ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡೆಯೇ ತೀರ್ಥವು ನುಡಿ ಪ್ರಸಾದವುಕೊಡುವುದೇ ತಾನೀಗನುಗ್ರಹವುಹಿಡಿವುದೇ ತತ್ವವು ಬಿಡುವುದೇ ವೈರಾಗ್ಯದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವುಘಟ್ಟಿಯಾಗಿಹುದೇ ಗಯವೀಗ ಗೋಕರ್ಣಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ 1 ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿಕಂಡದ್ದೆ ಕಂಚಿ ಕಾಳಹಸ್ತಿಮಂಡೆಗೆರಕೊಂಡುದೇ ಮೈಲಾರ ಮಧುರೆಯುಖಂಡಿಸಿ ತನ್ನತಾ ತಿಳಿದ ಮಹಾತ್ಮನಾ 2 ಸುಧಾ ಶರಧಿಯು ಆತ ಸಾಕ್ಷಾತ್ತು ದೈವವುವಿಧ ವಿಧದ ಜಗ ತಾನೆಯಾದಾತನುಮದಕಾಮ ಕ್ರೋಧ ಪಾಶ ಶೋಕ ವರ್ಜಿತಚಿದಾನಂದ ಗುರುವೇ ತಾನಾದ ಮಹಾತ್ಮನಾ 3
--------------
ಚಿದಾನಂದ ಅವಧೂತರು