ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರವಧಿ ಬಲ ಲಾವಣ್ಯ ಸಂಪನ್ನ ಪ ಚರಣ ಸೇವಕನೆಂದೆನಿಸಲೋ ಎನ್ನ ಅ.ಪ ನಿಖಿಲ ಜಗಂಗಳ ಜನನಾದಿಗಳಿಗೆ ಅಖಿಲ ಕಾರಣನೇ ಸುಖಮಯನೇ ಶುಕಭಾಷಣದಿಂ ಪೊಗಳುತಿಹನೋ ನಿನ್ನ ಭಕುತಿಯ ಮಾರ್ಗವ ತೋರಿ ಪೊರೆಯೆಲೋ 1 ಹೆಚ್ಚಿನ ಜ್ಞಾನದ ಕೆಚ್ಚೆನಗಿಲ್ಲವೊ ಉಚ್ಚಪದವು ನಿನ್ನ ಇಚ್ಛೆಯಿಂದಲ್ಲವೇ ಹುಚ್ಚನಾದೆನೊ ಜನಮೆಚ್ಚುಗೆ ಬಯಸುತ ಅಚ್ಯುತ ಎನ್ನ ಉಪೇಕ್ಷಿಸದಿರೆಲೊ 2 ನಿನ್ನನು ಪೂಜಿಸಿ ಧನ್ಯ ನಾನಾದೆನೊ ಎನ್ನ ಸತ್ಕಾಲವು ಮಾನ್ಯವಾಯಿತೊ ಇನ್ನು ನಿನ್ನಯ ಪ್ರಸನ್ನತೆಯಲ್ಲದೆ ಅನ್ಯ ವಿಷಯಗಳ ಬಯಸುವುದಿಲ್ಲವೊ 3
--------------
ವಿದ್ಯಾಪ್ರಸನ್ನತೀರ್ಥರು