಕಾವ್ಯಗಳು