ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಎಂಥ ಸವಿ ಇಹ್ಯದು ಶ್ರೀಹರಿ ನಾಮ ಮಧುಗಿಂತ ಮಧುವಿಹ್ಯದು ಪ ಅಧಮ ಮನಸೇ ನೀನು ಸ್ವಾದ ಸವಿದುನೋಡೋ ಅಧಿಕ ಅಮೃತಕಿಂತ ಮಾಧುರ್ಯ ತುಂಬಿಹ್ಯದು ಅ.ಪ ಸುಧೆಗಿಂತ ಸುಧೆಯಿಹ್ಯದು ಮೃಷ್ಟಾನ್ನದ ಮೃದುಗಿಂತ ಮೃದುವಿಹ್ಯದು ವದನದೊಳಿಟ್ಟರೆ ವಿಧವಿಧದ್ಹಸುತೃಷೆ ಸದೆದು ಸದಮಲಸುಖ ಒದಗಿಸಿ ಕೊಡುವುದು 1 ಶುಚಿಗಿಂತ ಶುಚಿಯಿಹ್ಯದು ಹೆಚ್ಚಿಗೆ ಹೆಚ್ಚು ರುಚಿಗಿಂತ ರುಚಿಯಿದ್ಯದೋ ಉಚ್ಚಿಷ್ಟರಾಗದೆ ಬಚ್ಚಿಟ್ಟು ಸುರಿವರ್ಗೆ ನಿಶ್ಚಲಸುಖಪದ ಮೆಚ್ಚಿ ತಾ ಕೊಡುವುದು 2 ಶಾಶ್ವತಸುಖವೀಯ್ವುದೋ ಭವರೋಗ ಕೌಷಧ ಮಾಗಿಹ್ಯದೋ ದಾಸಜನರಿಗನುಮೇಷ ಸವಿಯುದೋರಿ ಪೋಷಿಸುತಿರುವುದು ಶ್ರೀಶ ಶ್ರೀರಾಮನಾಮ 3
--------------
ರಾಮದಾಸರು
ಏನೆಂದೆ ಏನೆಂದೆ ಪ ನಾನೇನೆಂದೆನೆ ಗಾನಲೋಲಗವ ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ ಕಾಲು ಇಲ್ಲದ ಹೆಳವನೆಂದೆ ತಲೆಯ ಕಾಣದ ಕುರೂಪಿಯೆಂದೆ ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ1 ನಾಲಗೆ ಚಾಚಿ ರಕ್ತ ಕುಡಿದನೆಂದೆ ತಿಳಿದು ಜನನಿತಲೆ ಕಡಿದವನೆಂದೆ ಲಲನೆಯೊಡನೆ ವನವಾಸಕೆ ಪೋಗಿ ಬಳಲಿ ಬಳಲಿ ಬಾಯಾರಿದನೆಂದೆ 2 ಗೊಲ್ಲರ ಕುಲದಲಿ ಹುಟ್ಟಿದನೆಂದೆ ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ ಗೊಲ್ಲರ ಅಕಳ ಕಾಯುವ ಚರನೆಂದೆ ಫುಲ್ಲನಲನೆಯರ ವಸ್ತ್ರಗಳ್ಳನೆಂದೆ 3 ಬತ್ತಲೆ ಕುಣಿಕುಣಿದಾಡಿದನೆಂದೆ ಸತ್ಯಭ್ರಷ್ಟ ಮಹಕಲಿಯು ಈತನೆಂದೆ ಮತ್ತೆ ವೈಕುಂಠದಿ ಒದೆಸಿಕೊಂಡು ಇವ ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ 4 ಕುದುರೆ ನಡೆಸಿ ಒಬ್ಬನುಳಿಸಿದನೆಂದೆ ಕದನದ್ವೊಂಚಿಸಿ ಒಬ್ಬನಳಿದವನೆಂದೆ ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು ಮುದುಕನಾಗಿ ಭಿಕ್ಷದಶ್ವ ತಂದವನೆಂದೆ 5 ಸೋದರಮಾವನ ಕೊಂದವನೆಂದೆ ಸೋದರಳಿಯರ ಜೀವ ಹೊಡೆಸಿದನೆಂದೆ ಭೇದದಿಂದ ಸಾಧು ಹನುಮನ ಸೋಲಿಸಿ ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ 6 ಜಾರ ಸಿರಿ ಸೊರೆಗೊಂಡವನೆಂದೆ ಮೀರಿದಂಥ ಮಹಮಾಯದ ಹೆಣ್ಣೆಂದೆ ಈರೇಳುಲೋಕದ ಕಪಟನಾಟಕನೆಂದೆ 7 ಮೊಚ್ಚೆಗಾರ ಕೈಯೊಳುಂಡವನೆಂದೆ ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ 8 ಪುಲ್ಲನಯನ ಸಿರಿರಾಮನ ಮುಂದೆ ಅಲ್ಲದ ಮಾತುಗಳ್ನಾನೇನೆಂದೆ ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ 9
--------------
