ಹರಿಲೀಲೆ ಹರಿಲೀಲೆ ಪ
ಜಗದೊಳು ಸುಜನರು ಬಳಲುತಲಿರುವುದು ಅ.ಪ
ಉಚ್ಚಕುಲದಿ ಪುಟ್ಟಿ ಸ್ವಚ್ಛ ಜ್ಞಾನದಿಂದ
ಅಚ್ಯುತನಂಘ್ರಿಯ ಪೂಜಿಸುತಿರಲು
ತುಚ್ಛ ಜನರುಗಳು ಸ್ವೇಚ್ಭೆಯಿಂದಲಿ
ಹುಚ್ಚು ಹರಟೆಗಳ ಹರಟುವುದೆಲ್ಲವು 1
ಪಂಡಿತರೆಲ್ಲ ಅಖಂಡ ಕಲೆಗಳಿಗೆ
ಮಂಡನರೆನಿಸಿ ಭೂಮಂಡಲದಿ
ಭಂಡಿ ಭಂಡಿ ಧನರಾಶಿಗಳಿರಲಾಗಿ
ಪಿಂಡಕ್ಕಿಲ್ಲದೆ ತಿರುಗುತಲಿರುವುದು 2
ಮನವ ತೊರೆಯುತ ಕಾಮಿನಿಯರುಗಳು
ಗಾನವ ಮಾಡಲು ಆನಂದಿಪರು
ಜ್ಞಾನಿ ದಾಸರುಗಳು ಭಕುತಿಯಿಂದ ಹರಿ
ಗಾನವ ಮಾಡಲು ಮಾನಸದಿರುವುದು 3
ಪನ್ನಗಶಯನನು ತನ್ನ ಭಕುತರಿಗೆ
ಹೆಣ್ಣು ಹೊನ್ನು ಮಣ್ಣಿನ ಆಸೆ
ಯನ್ನು ಬಿಡಿಸಿ ಅವರನ್ನು ಉದ್ಧರಿಸಿ ಪ್ರ
ಸನ್ನನಾಗುವೆ ನಾನೆನ್ನುತ ಪೇಳ್ವುದು 4