ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ 1 ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ ದಾಸ ನಾನು ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು 2 ತ್ರಿವಿಡಿ ತಾಳ ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು ಸೃಷ್ಟಿಯೊಳಗೆ ಬಹು ಧನವಂತರ ಮನೆಯ ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು 3 ಅಟ್ಟತಾಳ ಕುರುಡ ದಾಸನು ನಾನು ಕುಂಟ ದಾಸನು ನಾನು ಹುರಡಿಗೆ ಮಾಡುವ ಹುರಳಿಲ್ಲದ ದಾಸ ಸರಿಯವರನು ಕಂಡು ಮರಗುವ ದಾಸನು ಎರಡು ಕಡೆ ಕೆಟ್ಟ ಭರಡಿ ದಾಸನು ನಾನು ಗರಕೆ ಕರದಾರೆ ಹಿಗ್ಗುವ ದಾಸನು ನಾನು 4 ಆದಿತಾಳ ಹೀನ ದಾಸನು ನಾನು, ನೀಚ ದಾಸನು ನಾನು ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು ಮಾನವಿಲ್ಲದೆ ಅಪಮಾನ ದಾಸ ನಾನು ದಾನ ಧರ್ಮವಿಲ್ಲದ ಹೀನ ದಾಸನು ನಾನು ಅನಂತ ಜನನಕ್ಕೆ ಹೊಲೆದಾಸನು ನಾನು ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು 5 ಜತೆ ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ 6
--------------
ವಿಜಯದಾಸ
ನಂಬಿ ನಡಿಯಿರೋ | ನಂಬಿ ನಡಿಯಿರೋ | ಗುರುಪಾದವಾ ನಡಿಯಿರೋ ನಂಬಿ ನಡಿಯಿರೋ | ನೇಮದಲಿ ಅತಿ | ಪ್ರೇಮದಲಿ ಪ ತಿರುಗುವರೇ ನೀ ಮರಗುವರೇ | ಇಹದೇನೋ ಗುಣವಹುದೇನೋ | ತಾರಕರಿಲ್ಲ ಪೋಷಕರಿಲ್ಲಾ | ಸುವರುಂಟೆ ಬೆಳಗುವರುಂಟೆ1 ಬಾಳಿ ತೊಳಲಿ ಘನ ಬಳಲಿ | ಬಂದೀಗ ನೀ ನಿಂದೀಗ | ಹಾದಿಯನು ತಿಳಿ ಭೇದಿಯನು | ಶರಣವನು ಪಿಡಿ ಚರಣವನು 2 ನಿರ್ಜರ ತರುವೆ ಸರ್ವರ | ನಿಜದರುವೆ ಕರುಣವಗರವೇ | ಪಾಡುತಲೀ ನಲಿದಾಡುತಲಿ | ಡ್ಯಾಡಿ ನಮನವನೇ ಮಾಡಿ | ಸ್ವಾನಂದದ ಸುಖ ಸೂರ್ಯಾಡಿ | 3 ಮೌಳಿ ಉಚ್ಛಿಷ್ಟ ಚಾಂಡಾಳಿ | ಳೆಂಬೋಪಾಸನ ಧ್ಯಾಸನಾ | ಹಾದಿಲಿ ನಡೆವರೇ ನೋಡುವರೇ | ಅಮೃತ ಕೊಂಡಂತಾಯಿತು ಗುಣಹೇತು 4 ತಿಗಳ್ಯಾಕೆ ಚಿಂತಿಗಳ್ಯಾಕೆ | ಆಚರಿಯಾ ನೀ ಕೇಳರಿಯಾ | ಗೋವಿಂದಾ ಶ್ರೀ ಮುಕ್ಕುಂದಾ | ಇಹಪರವು ನಿಜ ಸುಖದರವು 5 ಮನದೊಳಗೆ ಈ ಜÀನದೊಳಗೆ | ಡಂಭವ ದೋರುತ ಎರೆಯುತ | ತೋರುವುದಲ್ಲಾ ಗುಣಸಲ್ಲಾ | ಕಿಡಿಸುವರೇ ನೀ ಧರಿಸುವರೇ6 ವಾರ್ತೆಗಳಾ ಮನೆವಾರ್ತೆಗಳಾ | ಪ್ರಾಣವನು ಅಪಾನವನು | ಹಾರಿಸಿದೀ ನೀ ತೋರಿಸಿದೀ | ಏನಾದರೂ ಏನಿಲ್ಲಾ ಸಮ್ಯಕ್ | ಜ್ಞಾನವಾಗದೆ ಸಿಲ್ಕುವದೀ 7 ಸೌಮ್ಯದಲಿ ನಿಷ್ಕಾಮ್ಯದಲಿ | ಸವನಿಟ್ಟು ರತಿಗಳನಿಟ್ಟು | ನಿಲದ್ಹಾಂಗ ಚಲಿಸದಲ್ಹಾಂಗ | ಗುರುವಾಜ್ಞೆಯಲಿ ಅಭಿಜ್ಞೆಯಲಿ 8 ಭಕ್ತಿಯಲಿ ನಿಜವೃತ್ತಿಯಲಿ | ಮಹೀಪತಿಯಾ ಸುಚರಿತೆಯಾ | ಪಡಕೊಂಡವರನವರಿತಾ ಸುಖಭರಿತಾ | ಭವ ಸುಗಮದಲಿ ನೀ ಬೇಗದಲಿ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೈಸಲಾರೆನೆಗೋಪಿನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
--------------
ಪುರಂದರದಾಸರು