ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ಪ ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ್ಯ ಚರಣ ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ ಕಾಶಿ ರಾಮೇಶ್ವರಕೆ ನಡೆದ ಚರಣ1 ಹಾವಿಗೆಯನೊಲ್ಲದೆ ಹಾದಿ ನಡೆದಿಹ ಚರಣ ದೇವಿ ಭಾಗೀರಥಿಗೆ ಇಳಿದ ಚರಣ ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ ಕೋವಿದರು ವಂದಿಸುವ ದಿವ್ಯ ಚರಣ2 ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ ಸೃಷ್ಟಿಗುತ್ತಮ ನದಿಯ ಮಿಂದ ಚರಣ ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ 3 ಶುದ್ಧ ವೈಷ್ಣವರೆಲ್ಲ ಉಜ್ಜಿ ತೊಳೆವ ಚರಣ ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ ಮಧ್ವರಾಯನ ಮತದಿ ಎದ್ದು ತಿರುಗುವ ಚರಣ ವಿದ್ಯೆನಿಧಿ ಗುರುರಾಯ ಬಾಳ್ದ ಚರಣ 4 ಧರಣಿಯನು ಬಲವಂದು ದಣಿದು ಬಂದಿಹ ಚರಣ ಕೈವಲ್ಯ ಪಡೆದ ಚರಣ ವರಾಹತಿಮ್ಮಪ್ಪನಿಹ ಗಿರಿಯನೇರಿದ ಚರಣ ಸ್ಥಿರವಾಗಿ ಉಡುಪಿಯೊಳು ನಿಂದ ಚರಣ 5
--------------
ವರಹತಿಮ್ಮಪ್ಪ
ಗುಣಿಸುವೆ ಗಣನಾಥಾ ಪ ಗುಣಗಣ ಚರಿತನೆ ಗುಣದೊಳು ಮೊದಲಿಗನೆಂದು ಸಾರಿ ಸಾರಿ ನಿನ್ನ ಅ.ಪ. ಎಂದಿಗು ನಿನ್ನ ಪದದ್ವಂದ್ವ ನಂಬಿದ ಕಂದನ ಮಾತ ಲಾಲಿಸೊಇಂದುವರಿಯ ಎನ್ನ ಮಂದಿರದೊಳು ಬಂದು ತಂದೆ ಕರುಣದಿ ಪಾಲಿಸೊ 1 ಮಾರ ತಾಪಕೆ ಶಿಲುಕಿ ಮಾರಿ ಮೋರೆಯ ನೋಡಿ ಮರುಳಾದೆನೊಮಾರನನುಜನೆ ಎನ್ನ ಗಾರುಮಾಡದೆ ಪೊರೆಯೊ ನಿನ್ನ ಪಾದಕೆರಗಿದೆನಯ್ಯ 2 ಉಜ್ಜಿ ಕೂಪವ ನೋಡಿ ಮೆಚ್ಚಿ ಬಲುಪರಿ ಹುಚ್ಚನಾದೆನೊ ದೇವಾ ಇಚ್ಛೆ ಪೂರೈಸೊ ನಮ್ಮಸ್ವಚ್ಛ ತಂದೆವರದಗೋಪಾಲವಿಠಲನರ್ಚಕ 3
--------------
ತಂದೆವರದಗೋಪಾಲವಿಠಲರು
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವಮುಟ್ಟಿದೆನು ಬ್ರಹ್ಮವನು ಮುಕ್ತನಾದೆನುಹುಚ್ಚು ಮೂಳಿ ಹೆಂಡತಿಯ ಪ ಮೆಚ್ಚಿ ನಲಿವ ಮಗನು ಸೊಸೆಯುಉಜ್ಜಿ ಬದುಕನೆಲ್ಲ ನಾನು ಉಡುಗಿ ಕಳೆದೆನು 1 ನೆಂಟರಿಷ್ಟರೆಲ್ಲರನ್ನು ದೂರಮಾಡಿ ಕುಳಿತೆ ನಾನುಹೆಂಟೆಯಂತೆ ಕಂಡೆನಯ್ಯ ಹೇರು ಹೇಮವ 2 ಅಷ್ಟದೇವರನ್ನು ನಾನು ಅಡವಿಗೆಂದು ಅಟ್ಟಿಬಿಟ್ಟೆಕಷ್ಟಪಡಿಪ ಪುರೋಹಿತನ ಕಡೆಗೆ ತಳ್ಳಿದೆ 3 ವಾರವಾರ ನೇಮವನ್ನು ಒಲೆಯನೀಗ ಹೊಗಿಸಿದೆದಾರಿ ಹಚ್ಚಿಸಿದೆನು ಕುಲವ ಶೀಲವ್ರತಗಳ 4 ಮತಗಳೆಂಬ ವಾದವನ್ನು ಮಣ್ಣುಪಾಲು ಮಾಡಿದೆನುಸತತ ಚಿದಾನಂದ ಬ್ರಹ್ಮ ಸಾಕ್ಷಿಯಾದನು 5
--------------
ಚಿದಾನಂದ ಅವಧೂತರು