ರಾಮದಾಸರು
ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ ಗುಷ್ಟ ಭಜಿಸುವ ನಿಷ್ಠ ಜನರ ಉಚ್ಚಿಷ್ಟ ಎನಗದು ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ಪ ನರಲೋಕದ ಸುಖ ಪರಿಪರಿಯಲ್ಲಿ ಅರಿದೆನದರೊಳು ಪರಮ ಸೌಖ್ಯ ಎಳ್ಳರೆ ಅನಿತಿಲ್ಲ ಬರಿದೆ ಜನನ ಮರಣ ಪರಿಯಂತಾ ದುರಿತ ಧರೆಯೊಳಗೆ ನಿಂದಿಸಲಾರೆ ಸಾಕು ಶರಣು ಹೊಕ್ಕೆನು ಕರುಣಪಾಂಗನೆ ಕರವಿಡಿದು ಸಲಹೋ 1 ಆವುದುಂಟದು ದೇವ ಮಾಣಿಸು ಈ ವರವ ಕೊಂಡು ನಾ ಒಂದನು ವಲ್ಲೆ ಭಾವಶುದ್ಧ ವಾಕ್ಯವೆ ನಿಶ್ಚಯವೊ ಮಾನವ ಕಾವ ನೈಯನೆ ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ 2 ಹಡಗದೊಳಗಿಂದ ತಡಿಯದೆ ಬಂದಾ ಕಡಗೋಲ ನೇಣ ಪಿಡಿದ ಪಡುವಲಾ ಗಡಲ ತೀರದ ಉಡುಪಿನಲಿ ನಿಂದ ಅಡಿಗಡಿಗೆ ಪೂಜೆ ಬಿಡದೆ ಯತಿಗಳಿಂ ಉಘಡ ವಿಜಯ ವಿಜಯವಿಠ್ಠ ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ3
--------------
ವಿಜಯದಾಸ
ನೊಂದೆ ನಾ ಹರಿಯೆನ್ನದೆ ಪ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಅ ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ 1 ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿಹೊಲೆ ಗೂಡಿನೊಳು ಪೊಗಿಸಿ ತಲೆ ಹುಳಕ ನಾಯಂತೆಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದುಕಳವು ಹಾದರ ಪಂಚಪಾತಕಂಗಳ ಮಾಡಿನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆನಳಿನ ಲೋಚನನೆ ನೀ ಎನ್ನ ಕೈ ಬಿಡದೆ 2 ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ-ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದುಬಿಟ್ಟು ಪ್ರಾಣಂ ಪೋಗೆ ಪೆಣನೆಂದು ಮೂಲೆಯೊಳುಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲುಕಟ್ಟಳೆಯ ಕಾಣಿಸಿದರಯ್ಯ ಹರಿಯೆ 3 ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲುನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿಹಲವಾರು ಸಲ ಅತ್ತ ಅಶ್ರುಜಲವನು ಕೂಡಿಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿನೆಲೆ ಯಾವುದೀ ದೇಹಕೆ ನರಹರಿಯೆ4 ಸತಿ ಇಂದು ಕಾಯ್ವರದಾರುದಂದುಗವನಿದನೆಲ್ಲ ನೀಬಲ್ಲೆ ನಾನರಿಯೆತಂದೆ ನೆಲೆಯಾದಿಕೇಶವನೆ ನಿನ್ನಯ ಪಾದದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ 5
--------------
ಕನಕದಾಸ